
ತಮಿಳುನಾಡಿನಲ್ಲಿ ಚುನಾವಣೆ ಕಾವು ಜೋರಾಗಿದೆ. ಎಲ್ಲಾ ಪಕ್ಷದವರು ಪ್ರಚಾರಕ್ಕೆ ಇಳಿದಿದ್ದಾರೆ. ಈಗ ಚುನಾವಣಾ ಪ್ರಚಾರದ ವೇಳೆ ದಳಪತಿ ವಿಜಯ್ ಅವರ ಟಿವಿ ಪಕ್ಷದ ನಾಯಕ ಆಧವ್ ಅರ್ಜುನ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣೆಗೆ ಬರದಿರಲು ರಜನಿಗೆ ಒತ್ತಡ ಇತ್ತು. ಈ ಚರ್ಚೆಯನ್ನು ಹುಟ್ಟುಹಾಕಿದೆ. ಜೊತೆಗೆ, ವಿಜಯ್ ಗೆ ಈ ರೀತಿಯ ಬೆದರಿಕೆ ಬಂದರೂ ಅವರು ಎದುರಿಸಿ ನಿಲ್ಲುತ್ತಿದ್ದಾರೆ. ಈ ಹೇಳಿಕೆಗೆ ಈಗ ರಜನಿಕಾಂತ್ (ರಜನಿಕಾಂತ್) ಅವರೇ ಉತ್ತರ ನೀಡಿದ್ದಾರೆ
ನಟ ರಜನಿಕಾಂತ್ ರಾಜಕೀಯ ಪ್ರವೇಶಿಸಲು ಪ್ರಯತ್ನಿಸಿದ್ದರು.ಇದಕ್ಕಾಗಿ ಎಲ್ಲಾ ಸಿದ್ಧತೆ ನಡೆದಿತ್ತು. ಆದರೆ, ಆ ಸಂದರ್ಭದ ಅನಾರೋಗ್ಯ ಕಾಡಿತು. ಅದನ್ನೇ ಮುಂದಿಟ್ಟುಕೊಂಡು ಅವರು ರಾಕೀಯದಿಂದ ಹಿಂದೆ ಸರಿದರು. ಆದರೆ, ಇದಕ್ಕೆ ಬೇರೆಯದೇ ಕಾರಣ ಎಂದು ಆಧವ್ ಅರ್ಜುನ್ ಹೇಳಿದ್ದಾರೆ. ‘ರಜನಿಕಾಂತ್ ಚುನಾವಣೆಗೆ ಬರಲು ಪ್ರಯತ್ನಿಸಿದಾಗ ಡಿಎಂಕೆ ಕುಟುಂಬಕ್ಕೆ ಬೆದರಿಕೆ ಹಾಕಿದೆ. ರಜನಿಕಾಂತ್ ಅವರನ್ನು ಟೀಕಿಸುತ್ತಿಲ್ಲ ಆದರೆ ವಿಜಯ್ ಅವರಿಗೆ ಅಂತಹ ಒತ್ತಡವನ್ನು ತಡೆದುಕೊಳ್ಳುವ ಧೈರ್ಯವಿದೆ’ ಎಂದು ಅರ್ಜುನ ವಿವರಿಸಿದರು.
ಈ ವಿಷಯಕ್ಕೆ ರಜನಿಕಾಂತ್ ಉತ್ತರಿಸಿದ್ದಾರೆ. ಟಿವಿಕೆ ನಾಯಕನ ಹೇಳಿಕೆಯನ್ನು ಟೀಕಿಸಿದ ಎಲ್ಲರಿಗೂ ರಜನಿಕಾಂತ್ ಧನ್ಯವಾದ ಹೇಳಿದ್ದಾರೆ. ‘ಸಮಯ ಮಾತನಾಡುವುದಿಲ್ಲ. ಆದರೆ ಅದು ಕಾದು ನಂತರ ಉತ್ತರ ನೀಡಿದೆ’ ಎಂದು ರಜನಿಕಾಂತ್ ಹೇಳಿದ್ದಾರೆ.
ಇದನ್ನೂ ಓದಿ: ಆಪ್ತ ಗೆಳೆಯನಿಗೂ ಇಲ್ಲ ರಿಯಾಯಿತಿ, ಕಮಲ್ ಜೊತೆ ಸಿನಿಮಾಕ್ಕೆ ರಜನಿಕಾಂತ್ ಪಡೆದ ಸಂಭಾವನೆ ಎಷ್ಟು?
‘ಅವರ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಿ ನನ್ನ ಪರವಾಗಿ ಧ್ವನಿ ಎತ್ತಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುವುದಿಲ್ಲ, ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ನಾರ್ ನಾಗೇಂದ್ರನ್, ಕೇಂದ್ರ ಸಚಿವ ಎಲ್. ಮುರುಗನ್, ತಮಿಳುನಾಡು ಸಚಿವ ರಘುಪತಿ, ನನ್ನ ಗೆಳೆಯ ಅಣ್ಣಮಲೈ ಸೇರಿ ಎಲ್ಲರಿಗೂ ಧನ್ಯವಾದ’ ಎಂದು ಅವರು ಹೇಳಿದ್ದಾರೆ.
#ಸೂಪರ್ ಸ್ಟಾರ್ ರಜನಿಕಾಂತ್ ಬ್ರೇಕ್ಸ್ ಸೈಲೆನ್ಸ್ ಮುಗಿದಿದೆ #ತಲಪತಿ ವಿಜಯ್ನ ರಾಜಕೀಯ ಪಕ್ಷ #ಟಿವಿಕೆ ಕಾಮೆಂಟ್ಗಳು, ಉಲ್ಲೇಖಿಸುವುದು: “ಸಮಯವು ಮಾತನಾಡುವುದಿಲ್ಲ, ಆದರೆ ಅದು ಕಾಯುತ್ತದೆ ಮತ್ತು ಉತ್ತರವನ್ನು ನೀಡುತ್ತದೆ”#ರಜನಿಕಾಂತ್ ಇತ್ತೀಚಿನ ಪತ್ರಿಕಾ ಪ್ರಕಟಣೆಯು “ಟಿವಿಕೆ ಪಕ್ಷದಲ್ಲಿ ನಾಯಕತ್ವದ ಸ್ಥಾನವನ್ನು ಹೊಂದಿರುವ ಶ್ರೀ ಅಧವ್ ಅರ್ಜುನ ಇತ್ತೀಚೆಗೆ… pic.twitter.com/PxfpcXJTYX
— ಚಲನಚಿತ್ರಗಳು ಸಿಂಗಾಪುರ (@MoviesSingapore) ಮಾರ್ಚ್ 17, 2026
ಅರ್ಜುನ್ ಹೇಳಿಕೆ ಏನು?
ಡಿಎಂಕೆ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ ಎಂದು ಹೇಳಲಾಗಿದೆ. ಪ್ರತಿಭಟನೆಯಲ್ಲಿ ಮಾತನಾಡಿದ ಅರ್ಜುನ, ‘ಎಂಜಿಆರ್ ನಂತರ, ರಾಜಕೀಯ ಪ್ರವೇಶಿಸಲು ಉದ್ದೇಶಿಸಿರುವ ಅತ್ಯಂತ ಜನಪ್ರಿಯ ನಟರಲ್ಲಿ ರಜನಿಕಾಂತ್ ಒಬ್ಬರು. ರಜನಿಕಾಂತ್ ತಮಿಳುನಾಡು ರಾಜಕೀಯ ಪ್ರವೇಶಿಸಲು ಮತ್ತು ವ್ಯವಸ್ಥೆ ಬದಲಾಯಿಸಲು ಬಯಸಿದ್ದರು. ಆದಾಗ್ಯೂ, ಡಿಎಂಕೆ ಕುಟುಂಬವು ರಜನಿಕಾಂತ್ ಅವರಿಗೆ ಹಲವಾರು ಬೆದರಿಕೆಗಳನ್ನು ಹಾಕಿತು. ಅವರು ರಾಜಕೀಯ ಪ್ರವೇಶಿಸದಂತೆ ತಡೆದರು. ಈಗ ಅವರು ಸಿನಿಮಾ ಮಾಡಿದ್ದಾರೆ’ ಎಂದಿದ್ದರು ಅರ್ಜುನ. ಈ ಹೇಳಿಕೆಯನ್ನು ಅನೇಕರು ಖಂಡಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.