
ದುನಿಯಾ ವಿಜಿ (Duniya Viji) ಈಗ ಕೇವಲ ಕನ್ನಡ ನಟರು ಮಾತ್ರವೇ ಅಲ್ಲ. ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸುತ್ತಾ ಪ್ಯಾನ್ ಇಂಡಿಯಾ ನಟರಾಗುವ ದಾಪುಗಾಲು ಹಾಕಿದ್ದಾರೆ. ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ಜೊತೆಗೆ ‘ವೀರ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ನಟಿಸಿದ್ದಾರೆ. ತಮಿಳಿನ ‘ಮೂಕುತ್ತಿ ಅಮ್ಮನ್ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತೆಲುಗಿನಲ್ಲಿ ಬಹಳ ಪ್ರಮುಖವಾದ ಸಿನಿಮಾ ಒಂದರಲ್ಲಿ ಇದೀಗ ದುನಿಯಾ ವಿಜಿ ನಟಿಸುತ್ತಿದ್ದಾರೆ, ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ ಆದರೆ ಈ ಸಿನಿಮಾಕ್ಕೆ ಎದುರಾಗುವ ಸಂಭವ ಗೋಚರವಾಗುತ್ತಿದೆ.
ಒಂದು ತೆಲುಗಿನ ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದ ಪುರಿ ಜಗನ್ನಾಥ್ ನಿರ್ದೇಶನ ಮಾಡಿರುವ ‘ಸ್ಮಾನ್ ಡಾಗ್: 33 ಕಾಲೋನಿ’ ಸಿನಿಮಾದಲ್ಲಿ ದುನಿಯಾ ವಿಜಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ನಾಯಕ. ಆದರೆ ದುನಿಯಾ ವಿಜಿ ಸಹ ಅಷ್ಟೇ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಅವಧಿ ಅಂತ್ಯವಾಗಿದೆ. ಆದರೆ ಇದೀಗ ಸಿನಿಮಾಕ್ಕೆ ಎದುರಾಗುವ ಸ್ಪಷ್ಟ ಲಕ್ಷಣ ಕಾಣಿಸಿಕೊಂಡಿದೆ.
ಪುರಿ ಜಗನ್ನಾಥ್ ಅವರು ಕೆಲವು ವರ್ಷಗಳ ಹಿಂದೆ ವಿಜಯ್ ದೇವರಕೊಂಡ, ಅನನ್ಯ ಪಾಂಡೆ ನಟಿಸಿದ್ದ ‘ಲೈಗರ್’ ಸಿನಿಮಾ ನಿರ್ದೇಶಿಸಿದ್ದರು. ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಲಾಗಿದೆ. ಆದರೆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಟ್ಟರ್ ಫ್ಲಾಪ್ ಆಯ್ತು. ಸಿನಿಮಾವನ್ನು ಪುರಿ ಅವರೇ ಸಹ ಮಾಡಿದ್ದರು, ಭಾರಿ ದೊಡ್ಡ ಮೊತ್ತವನ್ನು ಕಳೆದುಕೊಂಡರು. ಆ ಸಮಯದಲ್ಲಿ ಸಿನಿಮಾ ವಿತರಕರು ತಮ್ಮ ಹಣವನ್ನು ವಾಪಸ್ಸು ಮಾಡುವಂತೆ ಪುರಿ ಅವರ ಬಳಿ ಜಗಳ ಮಾಡಿದ್ದರು, ನಿರ್ಮಾಪಕರ ಸಂಘಗಳಿಗೆ ದೂರು ಸಹ ಸೇರಿತ್ತು. ಆದರೆ ಈಗ ಪುರಿ ಅವರ ಹೊಸ ಸಿನಿಮಾ ಬಿಡುಗಡೆ ಸಮಯದಲ್ಲಿ ಅವರೆಲ್ಲ ಮತ್ತೆ ಸಮಸ್ಯೆ ಸೃಷ್ಟಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:ಬಾಳ್ಯದಲ್ಲಿ ಪಟ್ಟ ಕಷ್ಟಗಳನ್ನು ನೆನಪಿಸಿಕೊಂಡ ದುನಿಯಾ ವಿಜಿ: ವಿಡಿಯೋ
ಪುರಿ ಜಗನ್ನಾಥ್ ನಟಿಸಿ, ಮಹೇಶ್ ಬಾಬು ಇದ್ದ ಬ್ಲಾಕ್ ಬಸ್ಟರ್ ಸಿನಿಮಾ ‘ಪೋಕಿರಿ’ಯ ರಿಲೀಸ್ ಘೋಷಣೆಯಾಗುತ್ತಿದೆ. ಆದರೆ ಆ ಸಿನಿಮಾದ ನಿರ್ದೇಶಕ ಪುರಿ ಅವರಾಗಿರುವ ಕಾರಣ ಹಲವು ವಿತರಕರು ಆ ಸಿನಿಮಾವನ್ನು ವಿತರಣೆ ಮಾಡಿದ್ದಾರೆ. ಕೊನೆಗೆ ‘ಪೋಕಿರಿ’ ಬದಲಾಗಿ ಮಹೇಶ್ ಬಾಬು ಅವರ ‘ಅತಿಥಿ’ ಸಿನಿಮಾವನ್ನು ಮರು ಬಿಡುಗಡೆ ಮಾಡುವ ನಿರ್ಧಾರಕ್ಕೆ ಬರಲಾಯ್ತು. ಪುರಿ ಜಗನ್ನಾಥ್ ಅವರ ‘ಲೈಗರ್’ ಸಿನಿಮಾದ ಲೆಕ್ಕ ತೀರುವವರೆಗೆ ಅವರ ಸಿನಿಮಾಗಳ ವಿತರಣೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಒಟ್ಟಾರೆ ಅವರ ಮುಂದಿನ ಸಿನಿಮಾಗಳಿಗೆ ಭಾರಿ ಹೊಡೆತ ಬೀಳುವುದು ಖಾತ್ರಿ ಆಗಿದೆ.
‘ಸ್ಲಂ ಡಾಗ್: 33 ಕಾಲೋನಿ’ ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಆದರೆ ವಿತರಕರನ್ನು ಎದುರು ಹಾಕಿಕೊಂಡು ಸಿನಿಮಾ ಬಿಡುಗಡೆ ಮಾಡುವುದು ತುಂಬಾ ಕಷ್ಟವೇ ಆಗಲಿದೆ ಪುರಿ ಅವರಿಗೆ. ಸಿನಿಮಾದಲ್ಲಿ ದುನಿಯಾ ವಿಜಯ್ ಅವರಿಗೆ ಬಹಳ ಭಿನ್ನವಾದ ಪಾತ್ರವನ್ನು ಪುರಿ ಅವರು ನೀಡಿದ್ದರು. ಆದರೆ ಈಗ ಸಿನಿಮಾದ ಬಿಡುಗಡೆಯೇ ಇಕ್ಕಟ್ಟಿಗೆ ಸಿಲುಕುವಂತೆ ಕಾಣುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ