ಗುರುವೈಭವೋತ್ಸವ ವೇದಿಕೆಯಲ್ಲಿ ಗೌರವ ಡಾಕ್ಟರೇಟ್ ಪಡೆದ ರಾಘವೇಂದ್ರ ರಾಜ್​ಕುಮಾರ್

ಗುರುವೈಭವೋತ್ಸವ ವೇದಿಕೆಯಲ್ಲಿ ಗೌರವ ಡಾಕ್ಟರೇಟ್ ಪಡೆದ ರಾಘವೇಂದ್ರ ರಾಜ್​ಕುಮಾರ್


ಮಂತ್ರಾಲಯದಲ್ಲಿ ಗುರುವೈಭವೋತ್ಸವ ಕಾರ್ಯಕ್ರಮ ನಡೆಯಿತು. ಇದೇ ಉತ್ಸವದ ವೇದಿಕೆಯಲ್ಲಿ ಹಲವು ಗಣ್ಯರಿಗೆ ಸನ್ಮಾನ ಮಾಡಲಾಯಿತು. ನಟ ರಾಘವೇಂದ್ರ ರಾಜ್‌ಕುಮಾರ್ (ರಾಘವೇಂದ್ರ ರಾಜ್‌ಕುಮಾರ್) ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಗೌರವ ಡಾಕ್ಟರೇಟ್ ಪ್ರದಾನ. ಇದೇ ವೇಳೆ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ರಾಯರ ಅನುಗೃಹ ಪ್ರಶಸ್ತಿ ಕೂಡ ನೀಡಿ ಗೌರವಿಸಲಾಯಿತು. ಅಮೆರಿಕದ ಫ್ಲೋರಿಡಾದ ಯೋಗ ಸಂಸ್ಕೃತಂ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (ಗೌರವ ಡಾಕ್ಟರೇಟ್) ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರು ಕುಟುಂಬ ಸಮೇತರಾಗಿ ಭಾಗವಹಿಸಿದ್ದರು.

ಗುರುವೈಭವೋತ್ಸವ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿದ ಬಳಿಕ ರಾಘವೇಂದ್ರ ರಾಜ್‌ಕುಮಾರ್ ಅವರು ತಿಳಿಸಿದ್ದಾರೆ. ಡಾಕ್ಟರೇಟ್ ಪದವಿ ಸಿಕ್ಕಿದ್ದು ಪುಣ್ಯ. ಅದನ್ನು ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ಅರ್ಪಿಸುವೆ. ನಾನು ಹುಟ್ಟಿದಾಗ ಅವರು ಮಂತ್ರಾಲಯ ಸಿನಿಮಾ ಮಾಡುತ್ತಿದ್ದರು. ಆಗ ನನಗೆ ರಾಘವೇಂದ್ರ ಅಂತ ನನಗೆ ಹೆಸರು ಇಟ್ಟಿದ್ರು. ಅದು ರಾಘವೇಂದ್ರ ರಾಜ್‌ಕುಮಾರ್ ಆಗಿ ಬೆಳೆದಿದೆ’ ಎಂದು ಅವರು ಹೇಳಿದರು.

‘ನನಗೆ ಈಗ ಡಾಕ್ಟರೇಟ್ ಪದವಿ ಕೊಟ್ಟಿದ್ದಾರೆ. ಇದರಿಂದ ಜವಾಬ್ದಾರಿ, ಭಯ ಜಾಸ್ತಿ ಆಗ್ತಿದೆ. ಏನು ಸಾಧನೆ ಮಾಡದೇ ಇರುವವನಿಗೆ ಯಾಕೆ ಕೊಟ್ಟರು ಎನಿಸುತ್ತದೆ. ದೇವರ ಆಶೀರ್ವಾದದಿಂದ ಬಂದಿದೆ. ಇನ್ಮೇಲೆ ನಾನು ಸಮಾಜ ಸೇವೆ ಮಾಡಿಕೊಂಡು ಜನರ ಜೊತೆ ಬೆರೆತು ಕೆಲಸ ಮಾಡುತ್ತೇನೆ. ತಂದೆ ತಾಯಿ ಆಶೀರ್ವಾದ ಮಾಡಿ ಈ ಗೌರವ ಕೊಡಿಸಿರೋ ಥರ ಆಗಿದೆ. ಇದನ್ನು ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ಅರ್ಪಿಸುತ್ತಿದ್ದೇನೆ’ ಎಂದು ರಾಘವೇಂದ್ರ ರಾಜ್ ಕುಮಾರ್ ಅವರು ಹೇಳಿದರು.

ಸೆಲ್ಫಿಗಾಗಿ ಫ್ಯಾನ್ಸ್ ತಳ್ಳಾಟ: ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವ ರಾಜ್ ಕುಮಾರ್ ಮತ್ತು ವಿನಯ್ ರಾಜ್ ಕುಮಾರ್ ಜೊತೆ ಸೆಲ್ಫಿ ತೆಗೆದುಕೊಂಡ ಅಭಿಮಾನಿಗಳು ಮುಗಿಬಿದ್ದರು. ಕಾರು ಹತ್ತಲು ಬಿಡದೇ ಸೆಲ್ಫಿಗಾಗಿ ನೂಕಾಟ, ತಳ್ಳಾಟ ನಡುವೆ. ಕೊನೆಗೂ ಅಭಿಮಾನಿಗಳಿಗೆ ಸೆಲ್ಫಿ ನೀಡಿ ಅವರಿಬ್ಬರು ತೆರಳಿದರು.

ಇದನ್ನೂ ಓದಿ: ಎದೆಯೊಳಗಿದ್ದ ಅಪ್ಪು ಎದೆಯ ಮೇಲೆ ಹಚ್ಚೆಯಾಗಿ ಹಾಕಿಸಿಕೊಂಡ ರಾಘವೇಂದ್ರ ರಾಜ್‌ಕುಮಾರ್

ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಈಗ 60 ವರ್ಷ ವಯಸ್ಸು. 1988ರಿಂದಲೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿ ಜನರನ್ನು ರಂಜಿಸಿದ್ದಾರೆ. ನಿರ್ಮಾಪಕನಾಗಿ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿದ್ದಾರೆ. 2004ರ ಬಳಿಕ ಸತತ 15 ವರ್ಷಗಳ ಕಾಲ ಅವರು ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದರು. ಈಗ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *