
‘ಉಳಿದವರು ಕಂಡಂತೆ’ ರಕ್ಷಿತ್ ಶೆಟ್ಟಿ (ರಕ್ಷಿತ್ ಶೆಟ್ಟಿ) ಮೊದಲ ನಿರ್ದೇಶನದ ಸಿನಿಮಾ. ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದು. ರಕ್ಷಿತ್ ಶೆಟ್ಟಿ ನಿರ್ದೇಶನ ಪ್ರತಿಭೆಯನ್ನು ಭಾರತೀಯ ಚಿತ್ರರಂಗಕ್ಕೆ ತೋರಿಸಿದ ಸಿನಿಮಾ ಅದು. ‘ಉಳಿದವರು ಕಂಡಂತೆ’ ಬಿಡುಗಡೆ ಆಗಿ ಇಂದಿಗೆ (ಮಾರ್ಚ್ 28) ಬರೋಬ್ಬರಿ 12 ವರ್ಷ. ರಕ್ಷಿತ್ ಶೆಟ್ಟಿ, ‘ಉಳಿದವರು ಕಂಡಂತೆ’ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದು, ಸಿನಿಮಾವನ್ನು ನೆನಪು ಮಾಡಿಕೊಳ್ಳಲು ಏನೇನೋ ಹೊಸ ಕಾರಣಗಳು ಸಿಗುತ್ತಲೇ ಇರುತ್ತವೆ. ಜೊತೆಗೆ ಒಂದು ಲಿಂಕ್ ಸಹ ಹಂಚಿಕೊಂಡಿದ್ದಾರೆ.
‘ಉಳಿದವರು ಕಂಡಂತೆ’ ಸಿನಿಮಾ 2014 ರ ಮಾರ್ಚ್ 28ಕ್ಕೆ ಬಿಡುಗಡೆಯಾಗುತ್ತಿದೆ. ಲೈವ್ ಸೌಂಡ್, ಭಿನ್ನ ರೀತಿಯ ಸ್ಟೋರಿ ಟೆಲ್ಲಿಂಗ್ ಸೇರಿದಂತೆ ಹಲವು ಪ್ರಯೋಗಗಳನ್ನು ರಕ್ಷಿತ್ ಶೆಟ್ಟಿ ಮಾಡಿದ್ದರು. ಸುಮಾರು ವಿಮರ್ಶಕರು ಸಿನಿಮಾ ಚೆನ್ನಾಗಿಲ್ಲ ಎಂದು ಬರೆದರು. ವೀಕ್ಷಣೆಗೂ ಸಹ ಸಿನಿಮಾ ಆರಂಭದಲ್ಲಿ ಅರ್ಥವಾಗಲಿಲ್ಲ. ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಫ್ಲಾಪ್ ಎನಿಸಿಕೊಂಡಿತು. ಆದರೆ ಸಿನಿಮಾಕ್ಕೆ ಒಂದು ಕಲ್ಟ್ ಅಭಿಮಾನಿ ವರ್ಗ ಹುಟ್ಟಿಕೊಳ್ತು, ಸಿನಿಮಾವನ್ನು ಪೈರಸಿ ಡೌನ್ ಲೋಡ್ ಮಾಡಿ ಹೆಚ್ಚು ಮಂದಿ ನೋಡಿದರು. ಹಾಗೆ ನೋಡುತ್ತಾ-ನೋಡುತ್ತಾ ಸಿನಿಮಾ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿತು. ಇದೀಗ 21ನೇ ಶತಮಾನದ ಈ ಅತ್ಯುತ್ತಮ 25 ಭಾರತೀಯ ಸಿನಿಮಾಗಳಲ್ಲಿ ಸ್ಥಾನ ಪಡೆದಿದೆ.
ಇದನ್ನೂ ಓದಿ:ರಕ್ಷಿತ್ ಶೆಟ್ಟಿ ಹೇಗಿದ್ದಾರೆ, ಏನು ಮಾಡ್ತಿದ್ದಾರೆ? ಗೆಳೆಯ ಹೇಮಂತ್ ಕೊಟ್ಟರು ಉತ್ತರ
ಜನಪ್ರಿಯ ಸಿನಿಮಾ ಮ್ಯಾಗಜೈನ್ ‘ದಿ ಹಾಲಿವುಡ್ ರಿಪೋರ್ಟರ್’ 2000ರ ಶತಕದಲ್ಲಿ ಅಥವಾ 21 ನೇ ಶತಮಾನದ ಈ ಅತ್ಯುತ್ತಮ 25 ಭಾರತೀಯ ಸಿನಿಮಾಗಳ ಪಟ್ಟಿ ಪ್ರಕಟಿಸಿದ್ದು, ಆ ಪಟ್ಟಿಯಲ್ಲಿ ‘ಉಳಿದವರು ಕಂಡಂತೆ’ ಸಿನಿಮಾ ಸ್ಥಾನ ಪಡೆದಿದೆ. ‘ಲಗಾನ್’, ‘ಗ್ಯಾಂಗ್ಸ್ ಆಫ್ ವಸೇಪುರ್’ ಸೇರಿದಂತೆ ಹಲವು ಅತ್ಯುತ್ತಮ ಸಿನಿಮಾಗಳಲ್ಲಿ ‘ಉಳಿದವರು ಕಂಡಂತೆ’ ಸಹ ಸ್ಥಾನ ಪಡೆದಿರುವುದು ಮಾತ್ರವೇ ಅಲ್ಲದೆ, ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಕನ್ನಡ ಸಿನಿಮಾ ಇದಾಗಿದೆ.
ಈ ಪಟ್ಟಿಯಲ್ಲಿ ಮಲಯಾಳಂನ ‘ಕುಂಬಳಂಗಿ ನೈಟ್ಸ್’, ‘ಮಹೇಶಿಂಟೆ ಪ್ರತಿಕಾರಂ’, ‘ಅಂಗಮಲೈ ಡೈರೀಸ್’, ‘ದೃಶ್ಯಂ’, ‘ದಿ ಗ್ರೇಟ್ ಇಂಡಿಯನ್ ಕಿಚನ್’ ಇನ್ನೂ ಹಲವು ಸಿನಿಮಾಗಳಿವೆ. ಹಿಂದಿಯ ‘ಲಗಾನ್’, ‘ಗ್ಯಾಂಗ್ಸ್ ಆಫ್ ವಸೇಪುರ್’, ‘ಚಕ್ ದೇ ಇಂಡಿಯಾ’, ‘ದಿಲ್ ಚಾಹ್ತಾ ಹೈ’, ‘ಓಂಕಾರ’ ಇನ್ನೂ ಹಲವು ಸಿನಿಮಾಗಳಿವೆ. ತಮಿಳಿನ ‘ಅಲೈಪಾಯುತೆ’, ‘ಅನ್ಬೆ ಶಿವಂ’, ‘ಆಡುಕುಳಂ’, ‘ಪರಿಯೇರುಂ ಪೆರುಮಾಳ್’ ಇನ್ನೂ ಹಲವು ಸಿನಿಮಾಗಳಿವೆ. ಮರಾಠಿಯ ‘ಕೋರ್ಟ್’, ‘ಸೈರಾಟ್’ ಇನ್ನೂ ಕೆಲ ಸಿನಿಮಾಗಳಿವೆ. ತೆಲುಗಿನ ‘ಈಗ’ ಇದೆ. ಕನ್ನಡದ ‘ಉಳಿದವರು ಕಂಡಂತೆ’ ಸಿನಿಮಾ ಇದೆ. ‘ಉಳಿದವರು ಕಂಡಂತೆ’ ಹೊರತಾಗಿ ಇನ್ಯಾವ ಕನ್ನಡ ಸಿನಿಮಾ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
ರಕ್ಷಿತ್ ಶೆಟ್ಟಿ ಅವರು ‘ಉಳಿದವರು ಕಂಡಂತೆ’ ಸಿನಿಮಾದ ಸ್ಪಿನ್ ಆಫ್ ಆಗಿರುವ ‘ರಿಚರ್ಡ್ ಆಂಟೋನಿ’ ಸಿನಿಮಾ ಪ್ರಕಟಿಸಿದ್ದು, ಸಿನಿಮಾ ಪ್ರಕಟಿಸಿದ ವರ್ಷಗಳು ಕಳೆದಿವೆ. ಇತ್ತೀಚೆಗಷ್ಟೇ ಮಾಧ್ಯಮಗಳೊಟ್ಟಿಗೆ ಮಾತನಾಡಿ, ‘ರಿಚರ್ಡ್ ಆಂನಿ’ ಸಿನಿಮಾದ ಚಿತ್ರೀಕರಣ ಶುರುವಾಗಿದೆ ಎಂದು ಹೇಳಿದ್ದರು. ಮುಂದೇನಾಗುತ್ತದೆ ನೋಡಬೇಕಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ