Headlines

ಕೇಳಿಬಂದ ಗಂಭೀರ ಆರೋಪಕ್ಕೆ ಸ್ಪಷ್ಟನೆ ಕೊಟ್ಟಿದ್ದ ಪುನೀತ್ ರಾಜ್​​ಕುಮಾರ್

ಕೇಳಿಬಂದ ಗಂಭೀರ ಆರೋಪಕ್ಕೆ ಸ್ಪಷ್ಟನೆ ಕೊಟ್ಟಿದ್ದ ಪುನೀತ್ ರಾಜ್​​ಕುಮಾರ್


ಕೇಳಿಬಂದ ಗಂಭೀರ ಆರೋಪಕ್ಕೆ ಸ್ಪಷ್ಟನೆ ಕೊಟ್ಟಿದ್ದ ಪುನೀತ್ ರಾಜ್ ಕುಮಾರ್

ನಟ ಪುನೀತ್ ರಾಜಕುಮಾರ್ ಅವರಿಗೆ (ಪುನೀತ್ ರಾಜ್ ಕುಮಾರ್) ಮಾರ್ಚ್ 17 ಜನ್ಮದಿನ. ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಅವರನ್ನು ಕಳೆದುಕೊಂಡು ಕೆಲವು ವರ್ಷಗಳು ಕಳೆದಿವೆ. ಆದಾಗ್ಯೂ ಅವರನ್ನು ನೆನಪಿಸಿಕೊಳ್ಳುವ ಕೆಲಸ ಅಭಿಮಾನಿಗಳಿಂದ ಆಗುತ್ತಲೇ ಇರುತ್ತದೆ. ಈ ಸಂದರ್ಭದಲ್ಲಿ ಅವರ ವಹನದ ವಿಷಯಗಳು ಚರ್ಚೆಯಾಗುತ್ತಿವೆ. ಅದೇ ರೀತಿ ಅವರು ಅಕ್ರಮವಾಗಿ ಗ್ರ್ಯಾನೇಟ್ ಬಿಸ್ನೆಸ್ ಮಾಡುತ್ತಿದ್ದರು ಎಂಬ ಆರೋಪ ಇತ್ತು. ಈ ವಿಷಯವಾಗಿ ಅವರು ಮಾತನಾಡಿದರು. ಈ ಕಾರಣಕ್ಕೆ ಅವರ ತಂದೆ ರಾಜ್‌ಕುಮಾರ್ ಅವರನ್ನು ಬಂಧಿಸಲಾಗಿದೆ ಎಂಬ ಆರೋಪವಿದೆ. ಇದಕ್ಕೆ ಪುನೀತ್ ಅವರು ಸ್ಪಷ್ಟನೆ ಕೊಟ್ಟಿದ್ದರು.

ಪುನೀತ್ ರಾಜಕುಮಾರ್ ಅವರು ಕೇವಲ ನಟರಾಗಿರಲಿಲ್ಲ. ಅವರಿಗೆ ನಟನೆಗಿಂತ ಹೆಚ್ಚು ಉದ್ಯಮದ ಕಡೆಗಳಲ್ಲಿ ಆಸಕ್ತಿ ಇತ್ತು. ಈ ಕಾರಣದಿಂದ ಉದ್ಯಮದ ಬಗ್ಗೆ ಹೆಚ್ಚು ಗಮನ ಹರಿಸಿದರು. ಅವರ’ಪಿಆರ್ಕೆ’ ನಿರ್ಮಾಣ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ಅವರ ಬಗ್ಗೆ ಕೇಳಿಬಂದ ಗಂಭೀರ ಆರೋಪದ ಬಗ್ಗೆ ಪುನೀತ್ ಮಾತನಾಡಿದ್ದರು.

‘ನಮ್ಮ ತಂದೆಯವರು ವೀರಪ್ಪನ್ ಅವರಿಂದ ಕಿಡ್ನ್ಯಾಪ್ ಆದಾಗ ಅನೇಕ ಚರ್ಚೆಗಳು ನಡೆದವು. ನಾನು ಗ್ರಾನೈಟ್ ಬಿಸ್ನೆಸ್ ಮಾಡುತ್ತಿದ್ದೆ. ಅದಕ್ಕಾಗಿ ನಮ್ಮ ತಂದೆಯನ್ನು ವೀರಪ್ಪನ್ ಹಿಡಿದುಕೊಂಡು ಹೋದರು ಎಂಬ ಸುದ್ದಿ ಹರಿದಾಡಿತ್ತು. ಈ ರೀತಿಯ ಹಲವಾರು ಸುದ್ದಿ ಬಂತು’ ಎಂದು ಪುನೀತ್ ರಾಜ್‌ಕುಮಾರ್ ಹೇಳಿದ್ದಾರೆ.

‘ನಾನು ಗ್ರಾನೈಟ್ ಬಿಸ್ನೆಸ್ ಮಾಡಲು ಮುಂದಾಗಿದ್ದೆ ಎಂಬುದು ಅನೇಕರಿಗೆ ತಿಳಿದಿದೆ. ಆಗ ಇದು ಅಕ್ರಮ ಗ್ರಾನೈಟ್ ಬಿಸ್ನೆಸ್ ಎಂದು ನನ್ನ ಫೋಟೋ ಪೇಪರ್ನಲ್ಲಿ ಬಂದಿತ್ತು. ಈ ರೀತಿಯಲ್ಲ ಏಕೆ ಹಾಕುತ್ತಾರೆ ಎಂಬುದು ನನ್ನ ಪ್ರಶ್ನೆಯಾಗಿದೆ. ನನ್ನ ಬಿಸ್ನೆಸ್ ಅದು. ಅದು ಅಕ್ರಮವೇ ಆಗಿದ್ದರೆ ಕಾನೂನು ನೋಡಿಕೊಳ್ಳುತ್ತಿದ್ದರು. ಹೊರಗೆ ಇದ್ದವರು ಕಮೆಂಟ್ ಮಾಡೋದೇಕೆ ಎಂದು ನನ್ನ ಮನಸ್ಸಿಗೆ ಅನಿಸಿತ್ತು’ ಎಂದಿದ್ದರು ಅವರು.

‘ಯಾರೋ ಹೀಗೆ ಹೇಳಿದ್ರೂ ತೊಂದರೆ ಇಲ್ಲ. ಆದರೆ, ತಂದೆ ಅಪಹರಣ ಆದಾಗ ಅನೇಕರು ಇದನ್ನು ಲಿಂಕ್ ಮಾಡಿದಾಗ ಸಾಕಷ್ಟು ಬೇಸರವಾಯಿತು. ನಾನು ಬಿಸ್ನೆಸ್ ಮಾಡ್ತಾ ಇದ್ದಿದ್ದು ಕನಕಪುರದಲ್ಲಿ. ನನಗೇನು ಬುದ್ಧಿ ಇಲ್ವ? ಕುಟುಂಬದವರಿಗೆ ಸತ್ಯ ಏನು ಗೊತ್ತಿತ್ತು’ ಎಂದಿದ್ದರು ಪುನೀತ್ ರಾಜ್ಕುಮಾರ್. ಈ ರೀತಿಯ ಸುದ್ದಿಯಿಂದ ರಾಜಕುಮಾರ್ ಬೇಸರಗೊಂಡಿದ್ದರು. ಪುನೀತ್ಗೆ ಇದೆಲ್ಲ ನಿಲ್ಲಿಸುವಂತೆ ಕೋರಿದರು.

ಇದನ್ನೂ ಓದಿ: ‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್‌ಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ

ಪುನೀತ್ ರಾಜಕುಮಾರ್ ಅವರು 2021 ರ ಅಕ್ಟೋಬರ್ 29 ರಂದು ಅವರು ನಿಧನರಾದರು. ಅವರಿಗೆ 46 ವರ್ಷ ವಯಸ್ಸು. ಹೃದಯಾಘಾತದಿಂದ ಅಪ್ಪು ನಿಧನ ಹೊಂದಿದರು. ಅವರು ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗುತ್ತಾರೆ ಎಂದು ಯಾರೂ ಇರಲಿಲ್ಲ. ಅವರಿಲ್ಲ ಎಂಬ ನೋವು ಎಲ್ಲರನ್ನೂ ಕಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *