‘ಡೆವಿಲ್​​ನಲ್ಲಿ ನಾನು ನಟಿಸಬೇಕಿತ್ತು, ಆದರೆ..’; ವಿವರಿಸಿದ ರಾಗಿಣಿ ದ್ವಿವೇದಿ

‘ಡೆವಿಲ್​​ನಲ್ಲಿ ನಾನು ನಟಿಸಬೇಕಿತ್ತು, ಆದರೆ..’; ವಿವರಿಸಿದ ರಾಗಿಣಿ ದ್ವಿವೇದಿ


ನಟಿ ರಾಗಿಣಿ ದ್ವಿವೇದಿ ಅವರು ಈಗ ಸುದ್ದಿಯಲ್ಲಿದ್ದಾರೆ. ಅವರ ‘ವೃಷಭ’ ಹೆಸರಿನ ಚಿತ್ರ ಮಾಡಲಾಗಿದೆ. ಈ ಚಿತ್ರದಲ್ಲಿ ಮೋಹನ್ ಲಾಲ್ ಹೆಂಡತಿಯ ಪಾತ್ರ ಮಾಡುವ ಅವಕಾಶವು ನಿಮಗೆ ಸಿಕ್ಕಿದೆ ಎಂದು ಹೇಳಬಹುದು. ಈಗ ಅವರು ‘ಡೆವಿಲ್’ ಸಿನಿಮಾದಲ್ಲಿ ನಟಿಸಬೇಕಿತ್ತು ಎಂಬ ವಿಷಯ ಹೇಳಲಾಗಿದೆ. ಈ ಸಿನಿಮಾದಲ್ಲಿ ಏಕೆ ನಟಿಸಿಲ್ಲ ಎಂಬ ವಿಷಯವನ್ನು ಅವರು ರಿವೀಲ್ ಮಾಡಿದ್ದಾರೆ.

ರಾಗಿಣಿ ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ‘ಕೆಂಪೇಗೌಡ’ ರೀತಿಯ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಬೇರೆಯವರಾದರೂ ಕನ್ನಡಕ್ಕೆ ಬಂದು ಕನ್ನಡ ಕಲಿತಿದ್ದಾರೆ. ಅವರು ಇತ್ತೀಚೆಗೆ ಬಂದ ‘ಡೆವಿಲ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ಒಂದನ್ನು ತೆರೆಗೆ ತರಬೇಕಿತ್ತು. ಆದರೆ, ಪಾತ್ರ ಇಷ್ಟ ಆಗಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಿನಿಮಾ ರಿಲೀಸ್ ಆದ 20 ದಿನಗಳ ಬಳಿಕ ಕೋರ್ಟ್‌ನಿಂದ ಮಹತ್ವದ ಆದೇಶ ತಂದ ‘ಡೆವಿಲ್’ ತಂಡ

‘ನಾನು ಡೆವಿಲ್ನ ಭಾಗ ಆಗಬೇಕಿತ್ತು. ಆದರೆ, ನನಗೆ ಪಾತ್ರ ಇಷ್ಟ ಆಗಿಲ್ಲ’ ಎಂದು ನೇರವಾಗಿ ಹೇಳಿದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ಅವಕಾಶ ಇದ್ದಿದ್ದು ಶರ್ಮಿಳಾ ಮಾಂಡ್ರೆ ಮಾಡಿದ ಪಾತ್ರ ಮಾತ್ರ. ಈ ಪಾತ್ರವು ಕಿರುಕುಳಕ್ಕೆ ಒಳಗಾಗುವ ರೀತಿಯ ದೃಶ್ಯಗಳು ಬರುತ್ತದೆ. ಈ ಕಾರಣದಿಂದಲೂ ಅವರು ಬೇಡ ಎಂದಿದ್ದಿರಬಹುದು.

ರಾಗಿಣಿ ಅವರು ಇತ್ತೀಚೆಗೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರು ‘ವೃಷಭ’ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಮಲಯಾಳಂ ಸಿನಿಮಾ. ಈ ಸಿನಿಮಾ ಮಲೆಯಾಳಂ ಚಿತ್ರದ ಮೂಲಕ ಅವರ ಪರಿಚಯವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *