Headlines

ಜೈಲು ಸೇರಿದ ರಾಜ್​ಪಾಲ್ ಯಾದವ್​​ಗೆ ಹರಿದು ಬರುತ್ತಿದೆ ನೆರವು

ಜೈಲು ಸೇರಿದ ರಾಜ್​ಪಾಲ್ ಯಾದವ್​​ಗೆ ಹರಿದು ಬರುತ್ತಿದೆ ನೆರವು


ಜೈಲು ಸೇರಿದ ರಾಜ್​ಪಾಲ್ ಯಾದವ್​​ಗೆ ಹರಿದು ಬರುತ್ತಿದೆ ನೆರವು

ಬಾಲಿವುಡ್ (Bollywoo) ಖ್ಯಾತ ಹಾಸ್ಯನಟ ರಾಜ್‌ಪಾಲ್ ಯಾದವ್ 2010ರ ಹಳೆಯ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ದೋಷಿಯಾಗಿ ಶಿಕ್ಷೆಗೆ ಗುರಿಯಾಗಿದ್ದಾರೆ. ಹಲವು ವರ್ಷಗಳ ಕಾಲ ನಡೆದ ನ್ಯಾಯಾಲಯದ ಸಮರದಲ್ಲಿ ರಾಜ್ಪಾಲ್ ಯಾದವ್ ಅವರಿಗೆ ನ್ಯಾಯಾಲಯದ ಆದೇಶದಂತೆ ತಿಹಾರ್ ಜೈಲಿಗೆ ಸರೆಂಡರ್ ಆಗಿದ್ದು ಮುಂದಿನ ಹಲವು ತಿಂಗಳುಗಳಲ್ಲಿ ಅವರು ಜೈಲಿನಲ್ಲಿ ಸೆರೆವಾಸ ಅನುಭವಿಸಬೇಕಾಗಿದೆ. ಆದರೆ ಇದೀಗ ರಾಜ್ಪಾಲ್ ಯಾದವ್ ಅವರಿಗೆ ಚಿತ್ರರಂಗದ ನೆರವು ಸಿಗುತ್ತಿದೆ.

ರಾಜ್‌ಪಾಲ್ ಯಾದವ್ ಬಾಲಿವುಡ್‌ನಲ್ಲಿ 27 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ದೇಶದ ಅತ್ಯುತ್ತಮ ಹಾಸ್ಯನಟರಲ್ಲಿ ರಾಜ್ಪಾಲ್ ಯಾದವ್ ಸಹ ಒಬ್ಬರು. ಇದೇ ಕಾರಣಕ್ಕೆ ಚಿತ್ರರಂಗದ ಕೆಲವರು ಇದೀಗ ರಾಜ್‌ಪಾಲ್ ಯಾದವ್ ಅವರ ನೆರವಿಗೆ ಬಂದಿದ್ದಾರೆ. ಇತ್ತೀಚೆಗೆ ಟ್ವೀಟ್ ಮಾಡಿರುವ ನಟ ಸೋನು ಸೂದ್, ‘ಚಿತ್ರರಂಗದವರು ರಾಜ್‌ಪಾಲ್ ಯಾದವ್ ನೆರವಿಗೆ ಬರಬೇಕು, ಅವರೊಟ್ಟಿಗೆ ಸಿನಿಮಾ ಸಹಿ ಮಾಡಿಸಿಕೊಂಡಿದ್ದರೂ ಅವರಿಗೆ ಅಡ್ವಾನ್ಸ್ ರೂಪದಲ್ಲಿ ಹಣ ನೀಡಿ, ನಾನೂ ಸಹ ಹಾಗೆ ಮಾಡುತ್ತಿದ್ದೇನೆ. ಇದರಿಂದ ಅವರ ಸಮಸ್ಯೆಗೆ ಪರಿಹಾರ ಸಿಗುತ್ತದೆ’ ಎಂದಿದ್ದರು.

ಇದೀಗ ಸಂಗೀತ ನಿರ್ದೇಶಕ ರಾವ್ ಇಂದರ್ಜೀತ್ ಸಿಂಗ್ ಅವರು ರಾಜ್ಪಾಲ್ ಯಾದವ್ ಸಹಾಯಕ್ಕೆ ಬಂದಿದ್ದು, ರಾಜ್ ಪಾಲ್ ಯಾದವ್ ಅವರಿಗೆ 1.11 ಕೋಟಿ ರೂಪಾಯಿಗಳ ನೆರವು ನೀಡಿದ್ದಾರೆ. ‘ಭೂಲ್ ಭುಲಯ್ಯ’, ‘ಹಂಗಾಮ’, ‘ವೆಲ್ ಕಮ್’ ಇನ್ನೂ ಹಲವು ಹಿಂದಿ ಸಿನಿಮಾಗಳಿಗೆ ಸಂಗೀತ ನೀಡಿರುವ ರಾವ್ ಇಂದರ್‌ಜೀತ್ ಸಿಂಗ್ ಅವರು ರಾಜ್‌ಪಾಲ್ ಯಾದವ್ ಅವರಿಗೆ ನೆರವಿನ ಹಸ್ತ ಚಾಚಿದ್ದಾರೆ.

ಇದನ್ನೂ ಓದಿ:ದಕ್ಷಿಣದ ಆ ನಟ ನಟಿಯರನ್ನು ತೆರೆಮೇಲೂ ಕೀಳಾಗಿ ಕಾಣಲು ಇಷ್ಟಪಡುವುದಿಲ್ಲ; ಪ್ರಮುಖ ನಟಿ

ಈ ಬಗ್ಗೆ ಮಾತನಾಡುತ್ತಿರುವ ಇಂದರ್‌ಜೀತ್ ಸಿಂಗ್, ‘ರಾಜ್‌ಪಾಲ್ ಯಾದವ್ ಅವರು ಭಾರತೀಯರನ್ನು ಸಂಗ್ರಹಿಸಿದ್ದರಿಂದ ರಂಜಿಸುತ್ತಾ ಬಂದಿದ್ದಾರೆ. ಸಿನಿಮಾ ಪ್ರೇಮಿಗಳಿಗೆ ಹಲವು ನೆನಪುಳಿವ, ಸಂತೋಷದ ಕ್ಷಣಗಳನ್ನು. ಭಾರತೀಯ ಚಿತ್ರರಂಗದ ಅವಿಭಾಜ್ಯ ಅಂಗ ಸಹ ಆಗಿದ್ದಾರೆ. ಇದು ಕೇವಲ ಹಣದ ಸಹಾಯ ಮಾತ್ರ ಅಲ್ಲ. ಇದು ಒಬ್ಬ ವ್ಯಕ್ತಿ ಕಷ್ಟದಲ್ಲಿದ್ದಾಗ, ಒಬ್ಬ ಚಿತ್ರಕರ್ಮಿ ಕಷ್ಟದಲ್ಲಿ ಕರ್ತವ್ಯದಲ್ಲಿ ಜೊತೆಗೆ ನಿಲ್ಲಬೇಕಾದದ್ದು ಎಂಬ ಕಾರಣಕ್ಕೆ ಮಾಡಿದ ಸಹಾಯ’ ಸೇವೆ.

ರಾಜ್‌ಪಾಲ್ ಯಾದವ್ ಅವರಿಗೆ 10 ಲಕ್ಷ ರೂಪಾಯಿ ಹಣ ಸಹಾಯ ಮಾಡುವುದಾಗಿ ವಿವಾದಾತ್ಮಕ ಸಿನಿಮಾ ವಿಮರ್ಶಕ ಕಮಾಲ್ ಆರ್ ಖಾನ್ ಹೇಳಿದ್ದಾರೆ. ಕೆಲ ಮಾಹಿತಿಗಳ ಪ್ರಕಾರ, ಚಿತ್ರರಂಗದ ಕೆಲವು ದಿಗ್ಗಜರು ತೆರೆ ಮರೆಯಲ್ಲಿ ರಾಜ್‌ಪಾಲ್ ಯಾದವ್ ಅವರಿಗೆ ಹಣವಿದೆ ಎಂದು ಸಹ ಹೇಳಿದ್ದಾರೆ.

ರಾಜ್‌ಪಾಲ್ ಯಾದವ್ ಅವರು 9 ಕೋಟಿ ರೂಪಾಯಿ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಒಂದೊಮ್ಮೆ ಅವರು 9 ಕೋಟಿ ರೂಪಾಯಿ ಹಣವನ್ನು ಕಟ್ಟಿದ್ದೇ ಆದಲ್ಲಿ ಅವರು ಜೈಲಿನಿಂದ ಬಿಡುಗಡೆ ಹೊಂದಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *