Headlines

37 ವರ್ಷದ ಹಿಂದೆ ಚಿತ್ರೀಕರಣ ಮುಗಿಸಿ ಈಗ ಬಿಡುಗಡೆ ಆಗುತ್ತಿದೆ ರಜನೀಕಾಂತ್ ಸಿನಿಮಾ

37 ವರ್ಷದ ಹಿಂದೆ ಚಿತ್ರೀಕರಣ ಮುಗಿಸಿ ಈಗ ಬಿಡುಗಡೆ ಆಗುತ್ತಿದೆ ರಜನೀಕಾಂತ್ ಸಿನಿಮಾ


ರಜನೀಕಾಂತ್ (Rajinikanth) ಭಾರತದ ಸೂಪರ್ ಸ್ಟಾರ್ ನಟ. ಭಾರತದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರ ರಜನೀಕಾಂತ್. ಜೊತೆಗೆ ರಜನೀಕಾಂತ್ ಅವರ ಕಾಲ್ ಶೀಟ್ ಗಾಗಿ ನಿರ್ಮಾಪಕರು ಕಾದು ನಿಂತಿದ್ದಾರೆ. ಆದರೆ 37 ವರ್ಷಗಳ ಹಿಂದೆ ರಜನೀಕಾಂತ್ ಇನ್ನೂ ಕೆಲವು ದೊಡ್ಡ ಸ್ಟಾರ್ ನಟರನ್ನು ಹಾಕಿಕೊಂಡು ಬಜೆಟ್ ನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ, ಆದರೆ ಆ ಸಿನಿಮಾ ಈ ವರೆಗೆ ಬಿಡುಗಡೆ ಆಗಿಲ್ಲ. ಆದರೆ ಇದೀಗ 37 ವರ್ಷಗಳ ಬಳಿಕ ಸಿನಿಮಾ ಕೊನೆಗೂ ಬಿಡುಗಡೆ ಕಾಣುತ್ತಿದೆ.

ನಟಿ ರೀನಾ ರಾಯ್ ಅವರ ಸಹೋದರ ರಾಜಾ ರಾಯ್ ಅವರು 1989 ರಲ್ಲಿ ನಿರ್ಮಾಣ ಮಾಡಿದ್ದ ಸಿನಿಮಾ ‘ಹಮ್ ಮೇ ಶೆಹೆನ್ಶಾ ಕೌನ್’ ಇದೀಗ ನಾಲ್ಕು ಚಿತ್ರದ ಬಳಿಕ ಬಿಡುಗಡೆ ಆಗುತ್ತಿದೆ. ರಜನೀಕಾಂತ್ ಮಾತ್ರವೇ ಅಲ್ಲದೆ ಆಗ ಸೂಪರ್ ಸ್ಟಾರ್ ನಟ ಶತೃಘ್ನ ಸಿನ್ಹಾ, ಸ್ಟಾರ್ ನಟಿ ಹೇಮಾ ಮಾಲಿನಿ, ಖ್ಯಾತ ವಿಲನ್ ಅಮರೀಶ್ ಪುರಿ, ಪ್ರೇಮ್ ಚೋಪ್ರಾ ಈ ಸಿನಿಮಾದಲ್ಲಿ ನಟಿಸಿದ್ದರು.

‘ಹಮ್ ಮೇ ಶೆಹೆನ್ಶಾ ಕೌನ್’ ಸಿನಿಮಾವನ್ನು ಆಗಿನ ಜನಪ್ರಿಯ ನಿರ್ದೇಶಕ ಹರ್ಮೇಶ್ ಮಲ್ಹೋತ್ರಾ ನಿರ್ದೇಶನ ಮಾಡಿದ್ದರು. ಸಿನಿಮಾಕ್ಕೆ ಸಂಗೀತ ನೀಡಿದ್ದು ಲಕ್ಷ್ಮಿಕಾಂತ್ ಪ್ಯಾರೇಲಾಲ್, ಸಿನಿಮಾಕ್ಕೆ ಡೈಲಾಗ್ ಬರೆದಿದ್ದು ಸಲ್ಮಾನ್ ಖಾನ್ ತಂದೆ ಸಲೀಂ, ಸರೋಜ್ ಖಾನ್ ನೃತ್ಯ ನಿರ್ದೇಶಕಿ. ಅದ್ಧೂರಿ ತಾರಾಗಣ, ಅದ್ದೂರಿ ಸೆಟ್‌ಗಳನ್ನು ಹಾಕಿ ಬಲು ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದ್ದ ಸಿನಿಮಾವು ಅನಿವಾರ್ಯ ಕಾರಣಗಳಿಂದ ಇರಲಿಲ್ಲ. ಆದರೆ ಇದೀಗ ಎಐ ಬಳಸಿ ಸಿನಿಮಾವನ್ನು ಪೂರ್ತಿ ಮಾಡಿಲ್ಲ, ಬಿಡುಗಡೆಗೆ ಸಜ್ಜು ಮಾಡಲಾಗಿದೆ.

ಇದನ್ನೂ ಓದಿ:ರಜನೀಕಾಂತ್ ಮತ್ತು ಗಿಲ್ಲಿ: ಒಂದು ಬಿರಿಯಾನಿಯ ಕತೆ

ಇದೀಗ ಸಿನಿಮಾದ ಬಗ್ಗೆ ಬಿಡುಗಡೆ ಮಾಡಿರುವ ನಿರ್ಮಾಪಕ ಮತ್ತು ನಿರ್ಮಾಪಕರು, ಸಿನಿಮಾ ನಾವು ಪೂರ್ಣ ಮಾಡಿದ್ದೆವು, ಆದರೆ ಈಗ ಐ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿ, ಈಗಿನ ತಂತ್ರಜ್ಞಾನಕ್ಕೆ ತಕ್ಕಂತೆ ಸಿನಿಮಾವನ್ನು ಅಪ್‌ಡೇಟ್ ಮಾಡಲಾಗಿದೆ. ದೃಶ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ನಾವು ಎಐ ಅನ್ನು ಬಳಸಿದ್ದೇವೆ. ಸಿನಿಮಾವನ್ನು 4ಕ ಫಾರ್ಮ್ಯಾಟ್‌ಗೆ ಬದಲಾಯಿಸಲಾಗಿದೆ, 5.1 ಸರೌಂಡ್ ಸೌಂಡ್ ಅನ್ನು ಅಳವಡಿಸಲಾಗಿದೆ.

‘ಹಮ್ ಮೇ ಶೆಹೆನ್ಶಾ ಕೌನ್’ ಸಿನಿಮಾವನ್ನು ಆಗ 35 ಎಂಎಂ ಈಸ್ಟಮನ್ ಕಲರ್‌ನಲ್ಲಿ ಚಿತ್ರೀಕರಣ ಮಾಡುವಂತೆ. ಸಿನಿಮಾದ ಚಿತ್ರೀಕರಣ ಆಗಲೇ ಇರಲಿಲ್ಲ ಸಹ ಕೆಲವು ಕಾರಣಗಳಿಂದಾಗಿ ಸೆನ್ಸಾರ್ ಸರ್ಟಿಫಿಕೇಟ್ ಸಿನಿಮಾವನ್ನು ಸಲ್ಲಿಸಲಾಗಲಿಲ್ಲ. ಆದರೆ ಈಗ ಮತ್ತೊಮ್ಮೆ ಸಿನಿಮಾಕ್ಕೆ ಅಂತಿಮ ಸ್ಪರ್ಷ ನೀಡಿದ್ದು, ಸಿನಿಮಾವನ್ನು ಸೆನ್ಸಾರ್ ಗೆ ಕಳಿಸಿ ಬಿಡುಗಡೆ ಮಾಡಲಾಗುತ್ತಿದೆ. ಏಪ್ರಿಲ್ ತಿಂಗಳಿನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *