Headlines

ಐಪಿಎಲ್‌ಗೆ ಸಡ್ಡು ಹೊಡೆಯಲು ಹೋದ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮುಖಭಂಗ!

ಐಪಿಎಲ್‌ಗೆ ಸಡ್ಡು ಹೊಡೆಯಲು ಹೋದ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮುಖಭಂಗ!

ಐಪಿಎಲ್‌ಗೆ ಸಡ್ಡು ಹೊಡೆಯಲು ಹೋದ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮುಖಭಂಗ!

ಲಾಹೋರ್‌: ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಸಡ್ಡು ಹೊಡೆದು ಪಾಕಿಸ್ತಾನ ಸೂಪರ್ ಲೀಗ್ ಆಯೋಜಿಸಲು ಹೊರಟಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ಇದೀಗ ಜಾಗತಿಕ ಮಟ್ಟದಲ್ಲಿ ಮುಖಭಂಗವಾಗಿದೆ. ಅಷ್ಟಕ್ಕೂ ಏನಿದು ಘಟನೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

19ನೇ ಸೀಸನ್‌ ಇಂಡಿಯನ್ ಪ್ರೀಮಿಯರ್ ಲೀಗ್ ಇದೇ ಮಾರ್ಚ್ 28ರಿಂದ ಆರಂಭವಾಗಲಿದೆ. ಈ ಟೂರ್ನಿಗೂ ಎರಡು ದಿನ ಮುಂಚಿನವಾಗಿ ಪಾಕಿಸ್ತಾನದಲ್ಲಿ ಪಾಕಿಸ್ತಾನ ಪ್ರೀಮಿಯರ್ ಲೀಗ್ ಆಯೋಜಿಸುವ ಮೂಲಕ ಬಿಸಿಸಿಐಗೆ ಸಡ್ಡು ಹೊಡೆಯಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮುಂದಾಗಿದೆ.

ಒಂದು ಲೆಕ್ಕಾಚಾರದ ಪ್ರಕಾರ, ಐಪಿಎಲ್‌ಗೆ ಪಾಕಿಸ್ತಾನ ಸೂಪರ್‌ ಲೀಗ್ ಹೋಲಿಕೆ ಮಾಡುವುದು ಹಾಸ್ಯಾಸ್ಪದ. ಹೀಗಿದ್ದೂ ಐಪಿಎಲ್‌ಗೆ ಚಾಲೆಂಜ್ ಮಾಡಲು ರೆಡಿಯಾಗಿದ್ದ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ಗೆ ಇದೀಗ ಜಾಗತಿಕ ಮಟ್ಟದಲ್ಲಿ ವ್ಯಾಪಕ ಮುಖಭಂಗವಾಗಿದೆ.

ಹೌದು, ಮಾರ್ಚ್ 26ಕ್ಕೆ ಆರಂಭಗೊಳ್ಳಲಿರುವ ಪಾಕಿಸ್ತಾನ ಸೂಪರ್‌ ಲೀಗ್‌(ಪಿಎಸ್ಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್‌, ಸ್ಟೀವ್‌ ಸ್ಮಿತ್‌, ಮಾರ್ನಸ್ ಲಬುಶೇನ್‌ ಸೇರಿ ಪ್ರಮುಖರು ಆಡಲು ಸಜ್ಜಾಗಿದ್ದಾರೆ.

ಆದರೆ ಪಾಕ್‌-ಆಫ್ಘನ್‌ ಸಂಘರ್ಷ ಹಿನ್ನೆಲೆಯಲ್ಲಿ ಪಾಕ್‌ನ ಕೆಲ ನಗರಗಳನ್ನು ಉಲ್ಲೇಖಿಸಿ, ಅಲ್ಲಿಗೆ ಪ್ರವೇಶಿಸದಂತೆ ತನ್ನ ಪ್ರಜೆಗಳಿಗೆ ಆಸ್ಟ್ರೇಲಿಯಾ ಸರ್ಕಾರ ಸೂಚಿಸಿದೆ. ಆಟಗಾರರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಲು ಅನುಮತಿ ನೀಡಿದೆಯಾದರೂ, ದಾಳಿ ನಡೆಯಬಲ್ಲ ಸ್ಥಳಗಳಿಗೆ ಹೋಗದಂತೆ ಎಚ್ಚರಿಕೆ ನೀಡಿದೆ. ಅದರರ್ಥ ಪಾಕಿಸ್ತಾನ ಸೇಫ್ಟಿಯಲ್ಲ ಎನ್ನುವುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ.

ಇದರಲ್ಲಿ ಪೇಶಾವರ ಕೂಡಾ ಒಳಗೊಂಡಿದೆ. ಆದರೆ ಪೇಶಾವರದಲ್ಲಿ ಪಂದ್ಯಗಳು ನಿಗದಿಯಾಗಿರುವುದರಿಂದ ಆಸ್ಟ್ರೇಲಿಯಾ ಆಟಗಾರರು ಅಲ್ಲಿಗೆ ತೆರಳಲಿದ್ದಾರೆಯೇ ಅಥವಾ ಸರ್ಕಾರದ ಸೂಚನೆ ಪಾಲಿಸಿ ಪ್ರಯಾಣ ನಿರಾಕರಿಸಲಿದ್ದಾರೆಯೇ ಎಂಬ ಕುತೂಹಲವಿದೆ. ಒಂದು ವೇಳೆ ಈ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದರೆ, ಪಾಕ್‌ಗೆ ಇನ್ನಷ್ಟು ಮುಖಭಂಗ ಎದುರಾಗಲಿದೆ.

ಈ ಮೊದಲು ಪಿಎಸ್‌ಎಲ್‌ಗೆ ಗುಡ್ ಬೈ ಹೇಳಿ ಐಪಿಎಲ್ ಸೇರಿರುವ ಬ್ಲೆಸ್ಸಿಂಗ್ ಮುಜರಬಾನಿ ಸೇರಿದಂತೆ ಟೂರ್ನಿಗೆ ಕೈ ಕೊಡುವ ಆಟಗಾರರಿಗೆ ಒಂದು ವರ್ಷ ಬದಲು ಐದು ವರ್ಷ ನಿಷೇಧ ಹೇರಬೇಕು ಎಂದು ಪಾಕ್ ಮಾಜಿ ಕ್ರಿಕೆಟಿಗರು ಆಗ್ರಹಿಸಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದರೆ, ಪಿಎಲ್‌ಎಲ್‌ಗೆ ಹಲವು ವಿದೇಶಿ ಆಟಗಾರರು ಕೈಕೊಡುವ ಸಾಧ್ಯತೆ ದಟ್ಟವಾಗಿದೆ.

Source link

Leave a Reply

Your email address will not be published. Required fields are marked *