Headlines

ಅವರು ಯಾರನ್ನೂ ದೂರ ತಳ್ಳೋ ವ್ಯಕ್ತಿ ಅಲ್ಲ; ರಿಷಬ್ ಪರ ಬ್ಯಾಟ್ ಬೀಸಿದ ರಾಜ್ ಬಿ ಶೆಟ್ಟಿ

ಅವರು ಯಾರನ್ನೂ ದೂರ ತಳ್ಳೋ ವ್ಯಕ್ತಿ ಅಲ್ಲ; ರಿಷಬ್ ಪರ ಬ್ಯಾಟ್ ಬೀಸಿದ ರಾಜ್ ಬಿ ಶೆಟ್ಟಿ


ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಕನ್ನಡದ ‘RRR‘ ಎಂದು ಕರೆಯಲಾಗುತ್ತದೆ. ಒಬ್ಬರ ವೃತ್ತಿ ಜೀವನಕ್ಕೆ ಮತ್ತೊಬ್ಬರು ಬೆಂಬಲ ನೀಡುತ್ತಾ ಸಾಗುತ್ತಿದ್ದಾರೆ. ಆದರೆ, ಇತ್ತೀಚೆಗೆ ರಿಷಬ್ ಹಾಗೂ ರಾಜ್ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಮಾತು ಕೇಳಿ ಬಂದಿದೆ. ಇತ್ತೀಚೆಗೆ ’45’ ಸಿನಿಮಾ ಟ್ರೇಲರ್ ಬಗ್ಗೆ ಹೊಗಳುವಾಗ ರಿಷಬ್ ಅವರು ಎಲ್ಲಿಯೂ ರಾಜ್ ಹೆಸರನ್ನು ಉಲ್ಲೇಖಿಸಿಲ್ಲ. ಇದು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ರಾಜ್ ಉತ್ತರಿಸಿದ್ದಾರೆ. ‘ರಿಷಬ್ ಯಾರನ್ನೂ ದೂರ ತಳ್ಳುವ ವ್ಯಕ್ತಿ ಅಲ್ಲ’.

ರಿಷಬ್ ಅವರು ಉಪೇಂದ್ರ ಹಾಗೂ ಶಿವರಾಜ್ ಕುಮಾರ್ ಅವರನ್ನು ಉಲ್ಲೇಖಿಸಿ ಮಾತನಾಡಿದ್ದರು. ಆದರೆ, ರಾಜ್ ಹೆಸರನ್ನು ಹೇಳಿಲ್ಲ. ಇದು ದೊಡ್ಡ ವಿಷಯ ಅಲ್ಲ ಎನ್ನುತ್ತಾರೆ ರಾಜ್. ‘ಮೊದಲು ಐದು ನಿಮಿಷ ರಿಷಬ್ ರೆಕಾರ್ಡ್ ಮಾಡಿದ್ದರಂತೆ. ಆದರೆ, ರೆಕಾರ್ಡ್ ಆಗಿಲ್ಲ. ಮತ್ತೆ ರೆಕಾರ್ಡ್ ಮಾಡಲಾಗಿತ್ತು. ಬಹುಶಃ ಆ ಸಮಯದಲ್ಲಿ ಹೆಸರು ಹೇಳಲು ಮರೆಯಬಹುದೇ’ ಎಂದು ರಾಜ್ ಅವರು ಮಾಧ್ಯಮಕ್ಕೆ ನೀಡಿದ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.

ರಾಜ್ ಅವರು ‘ಕಾಂತಾರ: ಅಧ್ಯಾಯ 1’ ಸಿನಿಮಾದ ಭಾಗವಾಗುವುದಿಲ್ಲ ಎಂದು ಮೊದಲೇ ಹೇಳಿದ್ದರು. ಹೀಗಾಗಿ, ಸಿನಿಮಾ ನೋಡಿದ ಬಳಿಕ ಆ ಬಗ್ಗೆ ರಾಜ್ ಏನೂ ಹೇಳಿಲ್ಲ. ‘ಸಿನಿಮಾದ ಭಾಗವಾಗುವುದಿಲ್ಲ ಎಂದು ಹೇಳಿದ ಬಳಿಕ ಮತ್ತೆ ಆ ಚಿತ್ರವನ್ನು ನೋಡಿ ಎಂದು ನಾನು ಜನರಿಗೆ ಹೇಳೋದು ಸರಿ ಅಲ್ಲ’ ಎನ್ನುತ್ತಾರೆ ರಾಜ್.

ಇದನ್ನೂ ಓದಿ: ರಿಷಬ್ ಶೆಟ್ಟಿ-ರಾಜ್ ಬಿ ಶೆಟ್ಟಿ ನಡುವೆ ಮೂಡಿದೆಯಾ ಮನಸ್ತಾಪ?

ಹಾಗಿದ್ದರೆ ರಿಷಬ್ ಹಾಗೂ ರಾಜ್ ಮಧ್ಯೆ ಎಲ್ಲವೂ ಸರಿಯಾ? ಇದೆ ಎನ್ನುತ್ತಾರೆ ರಾಜ್. ‘ನಾವು ಈಗ ಒಟ್ಟಿಗೆ ಕೆಲಸ ಮಾಡಬೇಕಿಲ್ಲ. ಹಾಗೆ ಮಾಡಿದರೆ ಚಿತ್ರರಂಗಕ್ಕೆ ನಷ್ಟ. ಎಲ್ಲರೂ ಬೇರೆ ಬೇರೆಯಾಗಿ ಕೆಲಸ ಮಾಡಿದರೆ ಚಿತ್ರರಂಗಕ್ಕೆ ಹೆಚ್ಚು ಲಾಭ. ಅವರಿಗೆ ನನ್ನ ಅಗತ್ಯ ಬಂದರೆ ನಾನು ಹೋಗಿ ಕೆಲಸ ಮಾಡುತ್ತೇನೆ. ನನ್ನ ಸಿನಿಮಾಗೆ ಅವರ ಅವಶ್ಯಕತೆ ಇದ್ದರೆ ಅವರ ಬಳಿ ಸಹಾಯ ಕೇಳುತ್ತೇನೆ. ರಿಷಬ್ ಯಾರನ್ನೂ ದೂರ ತಳ್ಳುವ ವ್ಯಕ್ತಿ ಅಲ್ಲ. ಕಮಿಟ್ಮೆಂಟ್ ಕಾರಣಕ್ಕೆ ರಕ್ಷಿತ್ ಇನ್ನೂ ಸು ಫ್ರಮ್ ಸೋ ನೋಡಿಲ್ಲ. ಹಾಗಂತ ನಮ್ಮಿಬ್ಬರ ಮಧ್ಯೆ ಫ್ರೆಂಡ್ ಶಿಪ್ ಇಲ್ಲ ಅನ್ನೋಕೆ ಆಗಲ್ಲ’ ಎಂದು ರಾಜ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *