ಜೀ ಕನ್ನಡ ವಾಹಿನಿಯಲ್ಲಿ ಹಲವು ಸೂಪರ್ ಹಿಟ್ ಧಾರಾವಾಹಿಗಳು ಬರುತ್ತಾ ಇವೆ. ಈ ಧಾರಾವಾಹಿಗಳು ಟಿಆರ್ಪಿಯಲ್ಲಿ ಉತ್ತಮ ವಿಮರ್ಶೆ ಪಡೆದು ಮುಂದೆ ಸಾಗುತ್ತಿವೆ. ಈ ರೀತಿ ಉತ್ತಮ ಟಿಆರ್ಪಿ ಪಡೆದ ಧಾರಾವಾಹಿಗಳ ಮೇಲೆ ಒಂದು ಧಾರಾವಾಹಿಯು ಕೊನೆಗೊಳ್ಳುವ ಸಮಯ ಬಂದಿದೆ ಎಂದರೆ ನೀವು ನಂಬಲೇ ಬೇಕು. ಅಷ್ಟಕ್ಕೂ ಯಾವುದು ಆ ಧಾರಾವಾಹಿ? ಪುಟ್ಟಕನ್ನ ಮಕ್ಕಳು.
ಈ ಧಾರಾವಾಹಿ ವೀಕ್ಷಕರ ವಲಯದಲ್ಲಿ ಸಾಕಷ್ಟು ಹಲ್ ಚಲ್ ಸೃಷ್ಟಿಸಿತ್ತು. ಈ ಧಾರಾವಾಹಿ ಭರ್ಜರಿ ಮೆಚ್ಚುಗೆ ಪಡೆಯಿತು. ಧಾರಾವಾಹಿಯನ್ನು ಜನರು ಸಾಕಷ್ಟು ಇಷ್ಟಪಟ್ಟರು. ಟಿಆರ್ಪಿಯಲ್ಲಿ ಈ ಧಾರಾವಾಹಿ ಮೊದಲ ಸ್ಥಾನ ಪಡೆಯಿತು. ಹಲವು ತಿಂಗಳ ಕಾಲ ಈ ಧಾರಾವಾಹಿ ಮೊದಲ ಸ್ಥಾನದಲ್ಲಿತ್ತು. ಈ ಧಾರಾವಾಹಿಯನ್ನು ಯಾರು ಕೂಡ ಬೀಟ್ ಮಾಡಲು ಸಾಧ್ಯ ಆಗಿಲ್ಲ.
ಮೊದಲು ಪ್ರೈಮ್ ಟೈಮ್ ನಲ್ಲಿ ಪುಟ್ಟಕ್ಕನ ಮಕ್ಕಳು ಪ್ರಸಾರ ಕಾಣುತ್ತಾ ಇತ್ತು. ನಂತರ ಒಂದು ನಿಗದಿತ ಬಳಿಕ ಈ ಧಾರಾವಾಹಿಯ ಸಮಯದಲ್ಲಿ ಬದಲಾವಣೆ ಬದಲಾಯಿಸಲಾಗಿದೆ. ಸಂಜೆ 6 ಗಂಟೆಗೆ ಧಾರಾವಾಹಿ ಕಾಣಲು ಆರಂಭವಾಯಿತು. ಈ ಧಾರಾವಾಹಿಯ ಪ್ರಮುಖ ಪಾತ್ರಗಳನ್ನೇ ಕೊನೆಗೊಳಿಸಿ ವೀಕ್ಷಕರಿಗೆ ಬೇಸರ ಮೂಡುವಂತೆ ಮಾಡಿದರು. ಈಗ ಧಾರಾವಾಹಿ ಕಿನೆ ಆಗೋ ಸಮಯ ಬಂದಿದೆ ಎಂದು ವರದಿಯಾಗಿದೆ.
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ 1100+ ಎಪಿಸೋಡ್‌ಗಳು ಪ್ರಸಾರ ಕಂಡಿವೆ. ಇದು ಧಾರಾವಾಹಿ ಹೆಚ್ಚುಗಾರಿಕೆ. ಹಲವು ವರ್ಷಗಳ ಕಾಲ ಧಾರಾವಾಹಿ ಪ್ರಸಾರ ಕಂಡು ಕೊನೆ ಆಗುತ್ತಿದೆ. ಇದು ವೀಕ್ಷಕರಿಗೆ ಬೇಸರ ಮೂಡಿಸುತ್ತಿದೆ.
ಇದನ್ನೂ ಓದಿ: ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಬಿಡಲು ನಿಜವಾದ ಕಾರಣ ಹೇಳಿದ ಸಂಜನಾ ಬುರ್ಲಿ
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನಂತರ ‘ಕೃಷ್ಣ ರುಕ್ಕು’ ಹೆಸರಿನ ಧಾರಾವಾಹಿಯು ಪ್ರಸಾರ ಕಾಣುವ ಸಾಧ್ಯತೆ ಇದೆ. ಈ ಧಾರಾವಾಹಿಯ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಕಲರ್ಸ್ ಕನ್ನಡದ ಮೌನ ಗುಡ್ಡೆ ಮನೆಯಲ್ಲಿ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.