Headlines

ಯುವಕರಿಗೆ ರಜನಿಕಾಂತ್ ಕಿವಿಮಾತು: ಸೂಪರ್ ಸ್ಟಾರ್ ಹೇಳಿದ್ದೇನು?

ಯುವಕರಿಗೆ ರಜನಿಕಾಂತ್ ಕಿವಿಮಾತು: ಸೂಪರ್ ಸ್ಟಾರ್ ಹೇಳಿದ್ದೇನು?


ಯುವಕರಿಗೆ ರಜನಿಕಾಂತ್ ಕಿವಿಮಾತು: ಸೂಪರ್ ಸ್ಟಾರ್ ಹೇಳಿದ್ದೇನು?

ತಮ್ಮ ವಿಶಿಷ್ಟ ಮ್ಯಾನರಿಸಂ ಮತ್ತು ಅಭಿನಯದ ಮೂಲಕ ಚಿತ್ರರಂಗವನ್ನು ಆಳುತ್ತಿರುವ ನಟ ರಜನಿಕಾಂತ್ (ರಜನಿಕಾಂತ್), ಭಾರತದ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು. ಕೇವಲ ಸಿನಿಮಾ ಪರದೆಯ ಮೇಲೆ ನಾಯಕನಷ್ಟೇ ಅಲ್ಲದೆ ಸಾಮಾಜಿಕ ಕಾಳಜಿಯುಳ್ಳ ವ್ಯಕ್ತಿಯೂ ಹೌದು ರಜನೀಕಾಂತ್. ಇತ್ತೀಚೆಗಂತೂ ತಮ್ಮ ಸಿನಿಮಾ ಕಾರ್ಯಕ್ರಮಗಳಲ್ಲಿಯೂ ಸಹ ರಜನೀಕಾಂತ್ ಅವರು ಸಾಕಷ್ಟು ಸಂದೇಶಗಳನ್ನು, ಕಿವಿಮಾತುಗಳನ್ನು ಹೇಳುತ್ತಾರೆ. ಇದೀಗ ರಜನೀಕಾಂತ್ ಅವರು ಯುವಕರಿಗಾಗಿ ಸಂದೇಶ ನೀಡಿದ್ದಾರೆ.

ಇದೀಗ ನಟ ರಜನೀಕಾಂತ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ‘ಯುವಜನತೆಯು ತಮ್ಮ ವಿದ್ಯಾಭ್ಯಾಸ ಮತ್ತು ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸಬೇಕು’ ಎಂದು ಅವರು ಹೇಳಿದ್ದಾರೆ. ಇಂದಿನ ಸ್ಪರ್ಧಾತ್ಮಕವಾಗಿ ಉತ್ತಮ ಬದುಕು ಕಟ್ಟಿಕೊಳ್ಳಲು ಶಿಕ್ಷಣವೇ ಅಡಿಪಾಯ ಎಂದು ಅವರು ಒತ್ತಿ ಹೇಳಿದರು. ಇಂದಿನ ಕಾಲಘಟ್ಟದಲ್ಲಿ ಯುವಕರು ಬೇಗನೆ ಆಕರ್ಷಿತರಾಗುತ್ತಿರುವ ಮದ್ಯಪಾನ ಮತ್ತು ಮಾದಕವಸ್ತುಗಳ ಬಗ್ಗೆ ರಜನಿಕಾಂತ್ ಕಳವಳ ವ್ಯಕ್ತಪಡಿಸಿದ್ದಾರೆ.

‘ನಾನು ಯುವಜನತೆಯಲ್ಲಿ ದಯವಿಟ್ಟು ವಿನಂತಿಸಿಕೊಳ್ಳುವುದೇನೆಂದರೆ, ಮದ್ಯ ಮತ್ತು ಮಾದಕವಸ್ತುಗಳಿಂದ ದೂರವಿರಿ. ಒಂದು ವೇಳೆ ನೀವು ಈ ವ್ಯಸನಕ್ಕೆ ಬಲಿಯಾದರೆ, ನಿಮ್ಮ ಜೀವನ ನಿಮಗಷ್ಟೇ ಅಲ್ಲ, ನಿಮ್ಮನ್ನು ನಂಬಿರುವ ಪೋಷಕರಿಗೆ ಮತ್ತು ಪ್ರೀತಿಪಾತ್ರರಿಗೂ ನರಕವಾಗುತ್ತದೆ. ವ್ಯಸನಿಯಾದ ಒಬ್ಬ ವ್ಯಕ್ತಿ ಕೇವಲ ತನ್ನ ಆರೋಗ್ಯವನ್ನಷ್ಟೇ ಹಾಳುಮಾಡಿಕೊಳ್ಳುವುದಿಲ್ಲ, ಬದಲಾಗಿ ಇಡೀ ಕುಟುಂಬವನ್ನು ಬೀದಿಗೆ ತರುತ್ತಾನೆ. ಪೋಷಕರು ತಮ್ಮ ಮಕ್ಕಳ ಮೇಲೆ ಇಟ್ಟಿರುವ ಕನಸುಗಳು ನುಚ್ಚುನೂರಾಗುತ್ತವೆ. ಈ ಭಾವನಾತ್ಮಕ ಅಂಶವನ್ನು ರಜನಿಕಾಂತ್ ತಮ್ಮ ಸಂದೇಶದಲ್ಲಿ ಬಹಳ ತೀಕ್ಷ್ಣವಾಗಿ ಪ್ರಸ್ತಾಪಿಸಿದ್ದಾರೆ’ ಎಂದು ರಜನೀಕಾಂತ್.

ಇದನ್ನೂ ಓದಿ:ರಜನೀಕಾಂತ್‌ಗೆ ಕೈಕೊಟ್ಟ ಶಾರುಖ್ ಖಾನ್, ‘ಜೈಲರ್ 2’ಗೆ ನೋ?

ರಜನೀಕಾಂತ್ ಪ್ರಸ್ತುತ ‘ಜೈಲರ್ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಇದೀಗ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಅದಾದ ಬಳಿಕ ರಜನೀಕಾಂತ್ ಹಾಗೂ ಕಮಲ್ ಹಾಸನ್ ಅವರು ಒಟ್ಟಿಗೆ ಸಿನಿಮಾದಲ್ಲಿ ನಟಿಸಲಿದ್ದಾರೆ, ಸಿನಿಮಾವನ್ನು ನೆಲ್ಸನ್ ನಿರ್ದೇಶನ ಮಾಡಲಿದ್ದಾರೆ, ಕಮಲ್ ಹಾಸನ್ ಅವರೇ ನಿರ್ಮಾಣ ಮಾಡಲಿದ್ದಾರೆ. ಅದಾದ ಬಳಿಕ ಐತಿಹಾಸಿಕ ಸಿನಿಮಾ ಒಂದರಲ್ಲಿ ರಜನೀಕಾಂತ್ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *