Headlines

ಮೈಸೂರು ಹುಡುಗನ ಮದುವೆ ಆಗಿದ್ದ ಈ ನಟಿಗೆ ಈಗ ಪಾಕ್ ಪ್ರಜೆಯ ಮದುವೆ ಆಗೋ ಆಸೆ

ಮೈಸೂರು ಹುಡುಗನ ಮದುವೆ ಆಗಿದ್ದ ಈ ನಟಿಗೆ ಈಗ ಪಾಕ್ ಪ್ರಜೆಯ ಮದುವೆ ಆಗೋ ಆಸೆ


ರಾಖಿ ಸಾವಂತ್ (ರಾಖಿ ಸಾವಂತ್) ಅವರು ಬಾಲಿವುಡ್ ಮಂದಿಗೆ ಉಳಿದ ಚಿತ್ರರಂಗದವರಿಗೂ ಪರಿಚಿತರು. ಅವರು ಸುದ್ದಿಯಲ್ಲಿರಲು ಸದಾ ಒಂದಿಲ್ಲೊಂದು ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಅವರು ವಿವಾಹ, ಇತರ ಸಂಬಂಧಗಳು ಇತ್ಯಾದಿ ವಿಷಯಗಳಿಗೆ ಸುದ್ದಿಯಾಗುತ್ತಿದ್ದಾರೆ. ಅವರು ಮೈಸೂರು ಹುಡುಗನ ವಿವಾಹ ಆಗಿದ್ದರು. ಆ ಬಳಿಕ ಇಬ್ಬರೂ ಬೇರೆ ಆದರು. ಈಗ ಅವರಿಗೆ ಪಾಕ್ ಹುಡುಗನ ಮದುವೆ ಆಗೋ ಆಸೆ.

ರಾಖಿ ಸಾವಂತ್ ಅವರು 2019ರಲ್ಲಿ ಭಾರತ ಮೂಲದ ವಿದೇಶಿ ಪ್ರಜೆ ರಿತೇಶ್ ರಾಜ್ ಸಿಂಗ್ ಅವರ ಮದುವೆ ಆದರು. 2022ರಲ್ಲಿ ಇವರು ಬೇರೆ ಆದರು. ‘ಮದುವೆ ಮಾಡಿ ತಪ್ಪು ಮಾಡಿದೆ’ ಎಂದು ಅವರು ಹೇಳಿದ್ದಾರೆ. ನಂತರ 2022ರಲ್ಲಿ ಅವರು ಮತ್ತೆ ಸುದ್ದಿ ಆದರು. ಮೈಸೂರು ಮೂಲದ ಆದಿಲ್ ಖಾನ್ ಜೊತೆ ರಾಖಿ ವಿವಾಹ ಆದರು.

ಮುಸ್ಲಿಂ ಧರ್ಮದ ಪ್ರಕಾರ ರಾಖಿ ವಿವಾಹ ಆದರು. ಮುಸ್ಲಿಂ ಧರ್ಮಕ್ಕೆ ಅವರು ಮತಾಂತರಗೊಂಡರು. ಇಷ್ಟೆಲ್ಲ ಮಾಡಿಯೂ ಇವರ ಸಂಬಂಧ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಉಳಿದುಕೊಳ್ಳಲಿಲ್ಲ. ‘ಆದಿಲ್ ನನಗೆ ಮೋಸ ಮಾಡಿದ, ಆತನಿಗೆ ಅನೈತಿಕ ಸಂಬಂಧ ಇದೆ’ ಎಂದು ರಾಖಿ ಆರೋಪಿಸಿದರು. ಅವರು ನೀಡಿದ ದೂರಿನ ಮೇಲೆ ಆದಿಲ್ನ ಮೈಸೂರಿನಲ್ಲಿ ಬಂಧನ ಕೂಡ.

2025ರಲ್ಲಿ ರಾಖಿ ಪಾಕ್ ನಟನ ಮೇಲೆ ಆಸಕ್ತಿ ತೋರಿಸಿದ್ದರು. ರಾಖಿ ಅವರು ಪಾಕಿಸ್ತಾನದ ನಟ ಹಾಗೂ ಪೊಲೀಸ್ ಅಧಿಕಾರಿ ದೋಡಿ ಖಾನ್ ಜೊತೆ ಮದುವೆ ಆಗುವ ಆಯ್ಕೆ ತೋರಿದರು. ‘ನನಗೆ ಹಲವು ಪ್ರಪೋಸಲ್‌ಗಳು ಬರುತ್ತಿವೆ. ನಾನು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ, ನನ್ನ ಹಿಂದಿನ ಮದುವೆಗಳಲ್ಲಿ ನನಗೆ ಕಿರುಕುಳ ನೀಡಿರುವುದನ್ನು ನೋಡಿ, ವಿವರಿಸಿದ್ದರು’ ಎಂದಿದ್ದರು ರಾಖಿ.

ಇದನ್ನೂ ಓದಿ: ‘ಮದುವೆ ಆಗಲ್ಲ’: ರಾಖಿ ಸಾವಂತ್‌ಗೆ ಪ್ರಪೋಸ್ ಮಾಡಿ ಉಲ್ಟಾ ಹೊಡೆದ ಪಾಕ್ ಮಾಡೆಲ್

ನಂತರ ದೋಡಿ ಖಾನ್ ಈ ಬಗ್ಗೆ ಸ್ಪಷ್ಟನೆ. ‘ನಾನು ರಾಖಿಗೆ ಪ್ರಪೋಸ್ ಮಾಡಿದ್ದು ನಿಜ. ಆದರೆ, ಮದುವೆ ಆಗಲ್ಲ’ ಎಂದಿದ್ದರು. ಈ ವಿಷಯ ಚರ್ಚೆಗೆ ಕಾರಣ. ಈಗ ರಾಖಿ ಸೈಲೆಂಟ್ ಆಗಿದ್ದಾರೆ. ಈ ಮೊದಲು ಅವರು ಹಿಂದಿ ಬಿಗ್ ಬಾಸ್ ನಲ್ಲಿ ಸ್ಪರ್ಧೆ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *