BBK 12: ರಾ.. ರಾ.. ಹಾಡಿಗೆ ಡಾನ್ಸ್​ ಮಾಡುತ್ತಾ ನಾಗವಲ್ಲಿಯಾದ ರಕ್ಷಿತಾ ಶೆಟ್ಟಿ: ಬೆಚ್ಚಿಬಿದ್ದ ಅಶ್ವಿನಿ ಗೌಡ

BBK 12: ರಾ.. ರಾ.. ಹಾಡಿಗೆ ಡಾನ್ಸ್​ ಮಾಡುತ್ತಾ ನಾಗವಲ್ಲಿಯಾದ ರಕ್ಷಿತಾ ಶೆಟ್ಟಿ: ಬೆಚ್ಚಿಬಿದ್ದ ಅಶ್ವಿನಿ ಗೌಡ

BBK 12: ರಾ.. ರಾ.. ಹಾಡಿಗೆ ಡಾನ್ಸ್​ ಮಾಡುತ್ತಾ ನಾಗವಲ್ಲಿಯಾದ ರಕ್ಷಿತಾ ಶೆಟ್ಟಿ: ಬೆಚ್ಚಿಬಿದ್ದ ಅಶ್ವಿನಿ ಗೌಡ
ಬಿಗ್​ಬಾಸ್​ 12ರ ಫೈನಲಿಸ್ಟ್‌ಗಳೆಂದು ಬಿಂಬಿತರಾಗಿರುವ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ತಮ್ಮ ಜಗಳಗಳಿಂದಲೇ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಆದರೆ, ಇದೀಗ ಇಬ್ಬರೂ ‘ರಾ…ರಾ…’ ಹಾಡಿಗೆ ಒಟ್ಟಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದು, ರಕ್ಷಿತಾ ಡಾನ್ಸ್ ನೋಡಿ ಅಶ್ವಿನಿ ಸುಸ್ತಾಗಿ ಕುಳಿತಿದ್ದಾರೆ.
ಬಿಗ್​ಬಾಸ್​ 12 (Bigg Boss 12) ಫೈನಲಿಸ್ಟ್​ ಎಂದೇ ಬಿಂಬಿತರಾಗಿರುವ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ಆಗಾಗ್ಗೆ ಜಗಳ ಮಾಡುತ್ತಲೇ ಇರುತ್ತಾರೆ. ಬಿಗ್​ಬಾಸ್​ ವಿನ್​ ಆಗಬೇಕು ಎಂದರೆ ಕೆಲವೊಮ್ಮೆ ಇದು ಅನಿವಾರ್ಯವೂ ಆಗುತ್ತದೆ.

ಜಗಳದ ಜೊತೆಜೊತೆಗೆನೇ ಬಿಗ್​ಬಾಸ್​​ನಲ್ಲಿ ಎಲ್ಲ ಸ್ಪರ್ಧಿಗಳು ಆಗಾಗ್ಗೆ ಕಾಮಿಡಿ, ಡಾನ್ಸ್​ ಮಾಡುತ್ತಾ ಇರುವುದು ಉಂಟು. ಅದೇ ರೀತಿ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ (Bigg Boss Ashwini Gowda and Rakshita Shetty) ಇದೀಗ ರಾ…ರಾ… ಹಾಡಿಗೆ ಡಾನ್ಸ್​ ಮಾಡಿದ್ದಾರೆ.

ಇಬ್ಬರೂ ಭರ್ಜರಿ ಸ್ಟೆಪ್​ ಹಾಕುತ್ತಲೇ ಮುಂದುವರೆದಿದ್ದಾರೆ. ಒಂದು ಹಂತದಲ್ಲಿ ಅಶ್ವಿನಿ ಗೌಡ ಸಾಕು ಎಂದರೂ, ರಕ್ಷಿತಾ ಶೆಟ್ಟಿ ಅದನ್ನು ಮುಂದುವರೆಸಿದರು. ಆಕೆಯ ಡಾನ್ಸ್​ ನೋಡಿ ಅಶ್ವಿನಿ ಅಬ್ಬಬ್ಬಾ ಎಂದು ಕುಳಿತು ಬಿಟ್ಟರು.

ರಕ್ಷಿತಾ ಬನ್ನಿ ಬನ್ನಿ ಎಂದರೂ ಅಶ್ವಿನಿ ಸುಸ್ತಾಗಿ ಕುಳಿತರು. ಕೊನೆಗೆ ರಕ್ಷಿತಾ ಡಾನ್ಸ್​ ಮುಂದುವರೆಸಿದರು. ಇದನ್ನು ನೋಡಿ ಅಶ್ವಿನಿ ಅಬ್ಬಬ್ಬಾ ಎಂದರು.

ಒಟ್ಟಿನಲ್ಲಿ ಬಿಗ್​ಬಾಸ್​ ಮನೆಯಲ್ಲಿ ಆಗಾಗ್ಗೆ ಇಂಥ ದೃಶ್ಯಗಳು ಕಾಣಿಸುತ್ತಲೇ ಇರುತ್ತವೆ. ಒಮ್ಮೊಮ್ಮೆ ಜಗಳ, ಮುನಿಸು, ಮತ್ತೆ ಕೆಲವೊಮ್ಮೆ ಪ್ರೀತಿ, ಡಾನ್ಸ್​ ಹೀಗೆ ಇನ್ನೊಂದು ತಿಂಗಳಾಗುವಷ್ಟರಲ್ಲಿಯೇ ಎಲ್ಲದಕ್ಕೂ ತೆರೆ ಬೀಳಲಿದೆ.

Source link

Leave a Reply

Your email address will not be published. Required fields are marked *