ನೈರ್ಮಲ್ಯ ಕಾರ್ಯಕರ್ತೆಯರು (ನೈರ್ಮಲ್ಯ ಕೆಲಸಗಾರ) ಪ್ರಾಮಾಣಿಕತೆಗೆ ಮಾದರಿಯಾಗಿದೆ. ಅವರು ಮಾಡಿದ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಈಗಿನ ಕಾಲದಲ್ಲಿ ರಸ್ತೆಯಲ್ಲಿ ಒಂದು ರೂಪಾಯಿ ಸಿಕ್ಕರು ಬಿಡುವುದಿಲ್ಲ. ಅಂತಹದರಲ್ಲಿ ಇಲ್ಲೊಬ್ಬರು ನೈರ್ಮಲ್ಯ ಕಾರ್ಯಕರ್ತೆ ತನಗೆ ಸಿಕ್ಕ ದೊಡ್ಡ ಮೊತ್ತವನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದ್ದಾರೆ. ಅವರ ಪ್ರಾಮಾಣಿಕತೆ ಎಲ್ಲರಿಗೂ ಮಾದರಿಯಾಗಿದೆ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ. ಸ್ವಾರ್ಥ ಜನರ ನಡುವೆ ಇಂತಹ ವ್ಯಕ್ತಿಗಳು ಸಿಗುವುದು ಅಪರೂಪ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆಗೆ ಸಿಕ್ಕ 10 ಲಕ್ಷ ರೂಪಾಯಿ ಹಣದ ಬ್ಯಾಗ್ ಅನ್ನು ವಾಪಸ್ ಕಳುಹಿಸಲಾಗಿದೆ.
ನವೆಂಬರ್ 20 ರಂದು ಬೆಳಿಗ್ಗೆ 7 ಗಂಟೆಗೆ ಅಂಜು ಮಾನೆ ಎಂಬ ನೈರ್ಮಲ್ಯ ಕಾರ್ಯಕರ್ತೆ ಪುಣೆಯ ಸದಾಶಿವ ಪೀಠದಲ್ಲಿ ಕೆಲಸ ಮಾಡುವ ವೇಳೆ, ಬ್ಯಾಗ್ ಬಗ್ಗೆ ದೂರು ನೀಡಲಾಗಿದೆ. ಅದರಲ್ಲಿ ಏನಿದೆ ಎಂದು ಆಸಕ್ತಿಯಿಂದ ಹತ್ತಿರ ಹೋಗಿ ನೋಡಿದಾಗ ಅವರಿಗೊಂದು ಅಚ್ಚರಿ ಕಾದಿತ್ತು. ಅದಕ್ಕೆ ಪೂರಕಗಳ ಜೊತೆಗೆ 10 ಲಕ್ಷ ರೂ. ಹಣ ಇತ್ತು. ಮಹಿಳೆ ತಕ್ಷಣ ಸಂಬಂಧಪಟ್ಟವರಿಗೆ ಕಳುಹಿಸಿದ್ದಾರೆ. ಈ ಬಗ್ಗೆ ಮಹಿಳೆ ಮಾಧ್ಯಮಗಳು ಹಂಚಿಕೊಂಡಿದ್ದಾರೆ. “ನಾನು ಪ್ರತಿದಿನ ಬೀದಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ಮನೆಯೊಂದರ ಬಳಿ ಈ ಬ್ಯಾಗ್ ಸಿಕ್ಕಿದೆ. ತಕ್ಷಣ ನನಗೆ ತಿಳಿದ ಮನೆಯವರ ಬಳಿ, ಇದು ನಿಮ್ಮ ಬ್ಯಾಗ ಎಂದು ಕೇಳಿದೆ. ಅದರಲ್ಲಿ ಒಬ್ಬರು ಈ ಬ್ಯಾಗ್ ನನ್ನದು ಎಂದು ಹೇಳಿದರು. ಇದು ಅವರ ಬ್ಯಾಗ್ ಎಂದು ದೃಢಪಡಿಸಿದ ನಂತರ ಅವರಿಗೆ ಬ್ಯಾಗ್ ಅನ್ನು ಕಳುಹಿಸಿದ್ದೇನೆ” ಎಂದು ಹೇಳಿದರು.
ಇದನ್ನೂ ಓದಿ: ರಸ್ತೆ ಮಧ್ಯೆ ಪ್ಯಾಂಟ್ ಬಿಚ್ಚಿ ಗುಪ್ತಾಂಗ ತೋರಿಸಿದ ಯುವಕನಿಗೆ ಪೊರಕೆಯಿಂದ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ
ವೈರಲ್ ಪೋಸ್ಟ್:

ಇದೀಗ ಈ ಮಹಿಳೆಯ ಪ್ರಾಮಾಣಿಕತೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ವ್ಯಕ್ತಿಗಳಿಂದ ಈ ಸಮಾಜದಲ್ಲಿ ಬದಲಾವಣೆಯಾಗಲು ಸಾಧ್ಯ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ. ನೆಟ್ಟಿಗರು ಮಹಿಳೆ ಕಾರ್ಯಕ್ಕೆ ಅವರನ್ನು ಅಭಿನಂದಿಸುವಂತೆ ಹೇಳಿದ್ದಾರೆ. ಬ್ಯಾಗ್ ವಾಪಸು ನೀಡಿದ ಆ ಬ್ಯಾಗ್ನ ಮಾಲೀಕ ಅವರಿಗೆ ಸೀರೆ ಮತ್ತು ಒಂದಿಷ್ಟು ಹಣವನ್ನು ನೀಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ