ನಾನು ಇರೋದೇ ಬೋಡ ಕಣೇ: ಬಾಲಕಿ ಜತೆ ರಾಜ್ ಬಿ. ಶೆಟ್ಟಿ ಕ್ಯೂಟ್ ಮಾತುಕಥೆ

ನಾನು ಇರೋದೇ ಬೋಡ ಕಣೇ: ಬಾಲಕಿ ಜತೆ ರಾಜ್ ಬಿ. ಶೆಟ್ಟಿ ಕ್ಯೂಟ್ ಮಾತುಕಥೆ


ರಾಜ್ ಬಿ. ಶೆಟ್ಟಿ ಅವರು ಅಭಿನಯಿಸಿದ್ದಾರೆ ‘ಲ್ಯಾಂಡ್‌ಲಾರ್ಡ್’ (ಭೂಮಾಲೀಕ) ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಅವರು ವಿಲನ್ ಪಾತ್ರ ಮಾಡಿದ್ದಾರೆ. ಈ ಚಿತ್ರದ ಶೂಟಿಂಗ್ ವೇಳೆ ಬಾಲಕಿ ಜೊತೆ ಮಾತನಾಡಿದ ಒಂದು ವಿಡಿಯೋವನ್ನು ರಾಜ್ ಬಿ. ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ 10 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ‘ಅಣ್ಣ.. ನೀನು ಯಾವಾಗಲಾದರೂ ಬೋಡ ಮಾಡಿಸಿಕೊಂಡಿದ್ದೀಯಾ’ ಎಂದು ಬಾಲಕಿ ಕೇಳಿದ್ದಾಳೆ. ‘ನಾನು ಇರುವುದೇ ಬೋಡ ಕಣೆ. ಕೂದಲು ಅಂಟಿಸಿಕೊಂಡಿದ್ದೇನೆ’ ಎಂದು ರಾಜ್ ಬಿ. ಶೆಟ್ಟಿ (ರಾಜ್ ಬಿ ಶೆಟ್ಟಿ) ಅವರು ನಕ್ಕಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ‘ಲ್ಯಾಂಡ್‌ಲಾಾರ್ಡ್’ ಸಿನಿಮಾದಲ್ಲಿನ ಅವರ ಅಭಿನಯಕ್ಕೆ ಸಖತ್ ಪ್ರಶಂಸೆ ಸಿಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *