
‘ಧುರಂಧರ 2’ ಸಿನಿಮಾ (ಧುರಂಧರ 2) ಸೂಪರ್ ಹಿಟ್ ಆಗಿದೆ. ಮೊದಲ ಭಾಗ ಅಬ್ಬರಿಸಿತ್ತು. ಇದು ಎರಡನೇ ಭಾಗ ಹಿಟ್ ಆಗು ಸಹಕಾರಿ ಆಗಿದೆ. ಇಷ್ಟು ದಿನಗಳ ಕಾಲ ಮೊದಲ ಪಾರ್ಟ್ ರಿಲೀಸ್ ಆಗಿ ಬಹು ಸಮಯದ ನಂತರ ಎರಡನೇ ಪಾರ್ಟ್ ಬರುತ್ತಿತ್ತು. ಆದರೆ, ‘ಧುರಂಧರ 2’ ವಿಷಯದಲ್ಲಿ ಆ ರೀತಿ ಆಗಿಲ್ಲ. ‘ಧುರಂಧರ’ ರಿಲೀಸ್ ಆಗಿ ಕೇವಲ ಮೂರೇ ತಿಂಗಳಲ್ಲಿ ‘ಧುರಂಧರ 2’ ಸಿನಿಮಾ ತೆರೆಗೆ ಬಂದಿದೆ. ಇದು ಚಿತ್ರಕ್ಕೆ ಸಹಕಾರಿ ಆಗಿದೆ. ಈಗ ಇದನ್ನು ರಾಜಮೌಳಿ ಪ್ಲ್ಯಾನ್ ಬದಲಿಸಿದ್ದಾರೆ ಎಂದು ವರದಿಯಾಗಿದೆ.
‘ಬಾಹುಬಲಿ’ ಚಿತ್ರವನ್ನು ರಾಜಮೌಳಿ ಎರಡು ಪಾರ್ಟ್ ಅಲ್ಲಿ ತಂದರು. ಅಲ್ಲಿಂದ ಎರಡು ಪಾರ್ಟ್ ಗಳಲ್ಲಿ ಸಿನಿಮಾ ಮಾಡುವ ಟ್ರೆಂಡ್ ಜೋರಾಯಿತು. ಭಾರತದಲ್ಲಿ ಅನೇಕ ಭಾಷೆಗಳಲ್ಲಿ ಅನೇಕ ಸಿನಿಮಾಗಳು ಎರಡು ಭಾಗಗಳಲ್ಲಿ ತರಲಾಯಿತು. ಆದರೆ, ಕೊನೆ ಕೊನೆಗೆ ಇದಕ್ಕೆ ಅರ್ಥವೇ ಇಲ್ಲದಂತೆ ಆಯಿತು. ದುಡ್ಡು ಮಾಡುವ ಉದ್ದೇಶದಿಂದ ಸಿನಿಮಾಗಳನ್ನು ಎರಡು ಭಾಗಗಳಲ್ಲಿ ತರಲಾಗುತ್ತಾ ಬಂತು. ಇದು ರಾಜಮೌಳಿಗೆ ಬೇಸರ ತರಿಸಿತ್ತು.
ಧುರಂಧರ ಸಿನಿಮಾ ರಿಲೀಸ್‌ಗೂ ಮೊದಲಿನ ವರದಿ ಪ್ರಕಾರ, ‘ವಾರಣಾಸಿ’ ಚಿತ್ರ ಒಂದೇ ಪಾರ್ಟ್ ಅಲ್ಲಿ ತೆರೆಗೆ ತರೋ ಪ್ಲ್ಯಾನ್ ಅಲ್ಲಿ ರಾಜಮೌಳಿ ಇದ್ದರು. ಎರಡು ಪಾರ್ಟ್ನ ಜನರು ಇಷ್ಟಪಡುವುದಿಲ್ಲ ಎಂಬುದು ಅವರ ಊಹೆಯಾಗಿದೆ. ಆದರೆ, ಯಾವಾಗ ‘ಧುರಂಧರ 2’ ಸಿನಿಮಾ ಹಿಟ್ ಆಯಿತೋ ಅವರು ಮತ್ತೆ ಪ್ಲ್ಯಾನ್ ಬದಲಿಸಿದ್ದಾರೆ.
‘ಧುರಂಧರ 2’ ಸಿನಿಮಾ ಹಣ ಮಾಡುತ್ತಿರುವ ರೀತಿ ನೋಡಿ ಅನೇಕರಿಗೆ ಅಚ್ಚರಿಯಾಗಿದೆ. ಮೊದಲ ಭಾಗಕ್ಕೂ, ಎರಡನೇ ಭಾಗಕ್ಕೂ ಲಿಂಕ್ ಇತ್ತು. ರಾಜಮೌಳಿ ಸಿನಿಮಾಗಳಲ್ಲಿ ಸಸ್ಪೆನ್ಸ್ ಯಾವ ರೀತಿಯಲ್ಲಿ ಇಡುತ್ತಾರೆ ಮತ್ತೆ ಹೇಳಬೇಕಿಲ್ಲ. ಅವರು ಈಗ ‘ವಾರಣಾಸಿ’ ಚಿತ್ರದ ಎರಡು ಭಾಗಗಳಲ್ಲಿ ತರೋ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹತ್ತೇ ದಿನದಲ್ಲಿ ‘ಕೆಜಿಎಫ್ 2’ ಲೈಫ್ ಟೈಮ್ ಕಲೆಕ್ಷನ್ ಬ್ರೇಕ್ ಆಗಲಿದೆ ‘ಧುರಂಧರ 2’
ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಮೊದಲಾದವರು ‘ವಾರಣಾಸಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದೊಡ್ಡ ಬಜೆಟ್ ನಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಮುಂದಿನ ವರ್ಷ ಏಪ್ರಿಲ್ ನಲ್ಲಿ ಸಿನಿಮಾ ತೆರೆಗೆ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.