Headlines

ರಕ್ಷಿತ್​ ಶೆಟ್ಟಿಗೆ ಮುಳುವಾಯ್ತು 'ಬ್ಯಾಚುಲರ್​ ಪಾರ್ಟಿ': ಹೈಕೋರ್ಟ್​ನಿಂದ 25 ಲಕ್ಷ ರೂ ದಂಡ! ಆಗಿದ್ದೇನು

ರಕ್ಷಿತ್​ ಶೆಟ್ಟಿಗೆ ಮುಳುವಾಯ್ತು 'ಬ್ಯಾಚುಲರ್​ ಪಾರ್ಟಿ': ಹೈಕೋರ್ಟ್​ನಿಂದ 25 ಲಕ್ಷ ರೂ ದಂಡ! ಆಗಿದ್ದೇನು

ರಕ್ಷಿತ್​ ಶೆಟ್ಟಿಗೆ ಮುಳುವಾಯ್ತು 'ಬ್ಯಾಚುಲರ್​ ಪಾರ್ಟಿ': ಹೈಕೋರ್ಟ್​ನಿಂದ 25 ಲಕ್ಷ ರೂ ದಂಡ! ಆಗಿದ್ದೇನು

ನಟ ರಕ್ಷಿತ್ ಶೆಟ್ಟಿ ಒಡೆತನದ ಪರಂವಾಹ್ ಸ್ಟುಡಿಯೋಗೆ ದೆಹಲಿ ಹೈಕೋರ್ಟ್ 25 ಲಕ್ಷ ರೂ. ದಂಡ ವಿಧಿಸಿದೆ. 2012ರ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ MTR ಮ್ಯೂಸಿಕ್ ಸಂಸ್ಥೆಯ ಹಾಡನ್ನು ಅನುಮತಿಯಿಲ್ಲದೆ ಬಳಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ. ಅಸಲಿ ವಿಷ್ಯ ಇಲ್ಲಿದೆ!

ನಟಿ ರಶ್ಮಿಕಾ ಮಂದಣ್ಣ ಅವರ ಮದುವೆಯ ಬಳಿಕ ರಕ್ಷಿತ್​ ಶೆಟ್ಟಿ ಸಕತ್​ ಸದ್ದು ಮಾಡುತ್ತಿದ್ದಾರೆ. ಇದಕ್ಕೆ ಕಾರಣ, ಇವರ ಎಂಗೇಜ್​ಮೆಂಟ್​ ರಶ್ಮಿಕಾ ಜೊತೆ ನಡೆದು ಕೊನೆಗೆ ಮದುವೆ ಮುರಿದುಬಿದ್ದ ಕಾರಣದಿಂದಾಗಿ. ಇದಕ್ಕಾಗಿ ರಕ್ಷಿತ್​ ಶೆಟ್ಟಿ ಅವರ ರಿಯಾಕ್ಷನ್​ ಏನು ಎನ್ನುವ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ನಡುವೆಯೇ, ಇದೀಗ ದೆಹಲಿ ಹೈಕೋರ್ಟ್​ ನಟನಿಗೆ ಭಾರಿ ಶಾಕ್​ ಕೊಟ್ಟಿದೆ.

ದೆಹಲಿಯ ಹೈಕೋರ್ಟ್​ Rakshit Shetty ಅವರಿಗೆ 25 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇದಕ್ಕೆ ಕಾರಣ ಬ್ಯಾಚುಲರ್​ ಪಾರ್ಟಿ ಸಿನಿಮಾ. ಇವರ ವಿರುದ್ಧ ಎಂಟಿಆರ್​ ಮ್ಯೂಸಿಕ್​ ಸಂಸ್ಥೆಯು ದೆಹಲಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಕಾರಣ, 2012ರಲ್ಲಿ ಬಿಡುಗಡೆಯಾಗಿದ್ದ ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರು ತಮ್ಮ ಹಾಡನ್ನು ಕದ್ದಿದ್ದಾರೆ ಎನ್ನುವ ಕಾರಣಕ್ಕೆ. ಈ ಚಿತ್ರದ ನಿರ್ಮಾಪಕರು ರಕ್ಷಿತ್​ ಶೆಟ್ಟಿ.

ಈ ಹಿನ್ನೆಲೆಯಲ್ಲಿ, ರಕ್ಷಿತ್ ಶೆಟ್ಟಿ ಒಡೆತನದ ಪರಂವಾಹ್ ಸ್ಟುಡಿಯೋಗೆ ದೆಹಲಿಯ ಕೋರ್ಟ್​ ಭಾರಿ ದಂಡ ವಿಧಿಸಿದೆ. ಅತ್ಯಂತ ಚಿಕ್ಕ ಅವಧಿಯವರೆಗೆ ಮಾತ್ರ ಹಾಡನ್ನು ಬಳಸಲಾಗಿದೆ. ಇದು ಅಪರಾಧವಲ್ಲ ಎಂದು ರಕ್ಷಿತ್​ ಶೆಟ್ಟಿ ಪರ ವಕೀಲರ ವಾದವನ್ನು ಕೋರ್ಟ್​ ಮಾನ್ಯ ಮಾಡಲಿಲ್ಲ. ಬೇರೆ ಸಿನಿಮಾದಿಂದ ಒಂದು ಚಿಕ್ಕ ದೃಶ್ಯ ಕಾಪಿ ಮಾಡಿದರೂ ಅದು ಕಾಪಿರೈಟ್ ಉಲ್ಲಂಘನೆಯೇ ಆಗುತ್ತದೆ ಎಂದು ದಂಡ ವಿಧಿಸಿದೆ.

ಅಷ್ಟಕ್ಕೂ ಕರ್ನಾಟಕದ್ದೇ ಆಗಿರೋ MTR Music Company ದೆಹಲಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿರುವ ಹಿಂದೆಯೂ ಉದ್ದೇಶವಿದೆ. ಬೆಂಗಳೂರಿನಲ್ಲಿ ಕಂಪೆನಿ ಇದ್ದರೂ, ಹಾಡನ್ನು ಕದ್ದಿರುವ ಬಗ್ಗೆ ಬೆಂಗಳೂರಿನಲ್ಲಿಯೇ FIR ದಾಖಲು ಆಗಿದ್ದರೂ, ಈ ಕಂಪೆನಿಯ ಕಾನೂನು ವ್ಯವಹಾರಗಳನ್ನು ನೋಡಿಕೊಳ್ಳುವುದು ದೆಹಲಿಯ ಕಂಪೆನಿ. ಲೀಗಲ್​ ಟೀಮ್​ ಇರುವುದು ದೆಹಲಿಯಲ್ಲಿ. ಇದೇ ಕಾರಣಕ್ಕೆ ದೆಹಲಿಯ ಕೋರ್ಟ್​ನಲ್ಲಿ ಕೇಸ್​ ದಾಖಲು ಮಾಡಲಾಗಿತ್ತು.

ಅಂದಹಾಗೆ, MTR ಮ್ಯೂಸಿಕ್​ ಇದಾಗಲೇ ಕೆಜಿಎಫ್​-2 ನಂಥ ಹಲವು ಹಿಟ್​ ಸಿನಿಮಾಗಳ ರೈಟ್ಸ್​ ಕೂಡ ಪಡೆದಿವೆ. ಇಂಟರೆಸ್ಟಿಂಗ್​ ವಿಷ್ಯ ಏನೆಂದರೆ, ಈ ಕಂಪೆನಿ ಇದಾಗಲೇ ಕಾಪಿರೈಟ್​ ಉಲ್ಲಂಘನೆಯ ಬಗ್ಗೆ ಹಲವು ಕೇಸ್​ಗಳನ್ನು ಹಾಕಿ ಜಯ ಸಾಧಿಸಿದೆ.

2022ರಲ್ಲಿ ಭಾರತ್ ಜೋಡೋ ಯಾತ್ರೆಯ ವಿಡಿಯೋಗಳಿಗೆ ಕೆಜಿಎಫ್ 2 ಸಿನಿಮಾದ ಮ್ಯೂಸಿಕ್ ಬಳಸಿದ್ದಕ್ಕಾಗಿ ಇದೇ ಸಂಸ್ಥೆ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಶ್ರೀನೇಟ್ ವಿರುದ್ಧ ಕಾಪಿರೈಟ್ ಕೇಸ್ ಹಾಕಿದ್ದು ಇಲ್ಲಿ ಉಲ್ಲೇಖಾರ್ಹ.

Source link

Leave a Reply

Your email address will not be published. Required fields are marked *