‘ಬ್ರಹ್ಮಗಂಟು’ ಸೀರಿಯಲ್​ ಹೀರೋ ಆಗಿ ‘ಪುಟ್ಟಕ್ಕನ ಮಕ್ಕಳು ಕಂಠಿ’ ಎಂಟ್ರಿ! ಇದೇನಿದು ಸೀರಿಯಲ್​ ಟ್ವಿಸ್ಟು?

‘ಬ್ರಹ್ಮಗಂಟು’ ಸೀರಿಯಲ್​ ಹೀರೋ ಆಗಿ ‘ಪುಟ್ಟಕ್ಕನ ಮಕ್ಕಳು ಕಂಠಿ’ ಎಂಟ್ರಿ! ಇದೇನಿದು ಸೀರಿಯಲ್​ ಟ್ವಿಸ್ಟು?

‘ಬ್ರಹ್ಮಗಂಟು’ ಸೀರಿಯಲ್​ ಹೀರೋ ಆಗಿ ‘ಪುಟ್ಟಕ್ಕನ ಮಕ್ಕಳು ಕಂಠಿ’ ಎಂಟ್ರಿ! ಇದೇನಿದು ಸೀರಿಯಲ್​ ಟ್ವಿಸ್ಟು?

ಪುಟ್ಟಕ್ಕನ ಮಕ್ಕಳು ನಾಯಕನಾಗಿರೋ ಕಂಠಿ, ಬ್ರಹ್ಮಗಂಟುವಿನಲ್ಲಿಯೂ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾನೆ. ಏನಿದು ಟ್ವಿಸ್ಟ್​ ಅಂತೀರಾ? ಇಲ್ಲಿದೆ ನೋಡಿ ಡಿಟೇಲ್ಸ್​…

ಬ್ರಹ್ಮಗಂಟು ಸೀರಿಯಲ್​ನಲ್ಲಿ ವಿಲನ್​ ಸೌಂದರ್ಯಳ ಕರಾಮತ್ತಿನಲ್ಲಿ ಅರ್ಚನಾ ಮದುವೆ ಬೇರೆಯವರ ಜೊತೆ ನಡೆಯುತ್ತಿದೆ. ಚಿರುಗೆ ಅತ್ತಿಗೆ ನಿಜ ಗುಣವನ್ನು ಬಯಲು ಮಾಡುವುದು ನಾಯಕಿ ದೀಪಾಗೆ ಕಷ್ಟವಾಗಿದೆ. ಅವಳು ಎಲ್ಲರನ್ನೂ ಕೊಲ್ಲಿಸಲು ಮಾಡಿರುವ ಸಂಚು ದೀಪಾಗೆ ತಿಳಿದಿದ್ದರೂ ಅದಕ್ಕೆ ಸಾಕ್ಷಿ ಇಲ್ಲ. ಇದೀಗ ಮೋಸದಿಂದ ಅರ್ಚನಾಳ ಮದುವೆಯನ್ನು ಯಾವನದ್ದೋ ಜೊತೆ ಮಾಡಿಸಲು ಹೊರಟಿದ್ದಾಳೆ ಸೌಂದರ್ಯ. ಅರ್ಚನಾ ಮದುವೆಯಾಗಬೇಕು ಎಂದಿರೋ ರಾಹುಲ್​ಗೆ ಅಪಘಾತ ಮಾಡಿಸಿದ್ದಾಳೆ ಸೌಂದರ್ಯ. ಆದರೆ ಇದಕ್ಕೆ ಸಾಕ್ಷಿ ಇಲ್ಲ.

ಅದೇ ಆಸ್ಪತ್ರೆಯಲ್ಲಿ ಅಡ್ಮಿಟ್​ ಆಗಿರೋ ರಾಹುಲ್​ನ ಕೊಲ್ಲಿಸಲು ಸೌಂದರ್ಯ ರೌಡಿಗಳನ್ನು ಕಳಿಸಿದ್ದಾಳೆ. ಆದರೆ, ನರಸಿಂಹ ರಾಹುಲ್​ಗೆ ಕಾವಲು ನೀಡುತ್ತಿದ್ದಾನೆ. ರೌಡಿಗಳನ್ನು ಚೆನ್ನಾಗಿ ಬಡಿದಿದ್ದಾನೆ. ಕೊನೆಗೆ ಚಿರುಗೆ ಕರೆ ಮಾಡಿ, ರಾಹುಲ್​ ಒಳ್ಳೆಯವನು, ಅವನ ವಿರುದ್ಧ ಹೇಗೆ ಪಿತೂರಿ ನಡೆಯುತ್ತಿದೆ ಎಂದಿದ್ದಾರೆ. ಚಿರುಗೂ ಹೇಗಾದರೂ ಮಾಡಿ ಅರ್ಚನಾ ಮತ್ತು ರಾಹುಲ್​ ಮದುವೆ ಮಾಡಿಸುವ ಆಸೆ.

ಅದಕ್ಕೆ ಮಾವ ಬೆನ್ನೆಲುಬಾಗಿದ್ದಾನೆ. ಭಟ್ಟರ ವೇಷದಲ್ಲಿ ಬಂದಿದ್ದಾನೆ. ಎಲ್ಲರೂ ಸೇರಿ ಪ್ಲ್ಯಾನ್​ ಮಾಡಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್​ ಇದೆ. ಅದೇನೆಂದರೆ, ಪುಟ್ಟಕ್ಕನ ಮಕ್ಕಳು ಕಂಠಿ ಎಂಟ್ರಿ ಕೊಟ್ಟಿದ್ದಾನೆ. ಮದುವೆ ಮನೆಯಲ್ಲಿ ಹೊಗೆ ಹಾಕಿಸಿ ಅಲ್ಲಿಂದ ಅರ್ಚನಾಳನ್ನು ಕರೆದುಕೊಂಡು ಓಡಿ ಹೋಗಿದ್ದಾನೆ ಕಂಠಿ. ಎದುರಿಗೆ ಬಂದಿರೋ ರೌಡಿಗಳನ್ನುಹೊಡೆದುರುಳಿಸಿದ್ದಾನೆ.

ಅಲ್ಲಿ ರಾಹುಲ್​ ಮತ್ತು ಅರ್ಚನಾ ಮದುವೆಗೆ ಎಲ್ಲಾ ರೆಡಿ ಮಾಡಿಕೊಳ್ಳಲಾಗಿದೆ. ಚಿರು ಮತ್ತು ದೀಪಾ ಅರ್ಚನಾಳನ್ನು ಕರೆದುಕೊಂಡು ಬರುವುದಾಗಿ ಸುಳ್ಳು ಹೇಳಿ ಮೊದಲೇ ನಿಗದಿಮಾಡಿದಂತೆ ರಾಹುಲ್​ ಜೊತೆ ಮದುವೆ ನಿಗದಿ ಮಾಡಿದ ಸ್ಥಾನಕ್ಕೆ ಹೋಗಿದ್ದಾರೆ. ಅಷ್ಟರಲ್ಲಿ ಸೌಂದರ್ಯ ಬಂದಿದ್ದಾಳೆ. ಅವಳು ಬರುವ ಮೊದಲೇ ತಾಳಿ ಕಟ್ಟಿದ್ದಾನೆ ರಾಹುಲ್​.

ಚಿರು ತನ್ನ ವಿರುದ್ಧ ಹೋದುದಕ್ಕೆ ಅವನ ಕೆನ್ನೆಗೆ ಹೊಡೆದಿದ್ದಾಳೆ ಸೌಂದರ್ಯ. ಅದೇನೇ ಇದ್ದರೂ ಅವರಿಬ್ಬರ ಮದುವೆ ಆಗಿರುವುದಕ್ಕೆ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಕಂಠಿ ಇಲ್ಲಿ ಹೀರೋ ಆಗಿದ್ದಾನೆ. ಅರ್ಚನಾ ಮತ್ತು ರಾಹುಲ್​ನನ್ನು ಮದುವೆ ಮಾಡಿಸುವುದಾಗಿ ಸೌಂದರ್ಯಗೆ ದೀಪಾ ಸವಾಲು ಹಾಕಿದ್ದು ಸಕ್ಸಸ್​ ಆಗಿದೆ.

ಇದಾಗಲೇ ಸೌಂದರ್ಯ ಅರ್ಚನಾ ಮತ್ತು ರಾಹುಲ್​ ಒಂದಾಗಬಾರದು ಎನ್ನುವ ಕಾರಣಕ್ಕೆ ರಾಹುಲ್​ನನ್ನು ರೌಡಿಗಳನ್ನು ಕಳುಹಿಸಿ ಕೊ*ಲೆಗೆ ಪ್ರಯತ್ನಿಸಿದ್ದಳು. ಆದರೆ ಆತ ಬದುಕಿದ್ದಾನೆ. ಆಸ್ಪತ್ರೆಗೆ ದಾಖಲಾಗಿದ್ದ. ರಾಹುಲ್​ ಮತ್ತು ಅರ್ಚನಾರನ್ನು ಒಂದು ಮಾಡಬೇಕು ಎನ್ನುವ ಕಾರಣಕ್ಕೆ ಚಿರುನೇ ಆತನನ್ನು ಮನೆಗೆ ಕರೆದಿದ್ದ.

ಚಿರುವಿನ ಮನವಿ ಮೇರೆಗೆ ಬೈಕ್​ನಲ್ಲಿ ರಾಹುಲ್​ ಮನೆಗೆ ಬರುತ್ತಿರುವಾಗ ಹಿಂದಿನಿಂದ ರೌಡಿಗಳು ಗಾಡಿಯಲ್ಲಿ ಆತನಿಗೆ ಆ್ಯಕ್ಸಿಡೆಂಟ್​ ಮಾಡಿದ್ದಾರೆ. ಆದರೆ ಆತ ಆಸ್ಪತ್ರೆಯಲ್ಲಿ ಇದ್ದು, ಜೀವ ಉಳಿಸಿಕೊಂಡಿದ್ದಾನೆ. ಇದನ್ನು ಕೇಳಿ ಸೌಂದರ್ಯಳ ತಲೆ ಕೆಟ್ಟು ಹೋಗಿದೆ. ಆದ್ದರಿಂದ ರೌಡಿಗಳನ್ನು ಕರೆಸಿ ಅವರನ್ನು ಕೊಲ್ಲಲು ಮುಂದಾಗಿದ್ದಳು. ಇದು ತಿಳಿಯುತ್ತಲೇ ಸೌಂದರ್ಯ ಹೀಗೆ ಮಾಡಿದ್ದಳು. ಆದರೆ ಈಗ ಎಲ್ಲವೂ ಉಲ್ಟಾ ಹೊಡೆದಿದೆ. ಸೌಂದರ್ಯಳಿಗೆ ದೀಪಾ ಹಾಕಿದ ಚಾಲೆಂಜ್​ ಯಶಸ್ವಿಯಾಗಿದೆ.
View this post on Instagram
A post shared by Zee Kannada (@zeekannada)

Source link

Leave a Reply

Your email address will not be published. Required fields are marked *