
ರಾಯಚೂರು, ಮಾರ್ಚ್ 18: ಆಕಸ್ಮಿಕ ಅಗ್ನಿ ಅವಘಡದಿಂದ 300ಕ್ಕೂ ಹೆಚ್ಚು ಭತ್ತದ ಚೀಲಗಳು ಸುತ್ತು ಭಸ್ಮವಾದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಹೊರವಲಯದಲ್ಲಿ ನಡೆದಿದೆ. ಉತ್ತಮ ಬೆಲೆ ಸಿಗಲೆಂದು ಭತ್ತವನ್ನು ಶೇಖರಿಸಿ ಕಾಯುತ್ತಿರುವ ರೈತ ಇದೀಗ ರೂಪಾಯಿ ನಷ್ಟ ಅನುಭವಿಸಿ ಕಂಗಾಲಾಗಿದ್ದಾನೆ. ಮಹಮ್ಮದ್ ಯೂಸಫ್ ಎಂಬ ರೈತನಿಗೆ ಸೇರಿದ ಈ ಭತ್ತವನ್ನು ಜಮೀನಿನಲ್ಲಿದ್ದ ಶೆಡ್‌ನಲ್ಲಿ ಸಂಗ್ರಹಿಸಲಾಯಿತು. ಆರ್‌ಎನ್‌ಆರ್ ಜಾತಿಯ ಭತ್ತಕ್ಕೆ ಉತ್ತಮ ದರ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಅವರು 300ಕ್ಕೂ ಹೆಚ್ಚು ಚೀಲಗಳನ್ನು ಸಂಗ್ರಹಿಸಿದ್ದರು. ಆದರೆ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕೇವಲ ಒಂದು ಗಂಟೆಯೊಳಗೆ ಸಂಪೂರ್ಣ ಭತ್ತ ಸುಟ್ಟು ಕರಕಲಾಗಿದೆ.
ಬೆಂಕಿಯ ತೀವ್ರತೆಗೆ ದನದ ಶೆಡ್ ಸಂಪೂರ್ಣವಾಗಿ ಭಸ್ಮವಾಗಿದೆ, ಒಟ್ಟು ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಭತ್ತ ಹಾಗೂ 6 ಲಕ್ಷ ರೂಪಾಯಿ ಮೌಲ್ಯದ ಶೆಡ್ ನಷ್ಟವಾಗಿದೆ. ಬೆಂಕಿಯಿಂದ ಉಳಿದ ಅರೆಬರೆ ಭತ್ತವನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಅದನ್ನು ದನಗಳಿಗೆ ಮಾತ್ರ ಬಳಸುವಂತಾಗಿದೆ ಎಂದು ರೈತ ಯೂಸಫ್ ನೋವಿನಿಂದ. ಘಟನೆಯಿಂದ ಮಾನಸಿಕವಾಗಿ ಕುಗ್ಗಿರುವ ರೈತ, ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದೇನೆ. ಈ ಅಗ್ನಿ ಅವಘಡದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ