ನಟಿ ಸಮಂತಾ ರುತ್ ಪ್ರಭು (ಸಮಂತಾ ರುತ್ ಪ್ರಭು) ಅವರು ಇತ್ತೀಚೆಗೆ 2ನೇ ಮದುವೆ ಆದರು. ಈ ಮೊದಲು ಟಾಲಿವುಡ್ ನಟ ನಾಗಚೈತನ್ಯ ಜೊತೆ ಸಮಂತಾ ಮದುವೆ ನಡೆದಿತ್ತು. ಬಳಿಕ ಅವರಿಬ್ಬರು ವಿಚ್ಛೇದನರು. ಈಗ ನಿರ್ದೇಶಕ ರಾಜ್ ನಿಡಿಮೋರು (ರಾಜ್ ನಿಡಿಮೋರು) ಜೊತೆ ಸಮಂತಾ ಅವರು 2ನೇ ಮದುವೆ ಆಗಿದ್ದಾರೆ. ಬಹಳ ಸರಳವಾಗಿ ಅವರ ವಿವಾಹ ಸಮಾರಂಭ. ಮದುವೆಯ ಕೆಲವು ಫೋಟೋಗಳು ಲಭ್ಯವಿವೆ. 2ನೇ ಮದುವೆ ಬಳಿಕ ಸಮಂತಾ ಅವರಿಗೆ ತುಂಬ ಖುಷಿಯಾಯಿತು. ಅವರ ಮುಖದಲ್ಲಿ ನಗುವನ್ನು ಕಂಡು ಆಪ್ತರಿಗೆ ಸಖತ್ ಖುಷಿ ಆಗಿದೆ.
ಬಾಲಿವುಡ್ ನಲ್ಲಿ ರಾಜ್ ನಿಡಿಮೋರು ಅವರು ಫೇಮಸ್ ಆಗಿದ್ದಾರೆ. ‘ಫ್ಯಾಮಿಲಿ ಮ್ಯಾನ್’ ವೆಬ್ ಸರಣಿಯ ನಿರ್ದೇಶನದ ಮೂಲಕ ಅವರು ಹೆಚ್ಚು ಜನಪ್ರಿಯತೆಯನ್ನು ಪಡೆದರು. ‘ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ರಾಜ್ ನಿಡಿಮೋರು ಮತ್ತು ಸಮಂತಾ ರುತ್ ಪ್ರಭು ಅವರು ಜೊತೆಯಾಗಿ ಕೆಲಸ ಮಾಡಿದ್ದರು. ಆಗಲೇ ಅವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು.
ಸಮಂತಾ ಮತ್ತು ರಾಜ್ ನಿಡಿಮೋರು ಮದುವೆಯ ಮಹೆಂದಿ ಶಾಸ್ತ್ರದ ಫೋಟೋಗಳನ್ನು ಅವರ ಸ್ನೇಹಿತೆ ಮೇಘನಾ ವಿನೋದ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೈಗೆ ಮದರಂಗಿ ಹಚ್ಚಿಕೊಂಡು ಕುಳಿತ ಸಮಂತಾ ಅವರು ಸಿಕ್ಕಾಪಟ್ಟೆ ಖುಷಿಯಿಂದ ನಕ್ಕಿದ್ದಾರೆ. ಆ ಕ್ಷಣವನ್ನು ರಾಜ್ ನಿಡಿಮೋರು ಅವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ.
ರಾಜ್ ನಿಡಿಮೋರು ಕುಟುಂಬಕ್ಕೆ ಸಮಂತಾ ಅವರು ಕಾಲಿಟ್ಟಿದ್ದಾರೆ. ಅವರಿಗೆ ರಾಜ್ ಸಹೋದರಿ ಶೀತಲ್ ನಿಡಿಮೋರು ಸ್ವಾಗತ ಕೋರಿದ್ದಾರೆ. ಸೊಸೆಯನ್ನು ಮನೆ ತುಂಬಿಸಿಕೊಂಡ ಕ್ಷಣದ ಫೋಟೋವನ್ನು ಶೀತಲ್ ಅವರು ಹಂಚಿಕೊಂಡಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು ಅವರಿಗೆ ಎಲ್ಲರಿಗೂ ಅಭಿನಂದನೆ ತಿಳಿಸುತ್ತಿದ್ದಾರೆ.
ಇದನ್ನೂ ಓದಿ: ತುಂಬಾ ಸರಳವಾಗಿ ನಡೆದ ಸಮಂತಾ ಮದುವೆ: ಫೋಟೋ ಗ್ಯಾಲರಿ ನೋಡಿ..
ಇತ್ತೀಚಿನ ಕೆಲವು ವರ್ಷಗಳಿಂದ ಸಮಂತಾ ಮತ್ತು ರಾಜ್ ನಿಡಿಮೋರು ಅವರು ಆಪ್ತವಾಗಿದ್ದರು. ಆದರೆ ತಮ್ಮ ಸಂಬಂಧದ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಅವರಿಬ್ಬರು ಒಟ್ಟಿಗೆ ಇರುವ ಹಲವು ಫೋಟೋಗಳು ವೈರಲ್ ಆಗುತ್ತಿದ್ದವು. ಅಂತಿಮವಾಗಿ ಮದುವೆ ಆಗುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಸಮಂತಾ ಅವರಿಗೆ ಈಗ 38 ವರ್ಷ ವಯಸ್ಸು. ರಾಜ್ ನಿಡಿಮೋರು ಅವರಿಗೆ 50 ವರ್ಷ ವಯಸ್ಸು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.