‘ರಿಚರ್ಡ್ ಆಂಟನಿ’ ಸಿನಿಮಾ ಕುರಿತು ರಾಜ್ ನೀಡಿದ ಹೇಳಿಕೆ ಬಗ್ಗೆ ಶುರುವಾಗಿದೆ ಚರ್ಚೆ

‘ರಿಚರ್ಡ್ ಆಂಟನಿ’ ಸಿನಿಮಾ ಕುರಿತು ರಾಜ್ ನೀಡಿದ ಹೇಳಿಕೆ ಬಗ್ಗೆ ಶುರುವಾಗಿದೆ ಚರ್ಚೆ


ರಕ್ಷಿತ್ ಶೆಟ್ಟಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಅವರು ಗಮನ ಸೆಳೆದಿದ್ದಾರೆ. ಅವರು ಕಳೆದ ಕೆಲ ಸಮಯದಿಂದ ಯಾರ ಕಣ್ಣಿಗೂ ಕಾಣಿಸುತ್ತಿಲ್ಲ. ಅವರು ‘ರಿಚರ್ಡ್ ಆಂಟನಿ’ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗಲೇ ರಾಜ್ ಅವರು ನೀಡಿದ ಹೇಳಿಕೆ ಚರ್ಚೆ ಹುಟ್ಟುಹಾಕಿದೆ. ಆ ಚಿತ್ರಕ್ಕಾಗಿ ಇನ್ನೂ ಎಷ್ಟು ವರ್ಷ ಕಾಯಬೇಕು ಎಂಬ ಪ್ರಶ್ನೆ ಮೂಡಿದೆ.

ರಾಜ್ ಬಿ. ಶೆಟ್ಟಿ ಅವರು ’45’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಪಾತ್ರದ ಬಗ್ಗೆ ಟ್ರೇಲರ್‌ನಲ್ಲಿ ಹಿಂಟ್ ಸಿಕ್ಕಿದೆ. ಜನಸಾಮಾನ್ಯನ ಪಾತ್ರದಲ್ಲಿ ರಾಜ್ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ಸಾಕಷ್ಟು ಸಂದರ್ಶನಗಳನ್ನು ಅವರು ನೀಡುತ್ತಿದ್ದಾರೆ. ಈ ವೇಳೆ ಅವರಿಗೆ ರಕ್ಷಿತ್ ಶೆಟ್ಟಿ ಬಗ್ಗೆಯೂ ಪ್ರಶ್ನೆ ಎದುರಾಗುತ್ತಿದೆ. ಸಂದರ್ಶನ ಒಂದರಲ್ಲಿ ರಾಜ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ’45’ ಸಿನಿಮಾ ಚಿತ್ರೀಕರಣದಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್ಗೆ ಶಾಕ್

ರಿಷಬ್ ಹಾಗೂ ರಾಜ್ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಮಾತಿದೆ. ಆದರೆ, ಇದನ್ನು ರಾಜ್ ಅಲ್ಲಗಳೆದಿದ್ದಾರೆ. ಜೊತೆಗೆ, ಎಲ್ಲರ ಸಿನಿಮಾಗಳಲ್ಲಿ ಕೆಲಸ ಮಾಡಲು ಅವರು ಸಿದ್ಧರಿದ್ದಾರಂತೆ. ‘ರಕ್ಷಿತ್ ಅವರು ರಿಚರ್ಡ್ ಆಂಟನಿ ಸ್ಟಾರ್ಟ್ ಮಾಡಿದ್ರು ಅಂದ್ರೆ’ ಎಂದು ಏನನ್ನೋ ಹೇಳಲು ರಾಜ್ ಮುಂದಾದರು. ‘ನಾನು ಅದರಲ್ಲಿ ಕೆಲಸ ಮಾಡಲು ರೆಡಿ’ ಎಂದು ಅವರು ಹೇಳಲು ಮುಂದಾಗಿರಬಹುದು. ಆದರೆ, ಫ್ಯಾನ್ಸ್ ಇಲ್ಲಿ ಗಮನಿಸಿದ್ದೇ ಬೇರೆ. ಈ ವಿಡಿಯೋಗೆ ಫ್ಯಾನ್ಸ್ ರಿಯಾಕ್ಟ್ ಮಾಡಿದ್ದಾರೆ.

‘ಮಾಡಿದ್ರು ಅಂದ್ರೆ’ ನಿಜವಾದ ಅರ್ಥವೇನು ಎಂದು ಕೇಳಿದ್ದಾರೆ. ‘ಹಾಗಾದ್ರೆ ಅವರ ಸಿನಿಮಾ ಕೆಲಸ ಇನ್ನೂ ಶುರುವಾಗಿಲ್ಲವೇ’ ಎಂದು ಅನೇಕರು ಕೇಳುತ್ತಿದ್ದಾರೆ. 2023ರಲ್ಲಿ ಬಂದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಬಳಿಕ ರಕ್ಷಿತ್ ಶೆಟ್ಟಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 2:48 pm, ಶನಿ, 20 ಡಿಸೆಂಬರ್ 25





Source link

Leave a Reply

Your email address will not be published. Required fields are marked *