ಎಸ್ಎಸ್ ರಾಜಮೌಳಿ (ಎಸ್ಎಸ್ ರಾಜಮೌಳಿ), ಭಾರತದ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು. ರಾಜಮೌಳಿ, ರಾಜಕೀಯದಿಂದ ಬಲು ದೂರವಾದರೂ ಎಲ್ಲ ರಾಜಕಾರಣಿಗಳು, ಉದ್ಯಮಿಗಳು, ಸಿನಿಮಾ ಮಂದಿಯಿಂದ ಸಮಾನ ಗೌರವಕ್ಕೆ ಅರ್ಹರಾಗಿರುವ ವ್ಯಕ್ತಿ ಅವರು. ರಾಜಮೌಳಿಯ ಪ್ರತಿಭೆ, ಮಾಡಿರುವ ಕಾರ್ಯಗಳು ಭಾರತದ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಪ್ರಭಾವಿ ವ್ಯಕ್ತಿ ಆಗಿರುವ ಜೊತೆಗೆ ಸಾಕಷ್ಟು ಶ್ರೀಮಂತಿಕೆಯನ್ನೂ ಹೊಂದಿರುವ ರಾಜಮೌಳಿಗೆ ಯಾವುದನ್ನೇ ಆಗಲಿ ಪಡೆದುಕೊಳ್ಳುವುದು ಕಷ್ಟವೇನೂ ಅಲ್ಲ. ಆದರೂ ರಾಜಮೌಳಿ, ಬೇಡಿಕೆಯೊಂದಕ್ಕೆ ಕುಳಿತಿಕೆಗೆ ಧರಣಿ ಎಂದು ಹೇಳಿದ್ದಾರೆ.
ರಾಜಮೌಳಿ, ಸಿನಿಮಾಗಳ ಬಗ್ಗೆ ಅಪಾರ ಕಾಳಜಿ ಇರುವ ವ್ಯಕ್ತಿ. ಜನರಿಗೆ ಒಳ್ಳೆಯ ಸಿನಿಮಾ. ಅತ್ಯುತ್ತಮ ಗುಣಮಟ್ಟದ ಸಿನಿಮಾ ಎಂಬ ಅಪಾರ ಹಪ-ಹಪಿ ಇರುವ ನಿರ್ದೇಶಕ. ಇದೇ ಕಾರಣಕ್ಕೆ ಅವರು ವಿಶ್ವದ ಅತ್ಯುತ್ತಮ ತಂತ್ರಜ್ಞಾನಕ್ಕೆ ಕೆಲಸ ಮಾಡುತ್ತಿದ್ದಾರೆ, ವಿಶ್ವದ ಅತ್ಯುತ್ತಮ ತಂತ್ರಜ್ಞಾನವನ್ನು ತಮ್ಮ ಸಿನಿಮಾಕ್ಕೆ ಅಳವಡಿಸಿಕೊಳ್ಳುತ್ತಿದ್ದಾರೆ. ತಂತ್ರಜ್ಞಾನದ ಮಿತಿ ಇದ್ದಾಗಲೇ ಅವರು ‘ಈಗ’ ಅಂಥಾ ಸಿನಿಮಾ ನೀಡಿದವರು. ಆದರೆ ರಾಜಮೌಳಿ ಅವರು ಭಾರತದ ಚಿತ್ರಮಂದಿರಗಳ ಬಗ್ಗೆ ದೂರು ಇದೆ. ಇದೇ ಕಾರಣಕ್ಕೆ ಅವರು ಪ್ರತಿಭಟನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಆಂಗ್ಲ ಮಾಧ್ಯಮವೊಂದಕ್ಕೆ ಹೈದರಾಬಾದ್ ನಲ್ಲಿ ಸಂದರ್ಶನ ನೀಡಿರುವ ಎಸ್ ಎಸ್ ರಾಜಮೌಳಿ, ತಾವು ‘ವಾರಣಾಸಿ’ ಸಿನಿಮಾವನ್ನು ಐಮ್ಯಾಕ್ಸ್ ಕ್ಯಾಮೆರಾದಲ್ಲಿ ಶೂಟ್ ಮಾಡಿರುವ ವಿಚಾರ ಹಂಚಿಕೊಂಡಿದ್ದಾರೆ. ತಮ್ಮ ಸಿನಿಮಾದಲ್ಲಿ ಆಳ-ಅಗಲ ಮತ್ತು ಎತ್ತರ ಬಹಳ ದೊಡ್ಡದಾಗಿದ್ದರೆ, ಸರಿಯಾಗಿ ಕ್ಯಾಪ್ಚರ್ ಮಾಡಲು ಐಮ್ಯಾಕ್ಸ್ ಸೂಕ್ತ ಎಂಬ ಕಾರಣಕ್ಕೆ ತಾವು ಐಮ್ಯಾಕ್ಸ್ ಬಳಸಿದ್ದಾಗಿ ಹೇಳಿದ್ದಾರೆ.
ಇದನ್ನೂ ಓದಿ:’ವಾರಣಾಸಿ’ ಚಿತ್ರಕ್ಕೆ ಐಮ್ಯಾಕ್ಸ್ ಬಳಸಿದ್ದೇಕೆ: ಕಾರಣ ನೀಡಿದ ರಾಜಮೌಳಿ
ಆದರೆ ಐಮ್ಯಾಕ್ಸ್ ನಲ್ಲಿ ಶೂಟ್ ಆದ ಸಿನಿಮಾವನ್ನು ಪ್ರದರ್ಶಿಸಲು ಭಾರತದಲ್ಲಿ ಒಂದೇ ಒಂದು ಫುಲ್ ಲೆಂತ್ ಐಮ್ಯಾಕ್ಸ್ ಪರದೆಯೇ ಇಲ್ಲ. ಈ ಬಗ್ಗೆ ಅಸಮಾಧಾನ ಹೊಂದಿರುವ ರಾಜಮೌಳಿ, ಸಂದರ್ಶನದಲ್ಲಿ ಮಾತನಾಡುತ್ತಾ, ‘ಭಾರತದಲ್ಲಿ ಐಮ್ಯಾಕ್ಸ್ ಪರದೆಯ ಅಗತ್ಯವಿದೆ. ಭಾರತದಲ್ಲಿ ಸಹ ದೊಡ್ಡ ಐಮ್ಯಾಕ್ಸ್ ಪರದೆಯನ್ನು ಹಾಕುವಂತೆ ನಾನು ಐಮ್ಯಾಕ್ಸ್ ಕಚೇರಿ ಎದುರು ಧರಣಿ ಕೂರುತ್ತೇನೆ’ ರಾಜಮೌಳಿ.
ಭಾರತದಲ್ಲಿ ಐಮ್ಯಾಕ್ಸ್ ಪರದೆಗಳು ಇವೆ ಆದರೆ 1.43:1 ಅಳತೆಯ ಬೃಹತ್ ಐಮ್ಯಾಕ್ಸ್ ಪರದೆಗಳು ಇಲ್ಲ. ಭಾರತದಲ್ಲಿ ಇರುವುದೆಲ್ಲವೂ 70 ಎಂಎಂಇದಕ್ಕಾಗಿ ಮಾತ್ರ. ಆದರೆ ವಿದೇಶದಲ್ಲಿ ಐಮ್ಯಾಕ್ಸ್ ಪರದೆಗಳು 100*140 ಅಗಲ ಅಡಿ-ಉದ್ದದ ಪರದೆಗಳು ಇವೆ. ಈ ಬೃಹತ್ ಚಲನಚಿತ್ರಗಳಲ್ಲಿ ಸಿನಿಮಾ ನೋಡುವ ಅನುಭವವೇ ಅದ್ಭುತ. ಆದರೆ 70 ಎಂಎಂ ಪರದೆಯ ದೃಶ್ಯದ ಎತ್ತರ ಗೊತ್ತೇ ಆಗುವುದಿಲ್ಲ. ಎತ್ತರವಾದ ಬೆಟ್ಟದ ದೃಶ್ಯವನ್ನು ತೋರಿಸಿದರೆ ಅದರ ತಲೆ ಕಟ್ ಆಗಿ ಕಾಣುತ್ತದೆ. ಇದೇ ಕಾರಣಕ್ಕೆ ರಾಜಮೌಳಿ, ಭಾರತದಲ್ಲೂ ಬೃಹತ್ ಆದ ಐಮ್ಯಾಕ್ಸ್ ಪರದೆ ಬೇಕು ಎಂದು ಬಯಸುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ