‘ಅಮೃತವರ್ಷಿಣಿ’ ಧಾರಾವಾಹಿಯ ನಟಿ ರಜಿನಿ ಅವರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಿಮ್ ಟ್ರೇನರ್ ಅರುಣ್ ವೆಂಕಟೇಶ್ ಜೊತೆ ವಿವಾಹ ಆಗಿದ್ದಾರೆ. ಇಂದು (ನವೆಂಬರ್ 10) ಈ ಮದುವೆ ನಡೆದಿದೆ. ನವ ದಂಪತಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.
ಅರುಣ್ ಹಾಗೂ ರಜಿನಿ ಮಧ್ಯೆ ತುಂಬಾನೇ ಹಳೆಯ ಪರಿಚಯವಿದೆ. ಇವರು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ರೀಲ್ಸ್ ಮಾಡುತ್ತಿದ್ದರು. ಅವರ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದವು.
ಈ ಮೊದಲು ‘ನಿಮ್ಮಿಬ್ಬರ ಮಧ್ಯೆ ಪ್ರೀತಿ ಇದೆಯೇ’ ಎಂದು ಕೇಳಿದಾಗ ರಜಿನಿ ಅವರು ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದರು. ‘ನಾವಿಬ್ಬರೂ ಫ್ರೆಂಡ್ಸ್ ಅಷ್ಟೇ. ಗೆಳೆಯರನ್ನೇ ಮದುವೆ ಆದರೂ ಬೆಸ್ಟ್. ಅವರಿಗೆ ನಮ್ಮ ಕಷ್ಟ ಸುಖ ಗೊತ್ತಿದೆ’ ಎಂದು ರಜಿನಿ ಹೇಳಿದ್ದಾರೆ.
ಇಂದು ನಡೆದ ಮದುವೆಯಲ್ಲಿ ಆಪ್ತರು, ಗೆಳೆಯರು, ಕುಟುಂಬದವರು ಹಾಜರಿ ಹಾಕಿದ್ದರು. ಅರುಣ್ ಹಾಗೂ ರಜಿನಿ ವಿವಾಹದ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈ ಫೋಟೋಗಳು ಗಮನ ಸೆಳೆಯುವ ರೀತಿಯಲ್ಲಿಯೇ ಇದೆ.
ರಜಿನಿ ಹಾಗೂ ಅರುಣ್ ಅವರದ್ದು ಪ್ರೇಮ ವಿವಾಹ. ಮನೆಯವರ ಒಪ್ಪಿಗೆ ಪಡೆದ ಬಳಿಕವೇ ಮದುವೆ ಆಗಿದ್ದಾರೆ. ರಜಿನಿ ಕೆಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅರುಣ್ ಅವರು, ಜಿಮ್ ಟ್ರೇನರ್ ಆಗಿದ್ದಾರೆ. ಇವರು ಇನ್ನಷ್ಟೇ ತಮ್ಮ ಲವ್ ಸ್ಟೋರಿ ರಿವೀಲ್ ಮಾಡಬೇಕಾಗಿದೆ.




