R Madhavan desi breakfast : ನಟ ಆರ್. ಮಾಧವನ್ ಬೆಳಿಗ್ಗೆ ಅದ್ರಲ್ಲೂ ಬಿರು ಬೇಸಿಗೆಯಲ್ಲಿ ಯಾವ ಬ್ರೇಕ್ ಫಾಸ್ಟ್ ತಿಂತಾರೆ ಗೊತ್ತಾ? ಮಾಧವನ್ ತಮಗಿಷ್ಟದ ಬ್ರೇಕ್ ಫಾಸ್ಟ್ ಬಗ್ಗೆ ಇಂಟರ್ವ್ಯೂನಲ್ಲಿ ಮಾಹಿತಿ ನೀಡಿದ್ದಾರೆ.

ಆರ್. ಮಾಧವನ್ ಬರೀ ನಟ ಮಾತ್ರವಲ್ಲ ಫಿಟ್ನೆಸ್ ಬಗ್ಗೆ ಹೆಚ್ಚುಆದ್ಯತೆ ನೀಡುವ ಆರೋಗ್ಯವಂತ ನಟ. 55ನೇ ವಯಸ್ಸಿನಲ್ಲೂ ಮಾಧವನ್ ಫಿಟ್ ಆಗಿರಲು ಕಾರಣ ಅವರ ಆಹಾರ. ಅವರು ದೇಸಿ ಫುಡ್ ಇಷ್ಟಪಡ್ತಾರೆ. ಬೇಸಿಗೆಯಲ್ಲಿ ಅವರು ಬೆಳಿಗ್ಗೆ ಕಂಜಿಯನ್ನು ಬ್ರೇಕ್ ಫಾಸ್ಟ್ ಆಗಿ ಸೇವನೆ ಮಾಡ್ತಾರೆ. ಆರ್. ಮಾಧವನ್ ಪ್ರಕಾರ ಕಂಜಿ ನಿಮ್ಮ ಹೊಟ್ಟೆ ತುಂಬಿಸುತ್ತೆ. ಕರುಳನ್ನು ಹಗುರಗೊಳಿಸುತ್ತೆ. ತುಂಬಾ ಸಮಯ ನಿಮ್ಮ ಹೊಟ್ಟೆ ತುಂಬಿರುವ ಅನುಭವವಾಗುತ್ತೆ.

ರಾತ್ರಿಯ ಅನ್ನದಿಂದ ಬೆಳಿಗ್ಗೆ ತಯಾರಿಸುವ ಆಹಾರ ಇದು. ಅನ್ನದ ಜೊತೆ ಈರುಳ್ಳಿ, ಹಸಿಮೆಣಸು, ಮೊಸರು, ತುಪ್ಪ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಹಿಂಗು ಮತ್ತು ಕರಿಬೇವನ್ನು ಇದಕ್ಕೆ ಬಳಸಲಾಗುತ್ತದೆ. ಮಾಧವನ್ ಪ್ರಕಾರ, ಇದು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಅತಿಯಾದ ಉಷ್ಣತೆಯಲ್ಲಿ ಕಂಜಿ ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ಸ್ಥಿರವಾದ ಶಕ್ತಿಯನ್ನು ನೀಡುತ್ತದೆ. ವಿಶ್ರಾಂತಿ, ಉತ್ತಮ ನಿದ್ರೆಗೂ ಇದು ಕಾರಣವಾಗುತ್ತದೆ.

ಬೇಕಾಗುವ ಪದಾರ್ಥ : 1 ಕಪ್ ಅನ್ನ, 2 ಕಪ್ ನೀರು, 1 ಟೀಸ್ಪೂನ್ ಎಣ್ಣೆ, 1 ಕಪ್ ಮೊಸರು, 1 ಟೀಸ್ಪೂನ್ ಜೀರಿಗೆ, 1 ಟೀಸ್ಪೂನ್ ಸಾಸಿವೆ, 4-6 ಕರಿಬೇವು, ಒಂದು ಚಿಟಿಕೆ ಹಿಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಇದಕ್ಕೆ ಬೇಕಾಗುತ್ತದೆ.

ವಿಧಾನ: ರಾತ್ರಿ ಮಾಡಿದ ಅನ್ನವನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ. ಮರುದಿನ ಬೆಳಿಗ್ಗೆ, ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು ಮತ್ತು ಹಿಂಗಿನ ಒಗ್ಗರಣೆ ಮಾಡಿ ಇದಕ್ಕೆ ಸೇರಿಸಿ. ಉಪ್ಪು ಮತ್ತು ಮೆಣಸಿನಕಾಯಿ ಮಿಕ್ಸ್ ಮಾಡಿ ತಿನ್ನಿ.

ನಟ ಮಾಧವನ್ ಸಸ್ಯಾಹಾರವನ್ನು ಇಷ್ಟಪಡ್ತಾರೆ. ಸಂದರ್ಶನದಲ್ಲಿ ತಮಗೆ ಇಷ್ಟವಾದ ಆಹಾರಗಳ ಬಗ್ಗೆ ಅವರು ಹೇಳಿದ್ದಾರೆ. ಮಾಧವನ್ ಇಷ್ಟಪಡುವ ಬ್ರೇಕ್ ಫಾಸ್ಟ್ ನಲ್ಲಿ ಇಡ್ಲಿ ಕೂಡ ಸೇರಿದೆ. ಮಾಧವನ್ ಗೆ ಬೆಳಿಗ್ಗೆ ಉಪಹಾರಕ್ಕೆ ಇಡ್ಲಿ ತಿನ್ನುವುದು ಇಷ್ಟವಂತೆ. ದಕ್ಷಿಣ ಭಾರತೀಯರಿಗೆ ಈ ಇಡ್ಲಿ ತಯಾರಿಸೋ ಬಗ್ಗೆ ಪ್ರತ್ಯೇಕವಾಗಿ ಹೇಳ್ಬೇಕಾಗಿಲ್ಲ. ಪ್ರತಿ ಮನೆಯಲ್ಲಿ ಬರೀ ಉದ್ದಿನ ಇಡ್ಲಿ ಮಾತ್ರವಲ್ಲ, ಓಟ್ಸ್, ಮಸಾಲೆ ಸೇರಿದಂತೆ ನಾನಾ ಇಡ್ಲಿ ತಯಾರಾಗುತ್ತದೆ.

ಮಾಧವನ್ ಪುಟ್ಟು ವನ್ನೂ ಇಷ್ಟಪಡ್ತಾರೆ. ಪುಟ್ಟು, ಅಕ್ಕಿ ಹಿಟ್ಟು ಮತ್ತು ತುರಿದ ತೆಂಗಿನಕಾಯಿಯಿಂದ ತಯಾರಿಸುವ ಸಾಂಪ್ರದಾಯಿಕ ಆವಿಯಲ್ಲಿ ಬೇಯಿಸಿದ ದಕ್ಷಿಣ ಭಾರತದ ಪ್ರಮುಖ ಖಾದ್ಯವಾಗಿದೆ. ಕೇರಳದಲ್ಲಿ ಅತಿ ಹೆಚ್ಚು ತಯಾರಿಸುವ ಈ ಪುಟ್ಟು, ಶ್ರೀಲಂಕಾದಲ್ಲೂ ತಯಾರಾಗುತ್ತದೆ. ಶ್ರೀಲಂಕಾದಲ್ಲಿ ಕೆಂಪು ಅಕ್ಕಿ ಹಿಟ್ಟು, ಗೋಧಿ ಹಿಟ್ಟನ್ನು ಬಳಸಲಾಗುತ್ತದೆ.

ಮಾಧವನ್ ದಕ್ಷಿಣ ಭಾರತದ ಬ್ರೇಕ್ ಫಾಸ್ಟ್ ಹೆಚ್ಚು ಇಷ್ಟಪಡ್ತಾರೆ. ಅವರಿಗೆ ಪೊಂಗಲ್ ಕೂಡ ಇಷ್ಟವಂತೆ. ಇದಲ್ದೆ ದೋಸೆ, ರವಾ ದೋಸೆ, ಉದ್ದಿನ ವಡೆ ಪಡ್ಡು, ನೀರ್ ದೋಸೆಯನ್ನು ಅತ್ಯಂತ ಪ್ರೀತಿಯಿಂದ ತಿನ್ನುವ ಮಾಧವನ್ ಗೆ ತೆಂಗಿನಕಾಯಿ ಚಟ್ನಿ ಅಂದ್ರೆ ಇಷ್ಟ. ಮಾಧವನ್ ಸಂದರ್ಶನದಲ್ಲಿ ತಮಗೆ ಇಷ್ಟವಾದ ಬ್ರೇಕ್ ಫಾಸ್ಟ್ ಬಗ್ಗೆ ಮಾಹಿತಿ ನೀಡಿದ್ದು, ಈ ಎಲ್ಲ ಅವರ ಹೆಲ್ದಿ ಬ್ರೇಕ್ ಫಾಸ್ಟ್ ಅವರ ಆರೋಗ್ಯವನ್ನು ಕಾಪಾಡ್ತಿದೆ. ಅವರ ಫಿಟ್ನೆಸ್ ಗೆ ಸಹಾಯ ಮಾಡ್ತಿದೆ.

Source link
ಅಯ್ಯೋ ಬಡವರು ತಿನ್ನೋ ಆಹಾರವೇ ಮಾಧವನ್ ಫಿಟ್ನೆಸ್ ಸೀಕ್ರೆಟ್ ಅಂತೆ!