‘ಮುಖಕ್ಕಿಂತ ಹೆಚ್ಚು ಹೊಕ್ಕಳು ತೋರಿಸಿದ್ರು, ಅದಕ್ಕಾಗೇ ನನ್ನನ್ನು ಆಯ್ಕೆ ಮಾಡಿದ್ರಾ ಗೊತ್ತಿಲ್ಲ’; ರಾಗಿಣಿ ದ್ವಿವೇದಿ

‘ಮುಖಕ್ಕಿಂತ ಹೆಚ್ಚು ಹೊಕ್ಕಳು ತೋರಿಸಿದ್ರು, ಅದಕ್ಕಾಗೇ ನನ್ನನ್ನು ಆಯ್ಕೆ ಮಾಡಿದ್ರಾ ಗೊತ್ತಿಲ್ಲ’; ರಾಗಿಣಿ ದ್ವಿವೇದಿ


ನಟಿ ರಾಗಿಣಿ ದ್ವಿವೇದಿ ಅವರು ಬಣ್ಣದ ಲೋಕದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ. ಅವರು ಡ್ರಗ್ ಕೇಸ್ ಅಲ್ಲಿ ಜೈಲು ಸೇರಿದ್ದರು. ಈಗ ಅವರು ಬಣ್ಣದ ಲೋಕದಲ್ಲಿ ಆಯಕ್ಟೀವ್ ಆಗಿದ್ದಾರೆ. ವಿವಿಧ ರೀತಿಯ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಗಮನ ಸೆಳೆಯುತ್ತಾ ಇರುತ್ತಾರೆ. ಈಗ ಅವರು ನೀಡಿದ ಸಂದರ್ಶನ ಒಂದು ಚರ್ಚೆಗೆ ಕಾರಣವಾಗಿದೆ. ಸುದೀಪ್ ನಟಿಸಿ, ನಿರ್ದೇಶಿಸಿದ ಸಿನಿಮಾ ಬಗ್ಗೆ ರಾಗಿಣಿ ಮಾತನಾಡಿದ್ದಾರೆ. ಅವರು ಹಾಗೆ ಮಾತನಾಡಬಾರದಿತ್ತು ಎಂದು ಹೇಳಿದ್ದಾರೆ.

ರಾಗಿಣಿ ಮಾತನಾಡಿದ್ದು, ‘ವೀರ ಮದಕರಿ’ ಚಿತ್ರದ ಬಗ್ಗೆ. ಇದು ಅವರ ಮೊದಲ ಸಿನಿಮಾ. ಈ ಚಿತ್ರದಲ್ಲಿ ರಾಗಿಣಿ ಸೊಂಟ ಕಂಡಾಗಲೆಲ್ಲಾ ಸುದೀಪ್ ಕೈ ಸೊಂಟದ ಬಳಿ ಹೋಗುವ ರೀತಿಯಲ್ಲಿ ತೋರಿಸಲಾಗಿದೆ. ಈ ಬಗ್ಗೆ ಆರ್ ಜೆ ತುಹಿನ್ ಅವರ ಸಂದರ್ಶನದಲ್ಲಿ ರಾಗಿಣಿಗೆ ಪ್ರಶ್ನೆ ಮಾಡಲಾಗಿದೆ. ‘ನಿಮ್ಮ ಮೊದಲ ಚಿತ್ರ ವೀರ ಮದಕರಿಯಲ್ಲಿ ನೇವಲ್ ನ (ಹೊಕ್ಕಳು) ಅಷ್ಟು ತೋರಿಸಲಾಗಿದೆ. ನಿರ್ದೇಶಕರು ನೇವಲ್ ಆಫೀಸರ್ ಆಗಿದ್ರಾ? ‘ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ರಾಗಿಣಿ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ಮಾತೆ ಆಡದೆ ಸ್ಪೂರ್ತಿ ತುಂಬಿದ ಕಿಚ್ಚ ಸುದೀಪ್: ವಿಡಿಯೋ ನೋಡಿ

‘ಈ ಐಡಿಯಾ ಹಿಂದೆ ಯಾವ ಉದ್ದೇಶ ಇತ್ತು ಅನ್ನೋದು ಗೊತ್ತಿಲ್ಲ. ಮಹಿಳೆಯಲ್ಲಿ ಅತ್ಯಂತ ಮಾದಕ ಭಾಗಗಳಲ್ಲಿ ಅವಳ ಹೊಟ್ಟೆ ಕೂಡ ಒಂದು. ಹೀರೋಗೆ ಹೊಕ್ಕಳ ವೀಕ್ ನೆಸ್ ಇತ್ತು ಎಂದು ತೋರಿಸುವ ಪ್ರಯತ್ನ ಇರಬಹುದು’ ಎಂದು ರಾಗಿಣಿ ಹೇಳಿದರು. ‘ಹೊಕ್ಕಳು ತೋರಿಸೋದಕ್ಕೆ ಮಾತ್ರ ನನ್ನನ್ನು ಆಯ್ಕೆ ಮಾಡಿದರೇ ಎಂದು ಈಗ ನನಗೆ ಅನಿಸುತ್ತಿದೆ. ಆ ಸಿನಿಮಾದಲ್ಲಿ ನನ್ನ ಮುಖಕ್ಕಿಂತ ಹೆಚ್ಚಾಗಿ ನನ್ನ ಹೊಕ್ಕಳು ತೋರಿಸಲಾಗಿದೆ’ ಎಂದು ರಾಗಿಣಿ ಹೇಳಿದ್ದಾರೆ.

ಈ ವಿಷಯವನ್ನು ಸುದೀಪ್ ಅಭಿಮಾನಿಗಳು ಖಂಡಿಸಿದ್ದಾರೆ. ಇದು ರಾಜಮೌಳಿಯ ‘ವಿಕ್ರಮಾರ್ಕುಡು’ ಚಿತ್ರದ ರಿಮೇಕ್. ಮೂಲ ಚಿತ್ರದಲ್ಲಿ ಏನಿದೆಯೋ ಅದನ್ನೇ ಇಲ್ಲಿ ತೋರಿಸಲಾಗಿದೆ. ಹೀಗಾಗಿ, ಏಕೆ ಆ ರೀತಿ ತೋರಿಸಿದಿರಿ ಎಂದು ರಾಜಮೌಳಿಯನ್ನು ಪ್ರಶ್ನೆ ಮಾಡಬೇಕು ಎಂದು ಅನೇಕರು ಹೇಳಿದ್ದಾರೆ. ಇನ್ನೂ ಕೆಲವರು, ‘ಮೊದಲ ಅವಕಾಶ ಕೊಟ್ಟವರಿಗೆ ಹೀಗೆ ಹೇಳೋದು ಎಷ್ಟು ಸರಿ’ ಎಂದು ರಾಗಿಣಿಯನ್ನು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *