
ಅಂದಹಾಗೆ, ನಟಿ ಭಾವನಾ ಅವರು ಕನ್ನಡದಲ್ಲಿ ಬಹಳಷ್ಟು ಸಿನಿಮಾಗಳನ್ನು ಮಾಡಿದ್ದಾರೆ. 2010ರಲ್ಲಿ ‘ಜಾಕಿ’ಯಿಂದ ಶುರುವಾದ ಅವರ ಕನ್ನಡ ಸಿನಿಮಾ ಜರ್ನಿ, 2011ರಲ್ಲಿ ವಿಷ್ಣುವರ್ಧನ, 2012ರಲ್ಲಿ ರೋಮಿಯೋ ಹಾಗೂ ಯಾರೇ ಕೂಗಾಡಲಿ, 2013ರಲ್ಲಿ ಮೈತ್ರಿ ಹಾಗೂ ಟೋಪಿವಾಲಾ, 2018ರಲ್ಲಿ ಟಗರು, 2021ರಲ್ಲಿ ಭಜರಂಗಿ ಹಾಗೂ ಗೋವಿಂದಾ ಗೋವಿಂದಾ ಸಿನಿಮಾಗಳಲ್ಲಿ ನಟಿ ಭಾವನಾ ಮೆನನ್ ಅವರು ನಟಿಸಿದ್ದಾರೆ. ಕನ್ನಡ ಸಿನಿಮಾಪ್ರೇಕ್ಷಕರ ನೆನಪಲ್ಲಿ ಅವರು ಶಾಶ್ವತವಾಗಿ ಸ್ಥಾನ ಪಡಿದಿದ್ದಾರೆ. ಅದು ಅವರಿಗೂ ಅರಿವಿದೆ ಎನ್ನಬಹುದು.