
11ನೇ ಆವೃತ್ತಿಯ ಪಾಕಿಸ್ತಾನ ಸೂಪರ್ (PSL 2026) ಆರಂಭಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಸಮಸ್ಯೆಗಳು ಕಡಿಮೆಯಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಒಂದೆಡೆ ಪಿಸಿಬಿ, ವಿದೇಶಿ ಆಟಗಾರರ ಅಲಭ್ಯತೆ ದೊಡ್ಡ ತಲೆನೋವಾಗಿ, ಮತ್ತೊಂದೆಡೆ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ದೇಶದಲ್ಲಿ ಉಂಟಾಗಿರುವ ಅನಿಲ ಬಿಕ್ಕಟ್ಟು ಮತ್ತು ಅಪ್ಘಾನಿಸ್ತಾನದ ದಾಳಿಯು ಮತ್ತೊಂದು ಆತಂಕಕಾರಿಯಾಗಿದೆ. ಇದೀಗ ಇದೆಲ್ಲದರ ನಡುವೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯೊಂದು ವಿದೇಶಿ ಆಟಗಾರರು ಈ ಪಂದ್ಯಾವಳಿಯಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲಿ ನಡೆಯುವ ವೇಳೆ ವಿದೇಶಿ ಆಟಗಾರರಿಗೆ ಪ್ರಾಣಾಪಾಯ ಎದುರಾದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂಬ ಬೆದರಿಕೆಯೊಡ್ಡಿದೆ.
ಜಮಾತ್-ಉಲ್-ಅಹ್ರಾರ್ ಬೆದರಿಕೆ
ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದಿಂದಾಗಿ ಇಂಧನ ಕೊರತೆಯಿಂದಾಗಿ ಪಿಎಸ್ಎಲ್ ಪಂದ್ಯಾವಳಿಯನ್ನು ಕೇವಲ 2 ಕ್ರೀಡಾಂಗಣಗಳಲ್ಲಿ ಪ್ರದರ್ಶಿಸಲು ಪಿಸಿಬಿ ತೀರ್ಮಾನಿಸಿದೆ. ಇದೆಲ್ಲದರ ನಡುವೆ ಜಮಾತ್-ಉಲ್-ಅಹ್ರಾರ್ ಎಂಬ ಪಾಕಿಸ್ತಾನದ ಉಗ್ರ ಸಂಘಟನೆಯೊಂದು, ‘ವಿಶ್ವಾದ್ಯಂತ ಎಲ್ಲಾ ಕ್ರಿಕೆಟ್ ಮಂಡಳಿಗಳು ತಮ್ಮ ಆಟಗಾರರನ್ನು ಪಾಕಿಸ್ತಾನಕ್ಕೆ ಕಳುಹಿಸುವಂತೆ ನಾವು ಸಲಹೆ ನೀಡುತ್ತೇವೆ.
ಈ ಸಲಹೆಯನ್ನು ಮೀರಿದ ವಿದೇಶಿ ಆಟಗಾರರು ಪಾಕಿಸ್ತಾನಕ್ಕೆ ಬಂದು ಪಂದ್ಯಾವಳಿಯಲ್ಲಿ ಭಾಗವಹಿಸಿದರೆ, ಇಲ್ಲಿ ಏನಾದರೂ ಸಂಭವಿಸಿದರೆ, ನಾವು ಜವಾಬ್ದಾರರಾಗಿರುವುದಿಲ್ಲ. ನಾವು ಸೂಚನೆ ನೀಡಿದ್ದೇವೆ. ಇದರ ಆಟಗಾರರು ಪಂದ್ಯಾವಳಿಯಿಂದ ಹಿಂದೆ ಸರಿಯದಿದ್ದರೆ, ಪಂದ್ಯಗಳು ನಡೆಯದಂತೆ ತಡೆಯಲು ನಾವು ಏನು ಬೇಕಾದರೂ ಮಾಡುತ್ತೇವೆ. ಆಟಗಾರರು ಮೈದಾನಕ್ಕೆ ಪ್ರವೇಶಿಸುವುದನ್ನು ತಡೆಯಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ’ ಎಂಬ ಬೆದರಿಕೆಯನ್ನು ಹಾಕಿದೆ.
ಬೆದರಿಕೆಗೂ ಬಗ್ಗದ ಬಾಂಗ್ಲಾದೇಶ
ಭಯೋತ್ಪಾದಕ ಸಂಘಟನೆಗಳು ಆಟಗಾರರನ್ನು ಕೊಲ್ಲುವ ಬೆದರಿಕೆ ಹಾಕಿದ್ದರೂ ಸಹ, ಬಾಂಗ್ಲಾದೇಶ ತನ್ನ ಆಟಗಾರರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಲು ಅನುಮತಿ ನೀಡಿದೆ. ಬಾಂಗ್ಲಾದೇಶದ ಆಟಗಾರರು ಪಿಎಸ್ಎಲ್ನಲ್ಲಿ ಭಾಗವಹಿಸುತ್ತಾರೆ ಎಂದು ಬಾಂಗ್ಲಾದೇಶದ ಆಟಗಾರ ವ್ಯವಸ್ಥಾಪಕರು. ಬಾಂಗ್ಲಾದೇಶದ ವೇಗದ ಬೌಲರ್ ನಹಿದ್ ರಾಣಾ ಕೂಡ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುತ್ತಿರುವ ಬಗ್ಗೆ ಪೋಸ್ಟ್ ಮಾಡಲಾಗಿದೆ. ಮುಸ್ತಾಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ ಮತ್ತು ಪರ್ವೇಜ್ ಹುಸೇನ್ ಎಮನ್ ಪಿಎಸ್ಎಲ್ನಲ್ಲಿ ಭಾಗವಹಿಸಲಿದ್ದಾರೆ. ಮುಸ್ತಾಫಿಜುರ್ ರೆಹಮಾನ್ ಮತ್ತು ಪರ್ವೇಜ್ ಹುಸೇನ್ ಲಾಹೋರ್ ಖಲಂದರ್ ತಂಡ ಭಾಗವಾಗಿದ್ದಾರೆ. ಶೋರಿಫುಲ್ ಇಸ್ಲಾಂ, ನಹಿದ್ ರಾಣಾ ಮತ್ತು ತಂಜಿದ್ ಹಸನ್ ತಮೀಮ್ ಪೇಶಾವರ್ ಜಲ್ಮಿ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಉಳಿದಂತೆ ರಿಯಾದ್ ಹುಸೇನ್ ರಾವಲ್ಪಿಂಡಿ ತಂಡಲ್ಲಿದ್ದಾರೆ.
ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ