ಬೆಂಗಳೂರು, ಜನವರಿ 10: ಕನ್ನಡಪರ ಮಾತನಾಡಿ ಕೋಗಿಲು ಆಗು, ಇಲ್ಲದಿದ್ದರೆ ಕಾಗೆ ಆಗ್ತಿಯಾ ಎಂದು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅವರಿಗೆ ವಿಪಕ್ಷ ನಾಯಕ ಆರ್.ಅಶೋಕ್ ಟಾಂಗ್ ನೀಡಿದ್ದಾರೆ. ಅವರು ಮಾಧ್ಯಮದವರೊಂದಿಗೆ ಮಾತನಾಡಿದರು, ಕೆ.ಸಿ.ವೇಣುಗೋಪಾಲ್ ಕೋಗಿಲು ಕೂಗಿದ ತಕ್ಷಣ ಇಲ್ಲಿ ಎಲ್ಲ ದಾಖಲೆಗಳು ಚೇಂಜ್ ಆದವು. ಆದರೆ, ಕೇರಳದಲ್ಲಿ ಕನ್ನಡ ಬಂದಾಗ ಆ ಕೋಗಿಲೆ ಕೂಗಲೇ ಇಲ್ಲ. ದೆಹಲಿಯಲ್ಲೇ ಸ್ಟ್ರಾಕ್ ಆಗಿದೆ, ಈಗ ಕೂಗಪ್ಪ. ನೀನು ಕಾಗೇನೋ ಕೋಗಿಲೆನೋ ಅಂತಾ ಗೊತ್ತಾಗಬೇಕು. ಕನ್ನಡಿಗರಿಗೆ ದ್ರೋಹ ಎಸಗಿದರೆ ನೀನು ಕಾಗೇನೆ ಆಗ್ತಿಯಾ ಎಂದು ವಾಗ್ದಾಳಿ ಮಾಡಿದ್ದಾನೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓಡಿಸಲು ಇಲ್ಲಿ ಕ್ಲಿಕ್ ಮಾಡಿ.