Headlines

ರಜನಿ ಕೊನೆಯ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ ಆ ವಿಶೇಷ ವ್ಯಕ್ತಿ

ರಜನಿ ಕೊನೆಯ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ ಆ ವಿಶೇಷ ವ್ಯಕ್ತಿ


ರಜನಿಕಾಂತ್ (ರಜನಿಕಾಂತ್) ಅವರು ಸದ್ಯ ‘ಜೈಲರ್ 2’ ಸಿನಿಮಾ ಶೂಟ್‌ನಲ್ಲಿ ಬ್ಯೂಸಿ ಇದ್ದಾರೆ. ಈ ಚಿತ್ರದ ಶೂಟ್ ವಿವಿಧ ಹಂತಗಳಲ್ಲಿ ಭರದಿಂದ ಸಾಗಿದೆ. ಹೀಗಿರುವಾಗಲೇ ರಜನಿಕಾಂತ್ ಕೊನೆಯ ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಚಿತ್ರವನ್ನು ರಜನಿ ಮಗಳೇ ನಿರ್ಮಾಣ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಆಸೆಯನ್ನು ನೀಡಲು ರಜನಿ ಕೂಡ ಒಪ್ಪಿದ್ದಾರಂತೆ.

ಹಲವು ವರ್ಷ ಚಿತ್ರರಂಗದಲ್ಲಿ ಶ್ರಮಿಸಿ ನಂತರ ವೃತ್ತಿಗೆ ಗುಡ್ ಬೈ ಹೇಳಬೇಕು ಎಂದರೆ ಭಾವನಾತ್ಮಕವಾಗಿ ಅದು ನಿಜವಾಗಿಯೂ ಚಾಲೆಂಜಿಂಗ್ ಅನ್ನಿಸೋ ವಿಷಯ. ಕೊನೆಯ ಸಿನಿಮಾ ಮೆಮೊರೆಬಲ್ ಆಗಿರಬೇಕು ಎಂದು ಅನೇಕರು ಬಯಸುತ್ತಾರೆ. ಈ ಎಲ್ಲಾ ಕಾರಣದಿಂದ ಸೌಂದರ್ಯ ರಜನಿಕಾಂತ್ ಅವರು ಸಿನಿಮಾ ನಿರ್ಮಾಣ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ಸಾಮಾನ್ಯವಾಗಿ ಕೊನೆಯ ಸಿನಿಮಾ ಎಂದಾಗ ಬಿಸ್ನೆಸ್ ದೃಷ್ಟಿಯಲ್ಲಿ ಹೆಚ್ಚು ಲಾಭ ತಂದುಕೊಡುತ್ತದೆ. ರಜನಿ ಅವರನ್ನು ಇನ್ನೆಂದೂ ದೊಡ್ಡ ಪರದೆಯ ಮೇಲೆ ನೋಡಲು ಸಾಧ್ಯವಿಲ್ಲ ಎಂಬ ಭಾವನಾತ್ಮಕ ನೆಲೆಗಟ್ಟಿನ ಮೇಲೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ವೀಕ್ಷಿಸಲು ತೆರೆಳುತ್ತಾರೆ. ಇನ್ನು, ಟಿವಿ ಹಾಗೂ ಒಟಿಟಿ ಹಕ್ಕುಗಳು ಕೂಡ ದೊಡ್ಡ ಸಂಖ್ಯೆಯಲ್ಲಿ ಬಿಕರಿ ಆಗುವ ಸಾಧ್ಯತೆ ಇರುತ್ತದೆ.

ರಜನಿಕಾಂತ್ ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಶ್ರಮಿಸಿದ್ದಾರೆ. ಅವರ ದೇಹ ಆ್ಯಕ್ಷನ್ ದೃಶ್ಯಗಳನ್ನು ಮಾಡಲು ಪ್ರತಿಕ್ರಿಯಿಸುತ್ತಿಲ್ಲ. ಹೀಗಾಗಿ ಡ್ಯೂಪ್ ಬಳಸಿ ಈ ರೀತಿಯ ದೃಶ್ಯಗಳನ್ನು ಹಿಡಿಯಬೇಕಿದೆ. ಇದೆಲ್ಲದರ ಮಧ್ಯೆ ನಟಿಸಲು ಸಾಕಷ್ಟು ಶ್ರಮ ಹಾಕಲೇಬೇಕು. ಈ ಎಲ್ಲಾ ಕಾರಣದಿಂದ ವಿಶ್ರಾಂತಿ ಪಡೆಯುವ ಆಲೋಚನೆಯಲ್ಲಿ ಅವರು ಇದ್ದಾರೆ.

ಇದನ್ನೂ ಓದಿ: ಆಪ್ತ ಗೆಳೆಯನಿಗೂ ಇಲ್ಲ ರಿಯಾಯಿತಿ, ಕಮಲ್ ಜೊತೆ ಸಿನಿಮಾಕ್ಕೆ ರಜನಿಕಾಂತ್ ಪಡೆದ ಸಂಭಾವನೆ ಎಷ್ಟು?

ರಜನಿಕಾಂತ್ ಇನ್ನೂ ಕೆಲವು ಸಿನಿಮಾಗಳನ್ನು ಮಾಡುತ್ತಾರೆ ಎಂಬ ವರದಿ ಕೂಡ ಇದೆ. ಅವರು ಕಮಲ್ ಹಾಸನ್ ಜೊತೆ ಸಿನಿಮಾ ಒಂದನ್ನು ಮಾಡಬೇಕಿದೆ. ಇದಾದ ಬಳಿಕ ಅವರ ಕೊನೆಯ ಸಿನಿಮಾ ಸೆಟ್ಟೇರುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಅಷ್ಟೇ ಅಲ್ಲ, ಕೊನೆಯ ಸಿನಿಮಾಗೆ ನಿರ್ದೇಶನ ಮಾಡುವವರು ಯಾರು ಎಂಬ ಕುತೂಹಲವೂ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.

ರಂದು ಪ್ರಕಟಿಸಲಾಗಿದೆ – 2:48 pm, ಬುಧವಾರ, 18 ಫೆಬ್ರವರಿ 26



Source link

Leave a Reply

Your email address will not be published. Required fields are marked *