Headlines

ಒಂದೆರಡು ಕೋಟಿಯಲ್ಲ ಈ ಆಟಗಾರನಿಗೆ ಹರಾಜಿನಲ್ಲಿ 10 ಕೋಟಿ ಕೊಡಲು ರೆಡಿಯಿದ್ವಿ! ಅಚ್ಚರಿ ಮಾಹಿತಿ ಬಿಚ್ಚಿಟ್ಟ ರಾಜಸ್ಥಾನ ರಾಯಲ್ಸ್

ಒಂದೆರಡು ಕೋಟಿಯಲ್ಲ ಈ ಆಟಗಾರನಿಗೆ ಹರಾಜಿನಲ್ಲಿ 10 ಕೋಟಿ ಕೊಡಲು ರೆಡಿಯಿದ್ವಿ! ಅಚ್ಚರಿ ಮಾಹಿತಿ ಬಿಚ್ಚಿಟ್ಟ ರಾಜಸ್ಥಾನ ರಾಯಲ್ಸ್

ಒಂದೆರಡು ಕೋಟಿಯಲ್ಲ ಈ ಆಟಗಾರನಿಗೆ ಹರಾಜಿನಲ್ಲಿ 10 ಕೋಟಿ ಕೊಡಲು ರೆಡಿಯಿದ್ವಿ! ಅಚ್ಚರಿ ಮಾಹಿತಿ ಬಿಚ್ಚಿಟ್ಟ ರಾಜಸ್ಥಾನ ರಾಯಲ್ಸ್

ಜೈಪುರ: ಭಾರತೀಯ ಕ್ರಿಕೆಟ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ ಬಗ್ಗೆ ರಾಜಸ್ಥಾನ ರಾಯಲ್ಸ್ ತಂಡದ ಡೈರೆಕ್ಟರ್ ಝುಬಿನ್ ಬರೂಚಾ ಅಚ್ಚರಿಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಐಪಿಎಲ್ ಹರಾಜಿನಲ್ಲಿ ವೈಭವ್‌ ಖರೀದಿಸಲು ರಾಜಸ್ಥಾನ ಫ್ರಾಂಚೈಸಿ ಬರೋಬ್ಬರಿ 10 ಕೋಟಿ ರೂಪಾಯಿ ವರೆಗೆ ಮೀಸಲಿಟ್ಟಿತ್ತು ಎಂದಿದ್ದಾರೆ.

ಇತ್ತೀಚೆಗಷ್ಟೇ 15ನೇ ವರ್ಷಕ್ಕೆ ಕಾಲಿಟ್ಟ ವೈಭವ್, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದರು. ‘ಜನರೇಷನ್ ಟ್ಯಾಲೆಂಟ್’ ಎಂದೇ ಕರೆಯಲ್ಪಡುವ ವೈಭವ್‌ನನ್ನು ರಾಜಸ್ಥಾನ ತಂಡ 2025ರ ಐಪಿಎಲ್ ಹರಾಜಿನಲ್ಲಿ 1.1 ಕೋಟಿ ರೂಪಾಯಿಗೆ ಖರೀದಿಸಿತ್ತು.

ಆದರೆ, ಹರಾಜಿಗೂ ಮುನ್ನವೇ ರಾಜಸ್ಥಾನ ತಂಡಕ್ಕೆ ವೈಭವ್ ಸಾಮರ್ಥ್ಯದ ಅರಿವಿತ್ತು ಎಂದು ಝುಬಿನ್ ಬರೂಚಾ ಸ್ಪಷ್ಟವಾಗಿ ಹೇಳಿದ್ದಾರೆ. "ದೇಶದ ಅತ್ಯುತ್ತಮ ಯುವ ಬ್ಯಾಟಿಂಗ್ ಪ್ರತಿಭೆಗಳಲ್ಲಿ ವೈಭವ್ ಕೂಡ ಒಬ್ಬ ಎಂದು ನಾವು ನಂಬಿದ್ದೆವು. ಹೀಗಾಗಿ, ಹರಾಜಿನಲ್ಲಿ ಆತನಿಗಾಗಿ ಒಂದೆರಡಲ್ಲ 10 ಕೋಟಿ ರೂಪಾಯಿ ವರೆಗೆ ಖರ್ಚು ಮಾಡಲು ನಾವು ಸಿದ್ಧರಾಗಿದ್ದೆವು" ಎಂದು ಬರೂಚಾ ಹೇಳಿದ್ದಾರೆ.

ಟ್ರಯಲ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್‌ರನ್ನು ಮೊದಲ ಬಾರಿಗೆ ನೋಡಿದಾಗ ಆದ ಅನುಭವವೇ ವೈಭವ್ ಆಟ ನೋಡಿದಾಗಲೂ ಸಿಕ್ಕಿತು ಎಂದು ಬರೂಚಾ ಹೇಳಿದ್ದಾರೆ.

"ಟ್ರಯಲ್ಸ್‌ನ ಮೊದಲ ಎಸೆತದಲ್ಲೇ ಶಾರ್ಟ್ ಫೈನ್ ಲೆಗ್ ಮೇಲೆ ಬೌಂಡರಿ ಬಾರಿಸಿ ಜೈಸ್ವಾಲ್ ನಮ್ಮನ್ನು ಬೆರಗುಗೊಳಿಸಿದ್ದರು. ಇನ್ನು, ಸಂಜು ಸ್ಯಾಮ್ಸನ್ ಟ್ರಯಲ್ಸ್‌ನಲ್ಲಿ ಅಮಿತ್ ಸಿಂಗ್ ಅವರ ಮೊದಲ ಎಸೆತವನ್ನು ಇಂದೋರ್ ಸ್ಟೇಡಿಯಂನ ಮೇಲ್ಛಾವಣಿಗೆ ತಾಗುವಂತೆ ಸಿಕ್ಸರ್ ಬಾರಿಸಿ ಅಚ್ಚರಿ ಮೂಡಿಸಿದ್ದರು," ಎಂದು ಬರೂಚಾ ನೆನಪಿಸಿಕೊಂಡರು.

ಅದೇ ರೀತಿ, ರಾಜಸ್ಥಾನ್ ನಡೆಸಿದ ಟ್ರಯಲ್ಸ್‌ನಲ್ಲಿ ವೈಭವ್ ತಾನು ಎದುರಿಸಿದ ಐದನೇ ಎಸೆತವನ್ನು, ಅಂದರೆ ಗಂಟೆಗೆ 157 ಕಿ.ಮೀ ವೇಗದಲ್ಲಿ ಬಂದ ಚೆಂಡನ್ನು ಸಿಕ್ಸರ್‌ಗೆ ಅಟ್ಟಿ ಎಲ್ಲರನ್ನೂ ನಿಬ್ಬೆರಗಾಗಿಸಿದ್ದ ಎಂದು ಬರೂಚಾ ಹೇಳಿದರು. ಗಂಟೆಗೆ 157 ಕಿ.ಮೀ ವೇಗದ ಎಸೆತಗಳನ್ನು ಕೂಡಾ ಸುಲಭವಾಗಿ ಎದುರಿಸುವ ವೈಭವ್ ಸಾಮರ್ಥ್ಯವನ್ನು ಕಂಡು ಕ್ರಿಕೆಟ್ ಜಗತ್ತು ಆತನನ್ನು ‘ಬೇಬಿ ಹಲ್ಕ್’ ಎಂದು ಕರೆಯುತ್ತಿದೆ.

ಮುಂಬರುವ ಐರ್ಲೆಂಡ್ ಪ್ರವಾಸಕ್ಕೆ ವೈಭವ್ ಆಯ್ಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಒಂದು ವೇಳೆ ಹಾಗೇನಾದರೂ ಆದರೆ, ಸಚಿನ್ ತೆಂಡೂಲ್ಕರ್ ಅವರ ಅತಿ ಕಿರಿಯ ವಯಸ್ಸಿನಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ದಾಖಲೆಯನ್ನು ವೈಭವ್ ಮುರಿಯಲಿದ್ದಾರೆ.

Source link

Leave a Reply

Your email address will not be published. Required fields are marked *