
ಕನ್ನಡ, ತೆಲುಗು, ತಮಿಳು, ಮಲಯಾಳಂ ಚಲನಚಿತ್ರಗಳಲ್ಲಿ ಆ್ಯಕ್ಟೀವ್ ಆಗಿರುವ ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ (Ragini Dwivedi) ತುಪ್ಪದ ಬೆಡಗಿ ಎಂದೇ ಫೇಮಸ್ ಆದವರು. ಆದರೆ, ಕನ್ನಡ ಇಂಡಸ್ಟ್ರಿಯ ಬಗ್ಗೆ ಇದೀಗ ಅವರು ಅಸಮಾಧಾನ ಹೊರಹಾಕಿದ್ದಾರೆ. ಚಿತ್ರರಂಗಕ್ಕೆ ಬಂದು 15 ವರ್ಷಗಳಾದ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಾಗಿಣಿ ಅವರು, ಸ್ಯಾಂಡಲ್ವುಡ್ ಇಂಡಸ್ಟ್ರಿ ತಮ್ಮನ್ನು ಕಡೆಗಣಿಸಿರುವ ಬಗ್ಗೆ ದುಃಖಿಸಿದ್ದಾರೆ.