
ರಾಯಚೂರು, ಏಪ್ರಿಲ್ 10: ಜಿಲ್ಲಾ ಲೋಕಾಯುಕ್ತರು (ಲೋಕಾಯುಕ್ತ) ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಭ್ರಷ್ಟಾಚಾರ ಆರೋಪದಡಿ ಸಿರವಾರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಪಂಚಾಯತ್‌ನ ಚೀಫ್ ಆಫೀಸರ್ ಸುರೇಶ್ ಶೆಟ್ಟಿ, ಖಾತಾ ಮ್ಯೂಟೇಶನ್ ಮಾಡಲು ಲೇಔಟ್ ಮಾಲೀಕ ರಘರಾಮ್ ರೆಡ್ಡಿಯಿಂದ 2 ಲಕ್ಷ ರೂ. ಲಂಚ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪದ ಹಿನ್ನೆಲೆ ಸುರೇಶ್ ಅವರನ್ನು ವಶಕ್ಕೆ ಪಡೆಯಲಾಗಿದೆ.
ಲೇಔಟ್ ಮಾಲೀಕನಿಂದ ಲೋಕಾಯುಕ್ತರಿಗೆ ದೂರು
ಸಿರವಾರ ಪಟ್ಟಣದ ಹೊಸ ಲೇಔಟ್ನ 34 ನಿವೇಶನಗಳ ಖಾತಾ ಮ್ಯೂಟೇಶನ್ ಪ್ರಕ್ರಿಯೆಗಾಗಿ ಸುರೇಶ್ ಲಂಚ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ. ಈ ರಘರಾಮ್ ರೆಡ್ಡಿ ಲೋಕಾಯುಕ್ತರಿಗೆ ದೂರು ನೀಡಿದ್ದರು. ಆಧಾರವಾಗಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ನಿನ್ನೆ ರಘರಾಮ್ ರೆಡ್ಡಿ ಅವರು 1 ಲಕ್ಷ ರೂ. ಹಣವನ್ನು ಸುರೇಶ್ ಶೆಟ್ಟಿಗೆ ನೀಡುವ ವೇಳೆ ದಾಳಿ.
ಇದನ್ನೂ ಕಿವಿ ಓದಿ ಕೇಳಲ್ಲ, ಮಾತು ಬರಲ್ಲ! ಆದ್ರೂ ಸ್ನೇಹಿತನ ಹೆಂಡತಿ ಮೇಲೆ ಕಣ್ಣು ಹಾಕಿದ ವ್ಯಕ್ತಿ ಮಾಡಿದ್ದೇನು ಗೊತ್ತಾ?
ಸ್ನೇಹಿತನ ಮನೆಯಲ್ಲಿ ಅಡಗಿದ್ದ ಆರೋಪಿ ಬಲೆಗೆ!
ಆದರೆ ದಾಳಿ ವೇಳೆ ಶೆಟ್ಟಿ ಕಾರಿನಲ್ಲಿ ಹಣ ಸುರೇಶ್‌ತ ಸ್ಥಳದಿಂದ ಪರಾರಿ ವೇಳೆ, ಬಳಿಕ ಸಿರವಾರದಿಂದ ಕವಿತಾಳ ಕಾರಿನಲ್ಲಿ ತೆರಳಿ ಸ್ನೇಹಿತರ ಮನೆಯಲ್ಲಿ ಅಡಗಿಕೊಂಡಿದ್ದರು. ಲೋಕಾಯುಕ್ತ ತಂಡ ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿ ಕವಿತಾಳ ಪಟ್ಟಣದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದೆ. ಇದೀಗ ಆರೋಪಿಯನ್ನು ವಿಚಾರಣೆಗೊಳಪಡಿಸಲಾಗಿದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ