ಚೆಕ್ ಬೌನ್ಸ್ ಪ್ರಕರಣದಿಂದಾಗಿ ಸುದ್ದಿಯಲ್ಲಿರುವ ನಟ ರಾಜಪಾಲ್ ಯಾದವ್ ಅವರ ವೈಯಕ್ತಿಕ ಜೀವನವೂ ಒಂದು ರೀತಿ ದುರಂತ ಕಥೆ. ಕೇವಲ 20ನೇ ವಯಸ್ಸಿನಲ್ಲಿ ಪತ್ನಿಯನ್ನು ಕಳೆದುಕೊಂಡರೂ, ಕುಟುಂಬದ ಬೆಂಬಲದಿಂದ ಅವರು ಜೀವನವನ್ನು ಮತ್ತೆ ಕಟ್ಟಿಕೊಂಡರು. ಅವರ ಕಥೆ ಕುಟುಂಬ ಮತ್ತು ಪ್ರೀತಿಗೆ ಒಂದೊಳ್ಳೆಯ ಉದಾಹರಣೆ.

1991ರಲ್ಲಿ ಮಗಳ ಜನನದ ಸಮಯದಲ್ಲಿ ಅವರ ಮೊದಲ ಪತ್ನಿ ಕರುಣಾ ನಿಧನರಾದರು. ‘ನನ್ನ ಮೊದಲ ಪತ್ನಿ ಮಗಳಿಗೆ ಜನ್ಮ ನೀಡಿ, ಅದೇ ಸಮಯದಲ್ಲಿ ನಿಧನರಾದರು. ಮರುದಿನ ನಾನು ಅವರನ್ನು ನೋಡಲು ಹೋಗಬೇಕಿತ್ತು, ಆದರೆ ಅದರ ಬದಲು ನಾನು ಅವರ ಪಾರ್ಥಿವ ಶರೀರವನ್ನು ನನ್ನ ಹೆಗಲ ಮೇಲೆ ಹೊತ್ತಿದ್ದೆ’ ಎಂದು ರಾಜಪಾಲ್ ಯಾದವ್ ‘ದಿ ಲಲ್ಲನ್‌ಟಾಪ್’ಗೆ ನೀಡಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ಈ ಘಟನೆ ಯಾದವ್ ಅವರಿಗೆ ತೀವ್ರ ಭಾವನಾತ್ಮಕ ಆಘಾತವನ್ನು ನೀಡಿತ್ತು.

ತಮ್ಮ ತಾಯಿ ಮತ್ತು ಅತ್ತಿಗೆ, ಮಗಳು ಜ್ಯೋತಿಗೆ ತಾಯಿಯ ಕೊರತೆಯನ್ನು ಎಂದಿಗೂ ಕಾಡಲು ಬಿಡಲಿಲ್ಲ ಎಂದು ರಾಜಪಾಲ್ ಹೇಳಿದ್ದಾರೆ. ‘ನನ್ನ ಕುಟುಂಬ, ನನ್ನ ತಾಯಿ ಮತ್ತು ಅತ್ತಿಗೆಯಿಂದಾಗಿ, ನನ್ನ ಮಗಳಿಗೆ ತಾಯಿ ಇಲ್ಲ ಎಂಬ ಭಾವನೆ ಎಂದಿಗೂ ಬರಲಿಲ್ಲ. ಅವಳು ತುಂಬಾ ಪ್ರೀತಿಯಿಂದ ಬೆಳೆದಳು’ ಎಂದು ಅವರು ಹೇಳಿದ್ದಾರೆ.
2003ರಲ್ಲಿ ರಾಜಪಾಲ್ ಯಾದವ್, ರಾಧಾ ಅವರನ್ನು ವಿವಾಹವಾದರು. ಅವರು ರಾಧಾರನ್ನು ತಮ್ಮ ಅತಿದೊಡ್ಡ ಶಕ್ತಿ ಎಂದು ಬಣ್ಣಿಸಿದ್ದಾರೆ. ‘ನನ್ನ ಗುರು ಮತ್ತು ಪೋಷಕರ ನಂತರ ನನಗೆ ಹೆಚ್ಚು ಬೆಂಬಲ ನೀಡಿದವರು ಎಂದರೆ, ಅದು ನೂರಕ್ಕೆ ನೂರರಷ್ಟು ನನ್ನ ಪತ್ನಿ’ ಎಂಬುದು ಅವರ ಮಾತು. ರಾಧಾ, ಅವರ ಮೊದಲ ಪತ್ನಿಯ ಮಗಳು ಜ್ಯೋತಿಯನ್ನು ತನ್ನ ಸ್ವಂತ ಮಗಳಂತೆ ಬೆಳೆಸಿದರು ಎಂದು ಯಾದವ್ ಹೇಳಿದ್ದಾರೆ.
ತಮ್ಮ ಪತ್ನಿ ರಾಧಾ ಹಳ್ಳಿಯ ಸಂಪ್ರದಾಯಗಳನ್ನು ಗೌರವಿಸುತ್ತಾರೆ ಎಂದು ರಾಜಪಾಲ್ ಹೇಳಿದ್ದಾರೆ. ‘ನಾನು ನನ್ನ ಪತ್ನಿಗೆ ಸೀರೆ ಉಡಲು ಎಂದಿಗೂ ಹೇಳಿಲ್ಲ, ಆದರೆ ಹಳ್ಳಿಯಲ್ಲಿ ಅವಳು ಮುಸುಕು ಹಾಕಿಕೊಂಡು ಕೂರುತ್ತಾಳೆ. ಹೋಳಿ ಅಥವಾ ದೀಪಾವಳಿಗೆ ಹಳ್ಳಿಗೆ ಹೋದಾಗ, ಅವಳಿಗೆ ಐದು ಭಾಷೆಗಳು ಬರುತ್ತವೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ!’ ಎಂದು ಅವರು ಹೇಳಿದ್ದಾರೆ.

ತಮ್ಮ ಮಗಳ ಪಾಲನೆಯ ಸಂಪೂರ್ಣ ಶ್ರೇಯಸ್ಸನ್ನು ರಾಜಪಾಲ್ ತಮ್ಮ ಕುಟುಂಬಕ್ಕೆ ನೀಡಿದ್ದಾರೆ. ‘ರಾಧಾ ನನ್ನ ಮೊದಲ ಪತ್ನಿಯ ಮಗಳನ್ನು ತನ್ನ ಸ್ವಂತ ಮಗಳಂತೆ ಬೆಳೆಸಿದಳು. ಇದರ ಸಂಪೂರ್ಣ ಕ್ರೆಡಿಟ್ ನನ್ನ ಕುಟುಂಬ ಮತ್ತು ಪತ್ನಿಗೆ ಸಲ್ಲಬೇಕು. ನಾನು ಏನನ್ನೂ ಮಾಡಿಲ್ಲ, ನಾನೊಬ್ಬ ಮಾಧ್ಯಮವಷ್ಟೇ’ ಎಂದು ಅವರು ಭಾವುಕರಾಗಿ ಹೇಳಿದ್ದಾರೆ.

ರಾಜಪಾಲ್ ಯಾದವ್ ಮತ್ತು ಅವರ ಮೊದಲ ಪತ್ನಿ ಕರುಣಾ ಅವರ ಮಗಳು ಜ್ಯೋತಿಗೆ ಈಗ ಮದುವೆಯಾಗಿದ್ದು, ಲಕ್ನೋದಲ್ಲಿ ಸಂತೋಷದ ಜೀವನ ನಡೆಸುತ್ತಿದ್ದಾರೆ.

Source link
ರಾಜ್‌ಪಾಲ್ ಯಾದವ್ ಮೊದಲ ಪತ್ನಿಗೇನಾಗಿತ್ತು? ಆ ದುರಂತದ ಬಗ್ಗೆ ಕಣ್ಣೀರಿಟ್ಟ ಹಾಸ್ಯ ನಟ