ರಾಯಚೂರು, ಡಿ.25: ಕರ್ನಾಟಕದ ಅನೇಕ ಹೋಟೆಲ್ ರೆಸ್ಟೋರೆಂಟ್, ಬೇಕರಿ, ಬಾರ್ & ರೆಸ್ಟೋರೆಂಟ್‌ಗಳಲ್ಲಿ ಕಳಪೆ ಆಹಾರಗಳಿವೆ. ಈಗ ಹೋಟೆಲ್ ರೆಸ್ಟೋರೆಂಟ್, ಬೇಕರಿಗಳಲ್ಲಿ ಸಿಗುವ ವೆರೈಟಿ ಆಹಾರ ಸೇವನೆ ಮಾಡುವ ಮುನ್ನ ಎಚ್ಚರವಿರಲಿ. ಅಲ್ಲಿ ಸಿಗುವ ಆಹಾರಗಳು ಎಷ್ಟು ಸೇಫ್ ಎನ್ನುವುದನ್ನು ಮೊದಲು ತಿಳಿದುಕೊಳ್ಳುವುದು ಒಳ್ಳೆಯದು. ಹೌದು ಇದೀಗ ರಾಯಚೂರಿನಲ್ಲಿ ನಾಲ್ಕು ಇಲಾಖೆ ಅಧಿಕಾರಿಗಳಿಂದ ಹೋಟೆಲ್‌ಗಳ ಮೇಲೆ ದಾಳಿ ನಡೆದಿದೆ. ಎರಡು-ಮೂರು ದಿನದ ಹಳೆಯ ಮಾಂಸ, ಪನ್ನೀರ್ ಫ್ರೀಜರ್‌ಗಳಲ್ಲಿ ಇದೆ. ಇದರೊಂದಿಗೆ ಕಲಬೆರಿಕೆ, ಸಂಶಯ ಹುಟ್ಟಿಸೋ ಆಹಾರ-ಪದಾರ್ಥ ಇದೆ. ಇದನ್ನು ನೋಡಿದ ಅಧಿಕಾರಿಗಳು ಶಾಕ್ ಆಗಿದ್ದಾರೆ. ರಾಯಚೂರು ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ,ಆಹಾರ ಸುರಕ್ಷತಾ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಈ ದಾಳಿ ನಡೆಸಲಾಗಿದೆ. ಒಟ್ಟು 19 ಕಡೆ ದಾಳಿಯನ್ನು. ಈ ವೇಳೆ ಈ ಹೋಟೆಲ್ ರೆಸ್ಟೋರಂಟ್, ಬೇಕರಿಗಳಿಗೆ ಆಹಾರ ಗುಣಮಟ್ಟ, ಶುಚಿತ್ವ, ಲೈಸೆನ್ಸ್ ಇಲ್ಲದಿರುವುದು ಗೊತ್ತಾಗಿದೆ. ಇನ್ನು ಕೆಲವು ಕಡೆ ಅಪಾಯಕಾರಿ ಎಂದು 27 ಗೃಹಪಯೋಗಿ ಸಿಲಿಂಡರ್ ಗಳು ಜಪ್ತಿ ಮಾಡಲಾಗಿದೆ. ಈ ನಿಯಮ ಉಲ್ಲಂಘಿಸಿದ ವ್ಯಾಪಾರಸ್ಥರಿಗೆ ದಂಡ ವಿಧಿಸಿ,ನೋಟಿಸ್ ನೀಡಿದೆ.ಒಟ್ಟು 1 ಲಕ್ಷ 8 ಸಾವಿರ ದಂಡ ವಿಧಿಸಲಾಗಿದೆ. ನಿಯಮ ಉಲ್ಲಂಘಿಸಿರುವ ವ್ಯಾಪಾರಿಗಳಿಗೆ ಪಾಲಿಕೆ ಆಯುಕ್ತ ಜುಬಿನ್ ಮೋಹಾಪಾತ್ರ ಖಡಕ್ ಎಚ್ಚರಿಕೆ ಕೂಡ ನೀಡಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ