ಸಿನಿಮಾ ಮೇಕಿಂಗ್ ವಿಷಯದಲ್ಲಿ ರಾಜಮೌಳಿ (ಎಸ್ ಎಸ್ ರಾಜಮೌಳಿ) ಎಷ್ಟು ಗಮನ ಹರಿಸುತ್ತಾರೋ ಅದೇ ರೀತಿ ಸಿನಿಮಾ ಪ್ರಚಾರಕ್ಕೂ ಅವರು ಅಷ್ಟೇ ಪ್ರಾಮುಖ್ಯತೆ ಹೊಂದಿದ್ದಾರೆ. ಈ ಕಾರಣದಿಂದಲೇ ರಾಜಮೌಳಿ ಅವರ ಸಿನಿಮಾ ಅಷ್ಟು ದೊಡ್ಡ ಮಟ್ಟದಲ್ಲಿ ತಲುಪುತ್ತದೆ. ಈಗ ಅವರು ‘ವಾರಣಾಸಿ’ ಸಿನಿಮಾ ಪ್ರಚಾರಕ್ಕೆ ದೊಡ್ಡ ಮಟ್ಟದ ಯೋಜನೆ ರೂಪಿಸಿದ್ದಾರೆ. ಸಿನಿಮಾ ಟೈಟಲ್ ಹಾಕದೆ ರಿಲೀಸ್ ಪ್ರಕಟಿಸಿದ್ದಾರೆ.
ರಾಜಮೌಳಿ ‘ವಾರಣಾಸಿ’ ಸಿನಿಮಾ ಘೋಷಣೆ ಮಾಡಿದ್ದಾರೆ. ಮಹೇಶ್ ಬಾಬು ಚಿತ್ರಕ್ಕೆ ನಾಯಕ. ಈ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ. ಆದರೆ, ಸಿನಿಮಾ ತಂಡ ರಿಲೀಸ್ ದಿನಾಂಕ ಘೋಷಣೆ ಮಾಡಿರಲಿಲ್ಲ. ಈಗ ವಾರಾಣಸಿಯಲ್ಲಿ ದೊಡ್ಡದಾದ ಬಿಲ್ ಬೋರ್ಡ್‌ಗಳು ರಾರಾಜಿಸಿದ್ದು’ಏಪ್ರಿಲ್ 7, 2027′ ಎಂದು ಬರೆಯಲಾಗಿದೆ.
ಎಲ್ಲಿಯೂ ರಾಜಮೌಳಿ ಅವರು ತಮ್ಮ ಸಿನಿಮಾದ ಹೆಸರನ್ನು ಹಾಕಿಲ್ಲ. ಕೊನೆ ಪಕ್ಷ ಇದು ಯಾವ ಸಿನಿಮಾ ಎಂದು ನೋಡುವ ಪೋಸ್ಟರ್ ಕೂಡ ಬಳಕೆ ಮಾಡಿಲ್ಲ. ಆದಾಗ್ಯೂ ಇದು ರಾಜಮೌಳಿ ಅವರದ್ದೇ ಸಿನಿಮಾ ಎಂದು ಅನೇಕರು ವೀಕ್ಷಿಸಿದ್ದಾರೆ. ವಾರಾಣಸಿಯಲ್ಲೇ ಅವರು ಈ ರೀತಿ ಸಿನಿಮಾ ರಿಲೀಸ್ ದಿನಾಂಕ ತಿಳಿಸಿರೋದು ವಿಶೇಷ ಎನಿಸಿಕೊಂಡಿದೆ. ಏಪ್ರಿಲ್ 7 ಯುಗಾದಿ. ಹಬ್ಬದ ಸಮಯದಲ್ಲೇ ಸಿನಿಮಾ ತೆರೆಗೆ ಬರುತ್ತಿದೆ.
ರಾಜಮೌಳಿ ಫ್ಲೆಕ್ಸ್‌ಗಳನ್ನು ಹಾಕಿದ್ದು ವಾರಾಣಸಿಯಲ್ಲೇ ಆದರು, ‘ವಾರಣಾಸಿ’ ಸಿನಿಮಾದ ರಿಲೀಸ್ ದಿನಾಂಕದಂದು ಇಡೀ ದೇಶಾದ್ಯಂತ ಚರ್ಚೆಯಾಗಿದೆ. ಆ ಸಂದರ್ಭದಲ್ಲಿ ಶಾಲೆಗಳು ಕೂಡ ಇವೆ. ಹೀಗಾಗಿ, ಕುಟುಂಬ ಸಮೇತ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿರುತ್ತದೆ.
#ಬ್ರೇಕಿಂಗ್ ನ್ಯೂಸ್… ಎಸ್ ಎಸ್ ರಾಜಮೌಳಿಯವರ ಬಹು ನಿರೀಕ್ಷಿತ ಬಿಗ್ಗಿ ‘ವಾರಣಾಸಿ’ 7 ಏಪ್ರಿಲ್ 2027 ರಂದು ಬಿಡುಗಡೆಯಾಗಲಿದೆಯೇ?… ಮಾಸ್ಟರ್ ಕಥೆಗಾರನ ಬಗ್ಗೆ ಪ್ರಚಂಡ ಊಹಾಪೋಹಗಳಿವೆ #ಎಸ್.ಎಸ್.ರಾಜಮೌಳಿಬಹು ನಿರೀಕ್ಷಿತ ದೊಡ್ಡಣ್ಣ #ವಾರಣಾಸಿ ವಿಶ್ವಾದ್ಯಂತ ಬಿಡುಗಡೆಗೆ ಸಜ್ಜಾಗುತ್ತಿದೆ [Wednesday] 7 ಏಪ್ರಿಲ್ 2027.
ಹೋರ್ಡಿಂಗ್ಗಳು ಹೊಂದಿವೆ… pic.twitter.com/ZW232tPXIH
— ತರಣ್ ಆದರ್ಶ್ (@taran_adarsh) ಜನವರಿ 29, 2026
ಈ ಮೊದಲು ರಾಜಮೌಳಿ ಅವರು ‘ವಾರಣಾಸಿ’ ಟೈಟಲ್ ಲಾಂಚ್ ಮಾಡಲು ದೊಡ್ಡದಾದ ಈವೆಂಟ್ ಮಾಡಿದರು. ಹೈದರಾಬಾದ್‌ನಲ್ಲಿ ಈವೆಂಟ್ ನಡೆದಿತ್ತು. ಇದಕ್ಕೆ 20-25 ಕೋಟಿ ರೂಪಾಯಿ ವೆಚ್ಚವಾಗಿತ್ತು. ಈಗ ಅವರು ಬಿಲ್ ಬೋರ್ಡ್ ಗಳನ್ನು ನಿಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ: ರಾಜಮೌಳಿಯ ‘ವಾರಣಾಸಿ’ಗಿಂತ ಮೂರು ಪಟ್ಟು ಹೆಚ್ಚು ವೀವ್ಸ್ ಪಡೆದ ‘ಟಾಕ್ಸಿಕ್’ ಟೀಸರ್
‘ವಾರಣಾಸಿ’ ಸಿನಿಮಾ ದೊಡ್ಡ ಬೆಜಟ್‌ನಲ್ಲಿ ರೆಡಿ ಆಗುತ್ತಿರುವ ಸಿನಿಮಾ. ತೆಲುಗು ಜೊತೆಗೆ ಪರಭಾಷೆ ಸಿನಿಮಾ ಡಬ್ ಆಗಲಿದೆ. ‘ಆರ್‌ಆರ್‌ಆರ್’ ಬಳಿಕ ಬರುತ್ತಿರುವ ಸಿನಿಮಾ ಇದಾಗಿದೆ. ಮಹೇಶ್ ಬಾಬು, ಪ್ರಿಯಾಂಕಾ ಜೊತೆ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಕೂಡ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.
ರಂದು ಪ್ರಕಟಿಸಲಾಗಿದೆ – 7:31 am, ಶುಕ್ರ, 30 ಜನವರಿ 26