ಸಾಮಾನ್ಯವಾಗಿ ಹೀರೋ/ಹೀರೋಯಿನ್‌ಗಳ ಎರಡೆರಡು ಸಿನಿಮಾಗಳು ಒಂದೇ ದಿನ ರಿಲೀಸ್ ಆಗೋದು ಕಡಿಮೆ. ಆದರೆ, ಕೆಲವೊಮ್ಮೆ ಆ ರೀತಿಯ ಘಟನೆಗಳು ಸಂಭವಿಸುತ್ತವೆ. ಈಗ ರಚಿತಾ ರಾಮ್ ನಟನೆಯ ಎರಡು ಸಿನಿಮಾಗಳು ಜನವರಿ 23 ರಂದು ರಿಲೀಸ್ ಆಗುತ್ತಿವೆ. ಒಂದರಲ್ಲಿ ಅವರು ಸಖತ್ ರಗಡ್ ಆಗಿ ಕಾಣಿಸಿಕೊಂಡರೆ ಮತ್ತೊಂದರಲ್ಲಿ ಹಳ್ಳಿ ಹುಡುಗಿ ಪಾತ್ರ ಮಾಡಿದ್ದಾರೆ. ಇದು ಅಭಿಮಾನಿಗಳ ಪಾಲಿಗೆ ಹೆಚ್ಚು ಖುಷಿ ಕೊಟ್ಟಿದೆ.
ಕಲ್ಟ್ ಸಿನಿಮಾ
ಝಯಿದ್ ಖಾನ್ ‘ಬನಾರಸ್’ ಸಿನಿಮಾ ಬಳಿಕ ‘ಕಲ್ಟ್’ ಸಿನಿಮಾ ಒಪ್ಪಿಕೊಂಡರು. ಈ ಚಿತ್ರಕ್ಕೆ ರಚಿತಾ ರಾಮ್ ಕೂಡ ನಾಯಕಿ. ಮಲೈಕಾ ವಾಸುಪಾಲ್ ಕೂಡ ಚಿತ್ರದಲ್ಲಿದ್ದಾರೆ. ಈ ಸಿನಿಮಾ ಜನವರಿ 23ರಂದು ರಿಲೀಸ್ ಆಗುತ್ತಿದೆ. ಜನವರಿ 16ರಂದು ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಗಮನ ಸೆಳೆದಿದೆ.
ರಚಿತಾ ರಾಮ್ ಅವರು ಈ ಸಿನಿಮಾದಲ್ಲಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ನಲ್ಲಿ ಅವರ ಒಂದು ಶೇಡ್ ಮಾತ್ರ ತೋರಿಸಲಾಗಿದೆ. ಮತ್ತೊಂದು ಶೇಡ್ನ ಸಿನಿಮಾದಲ್ಲಿ ಕಣ್ತುಂಬಿಕೊಳ್ಳಬೇಕು ಎಂಬುದು ರಚಿತಾ ರಾಮ್ ಮಾತು. ಈ ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಈ ಮೊದಲು ಅವರು ‘ಉಪಾಧ್ಯಕ್ಷ’ ಚಿತ್ರ ನಿರ್ದೇಶನ ಮಾಡಿದ್ದರು. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಇದನ್ನೂ ಓದಿ: ನಿಲ್ಲಲೇ ಇಲ್ಲ ‘ಬಾಸ್ ಬಾಸ್ ಡಿ ಬಾಸ್’ ಜೈಕಾರ: ಬೇಸರದಿಂದ ಮಾತು ನಿಲ್ಲಿಸಿದ ರಚಿತಾ ರಾಮ್
ಲ್ಯಾಂಡ್‌ಲಾರ್ಡ್
ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ ಮೊದಲಾದವರು ನಟಿಸಿರೋ ‘ಲ್ಯಾಂಡ್‌ಲಾಾರ್ಡ್’ ಸಿನಿಮಾ ಜನವರಿ 23 ರಂದು ರಿಲೀಸ್ ಆಗುತ್ತಿದೆ. ಇದು ಅಳಿದು ಉಳಿದವರ ಕಥೆ. ಜಡೇಶ್ ಕುಮಾರ್ ಹಂಪಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹೇಮಂತ್ ಗೌಡ ಕೆಎಸ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಮೇಲೆ ರಿಲೀಸ್ ಆಗಿರೋ ಟೀಸರ್ ಗಳು ಗಮನ ಸೆಳೆದಿವೆ. ಸತ್ಯ ಪ್ರಕಾಶ್ ಅವರು ಚಿತ್ರವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸಿದ್ದಾರೆ. ಈ ಸಿನಿಮಾ ಕೂಡ ನಿರೀಕ್ಷೆ ಹುಟ್ಟುಹಾಕಿದೆ. ಒಂದೇ ದಿನ ಅವರ ನಟನೆಯ ಎರಡು ಸಿನಿಮಾಗಳು ತೆರೆಗೆ ಬರುತ್ತಿವೆ ಅನ್ನೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.