ಕನ್ನಡದ ಕೋಟ್ಯಧಿಪತಿಯಿಂದ ಪುನೀತ್​​​ಗೆ ಸಿಕ್ಕಿದ್ದ ಸಂಭಾವನೆ ಎಷ್ಟು? ಅದರಿಂದ ಅವರು ಮಾಡಿದ್ದೇನು?

ಕನ್ನಡದ ಕೋಟ್ಯಧಿಪತಿಯಿಂದ ಪುನೀತ್​​​ಗೆ ಸಿಕ್ಕಿದ್ದ ಸಂಭಾವನೆ ಎಷ್ಟು? ಅದರಿಂದ ಅವರು ಮಾಡಿದ್ದೇನು?


ಕನ್ನಡದ ಕೋಟ್ಯಧಿಪತಿಯಿಂದ ಪುನೀತ್ ಗೆ ಸಿಕ್ಕಿದ್ದ ಸಂಭಾವನೆ ಎಷ್ಟು? ಅದರಲ್ಲಿ ಅವರು ಮಾಡಿದ್ದೇನು?

ಪುನೀತ್ ರಾಜ್ ಕುಮಾರ್ (ಪುನೀತ್ ರಾಜ್ ಕುಮಾರ್) ಅವರಿಗೆ ಇಂದು (ಮಾರ್ಚ್ 17) ಜನ್ಮದಿನ. ನಟನೆ, ಗಾಯನ, ಸಿನಿಮಾ ನಿರ್ಮಾಣವಾಗಿಯೇ ಅವರು ನಿರೂಪಕನಾಗಿಯೂ ಜನಪ್ರಿಯತೆ ಹೊಂದಿದ್ದು ಗೊತ್ತೇ ಇದೆ. ‘ಕನ್ನಡದ ಕೋಟ್ಯಧಿಪತಿ’ ಶೋನ ಅವರು ನಡೆಸಿಕೊಟ್ಟಿದ್ದರು. ಈ ಶೋ ನಡೆಸಿಕೊಟ್ಟಿದ್ದಕ್ಕೆ ಅವರಿಗೆ ಒಳ್ಳೆಯ ಸಂಭಾವನೆ ಸಿಕ್ಕಿತ್ತು. ಇದನ್ನು ಅವರು ಧರ್ಮದ ಕೆಲಸಕ್ಕೆ ಬಳಸಿಕೊಂಡರು.

‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಿಂದ ಪುನೀತ್ ಅವರಿಗೆ ಸಿಕ್ಕಿದ್ದು ಬರೋಬ್ಬರಿ 8 ಕೋಟಿ ರೂಪಾಯಿ ಸಂಭಾವನೆ. ಈ ಬಗ್ಗೆ ಭಗವಾನ್ ಹೇಳಿದ್ದರು. ಪುನೀತ್ ಅವರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದವರು. ಮೈಸೂರಿನಲ್ಲಿ ಶಕ್ತಿಧಾಮದ ಬಗ್ಗೆ ಅವರಿಗೆ ವಿಶೇಷ ಕಾಳಜಿ ಇತ್ತು. ತಮ್ಮ ಕೈಗೆ ಸಂಭಾವನೆ ರೂಪದಲ್ಲಿ ಬಂದ ಆ 8 ಕೋಟಿ ರೂಪಾಯಿಯನ್ನು ಮಕ್ಕಳ ಶಿಕ್ಷಣಕ್ಕಾಗಿ ಅಪ್ಪು ಮೀಸಲಿಟ್ಟರು.

ಡಾ. ರಾಜ್‌ಕುಮಾರ್ ಕುಟುಂಬದ ಜೊತೆ ನಿರ್ದೇಶಕ ದೊರೆ-ಭಗವಾನ್ ಅವರಿಗೆ ಮೊದಲಿನಿಂದಲೂ ಒಡನಾಟವಿದೆ. ಪುನೀತ್ ರಾಜ್ ಕುಮಾರ್ ಅವರನ್ನು ಹತ್ತಿರದಿಂದ ಕಂಡಂತಹ ವ್ಯಕ್ತಿಗಳಲ್ಲಿ ಅವರು ಕೂಡ ಪ್ರಮುಖರು. ಟಿವಿ9ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಭಗವಾನ್ ಅವರು ಕೆಲವು ಮುಖ್ಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶಕ್ತಿಧಾಮದ ಮಕ್ಕಳ ಶಿಕ್ಷಣಕ್ಕಾಗಿ ಪುನೀತ್ ರಾಜ್ ಕುಮಾರ್ ಅವರು ತಮ್ಮ 8 ಕೋಟಿ ರೂಪಾಯಿ ಸಂಭಾವನೆಯನ್ನು ಮೀಸಲಿಟ್ಟರು ಎಂಬ ವಿಚಾರವನ್ನು ಭಗವಾನ್ ತೆರೆದಿಟ್ಟಿದ್ದಾರೆ.

‘ಕನ್ನಡದ ಕೋಟ್ಯಧಿಪತಿ ಪುನೀತ್ ಅವರಿಗೆ 8 ಕೋಟಿ ರೂಪಾಯಿ ಸಂಭಾವನೆ ಬಂತು. ಅದನ್ನು ಶಕ್ತಿಧಾಮಕ್ಕೆ ಅವರು ಕೊಟ್ಟಿದ್ದರು. ಶಕ್ತಿಧಾಮದಲ್ಲಿ ನೂರಾರು ಮಕ್ಕಳು ಇದ್ದಾರೆ. ಎಲ್ಲರೂ ಬೇರೆ ಶಾಲೆಗೆ ಹೋಗುತ್ತಾರೆ. ಮಕ್ಕಳಿಗಾಗಿ ಶಕ್ತಿಧಾಮದಲ್ಲಿಯೇ ಒಂದು ಶಾಲೆಯನ್ನು ಕಟ್ಟಿಸಬಹುದಲ್ಲ ಎಂಬ ಆಲೋಚನೆ ಪುನೀತ್ ಅವರದ್ದಾಗಿತ್ತು. ಹೀಗಾಗಿ, ನಂತರ ಶಾಲೆ ಆರಂಭಿಸಲಾಯಿತು’ ಎಂದು ಭಗವಾನ್ ಹೇಳಿದ್ದಾರೆ.

ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ಸಿನಿಮಾ ‘ಮಿಲನ’ ಸುಂದರಿ ಪಾರ್ವತಿ ಮೆನನ್ ಈಗ ಏನು ಮಾಡುತ್ತಿದ್ದಾರೆ ಗೊತ್ತಾ?

‘ಶಕ್ತಿಧಾಮ’ದ ಶಾಲೆ ಕೇವಲ ಹೆಣ್ಣುಮಕ್ಕಳಿಗೆ ಮಾತ್ರ. ಶಕ್ತಿಧಾಮದ ಮಕ್ಕಳು ಈ ಶಾಲೆಯಲ್ಲಿ ಓದಬೇಕು ಎಂಬುದು ಪುನೀತ್ ಶರತ್ತಾಗಿತ್ತು. ಹೊರಗೆ ಬರುವ ಬಡ ಹೆಣ್ಣುಮಕ್ಕಳಿಗೂ ಪ್ರವೇಶ ಎಂದು ಪುನೀತ್ ತಿಳಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

 



Source link

Leave a Reply

Your email address will not be published. Required fields are marked *