ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್! | Raj B Shetty Shines As Rakshaspurada King After Winning Hearts As Guruji In Soo From So Kvn

ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್! | Raj B Shetty Shines As Rakshaspurada King After Winning Hearts As Guruji In Soo From So Kvn


ಕಳೆದ ವರ್ಷ ಸು ಫ್ರಂ ಸೋನಲ್ಲಿ ಕರುಣಾಕರ ಗುರೂಜಿಯಾಗಿ ಮೋಡಿ ಮಾಡಿದ್ದ ರಾಜ್ ಬಿ ಶೆಟ್ಟಿ, ಈ ವರ್ಷ ಖಾಕಿ ತೊಟ್ಟು ಮತ್ತೊಂದು ಹೊಸ ಪಾತ್ರದ ಮೂಲಕ ಸದ್ದು ಮಾಡಿದ್ದಾರೆ. ಸದ್ಯ ರಾಜ್​ ರಕ್ಕಸಪುರದ ರಾಜನಾಗಿ ಗೆದ್ದಿದ್ದಾರೆ.

ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್

ಯೆಸ್ ರಾಜ್ ಬಿ ಅದೆಂಥಾ ಪ್ರತಿಭಾನ್ವಿತ ನಟ ಅನ್ನೋದನ್ನ ಮೊದಲ ಚಿತ್ರದಲ್ಲೇ ಪ್ರೂವ್ ಮಾಡಿದ್ದಾರೆ. ಆ ಬಳಿಕವೂ ರಾಜ್ ಶೆಟ್ಟಿ ಚಿತ್ರದಿಂದ ಚಿತ್ರಕ್ಕೆ ಪಾತ್ರದಿಂದ ಪಾತ್ರಕ್ಕೆ ಬೆಳೀತಾ ಹೋಗ್ತಾ ಇದ್ದಾರೆ. ಕಳೆದ ವರ್ಷ ಸು ಫ್ರಂ ಸೋನಲ್ಲಿ ಗುರೂಜಿ ಆಗಿ ಮೋಡಿ ಮಾಡಿದ್ದ ರಾಜ್, ಈಗ ರಕ್ಕಸಪುರದೋಳ್ ಚಿತ್ರದಲ್ಲಿ ಖಾಕಿ ತೊಟ್ಟು ಕಮಾಲ್ ಮಾಡಿದ್ದಾರೆ.

ಕಳೆದ ವಾರ ರಿಲೀಸ್ ಆದ ರಕ್ಕಸಪುರದೋಳ್ ಸಿನಿಮಾಗೆ ಪ್ರೇಕ್ಷಕರಿಂದ ದೊಡ್ಡ ಮಟ್ಟದ ಮೆಚ್ಚುಗೆ ಸಿಕ್ಕಿದೆ. ಥ್ರಿಲ್ಲರ್ ಕಥೆಯುಳ್ಳ ಈ ಸಿನಿಮಾ ಪ್ರೇಕ್ಷಕರಿಗೆ ಹೊಸ ಅನುಭವ ಕೊಡ್ತಾ ಇದೆ. ಕಿಚ್ಚ ಸುದೀಪ್, ಉಪೇಂದ್ರ ಸೇರಿದಂತೆ ದಿಗ್ಗಜರು ಈ ಸಿನಿಮಾವನ್ನ ಮತ್ತು ರಾಜ್ ಶೆಟ್ಟಿ ನಟನೆಯನ್ನ ಮೆಚ್ಚಿ ಕೊಂಡಾಡಿದ್ದಾರೆ.

ಒಟ್ಟಾರೆ ರಾಜ್ ಶೆಟ್ಟಿ ಚಿತ್ರದಿಂದ ಚಿತ್ರಕ್ಕೆ ಹೊಸ ಹೊಸ ಪಾತ್ರಗಳನ್ನ ಮಾಡ್ತಾ ಮೋಡಿ ಮಾಡ್ತಾ ಇರೋದು ಸುಳ್ಳಲ್ಲ. ಕಳೆದ ವರ್ಷ ಕಾವಿ ತೊಟ್ಟು ಮೋಡಿ ಮಾಡಿದವರು ಈಗ ಖಾಕಿ ತೊಟ್ಟು ಕಮಾಲ್ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *