ರಾಶಿ, ನಕ್ಷತ್ರ ನೋಡದೆ Bigg Boss ಕೂಡಿ ಹಾಕಿದ್ರು, ಇನ್ನೇನ್​ ಮಾಡೋಕಾಗತ್ತೆ? ಧ್ರುವಂತ್​ ಜೊತೆ ಜಗಳದ ಬಗ್ಗೆ ರಕ್ಷಿತಾ

ರಾಶಿ, ನಕ್ಷತ್ರ ನೋಡದೆ Bigg Boss ಕೂಡಿ ಹಾಕಿದ್ರು, ಇನ್ನೇನ್​ ಮಾಡೋಕಾಗತ್ತೆ? ಧ್ರುವಂತ್​ ಜೊತೆ ಜಗಳದ ಬಗ್ಗೆ ರಕ್ಷಿತಾ

ರಾಶಿ, ನಕ್ಷತ್ರ ನೋಡದೆ Bigg Boss ಕೂಡಿ ಹಾಕಿದ್ರು, ಇನ್ನೇನ್​ ಮಾಡೋಕಾಗತ್ತೆ? ಧ್ರುವಂತ್​ ಜೊತೆ ಜಗಳದ ಬಗ್ಗೆ ರಕ್ಷಿತಾ

ಬಿಗ್​ಬಾಸ್​ ಮನೆಯಲ್ಲಿ ತಮ್ಮ ನಿರಂತರ ಕಚ್ಚಾಟದಿಂದಲೇ ಗಮನ ಸೆಳೆದಿದ್ದ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್, ಇದೀಗ ತಮ್ಮ ಜಗಳದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ನಮ್ಮಿಬ್ಬರದ್ದೂ ಒಂದೇ ರಾಶಿ, ಒಂದೇ ನಕ್ಷತ್ರ ಆಗಿದ್ದರಿಂದಲೇ ಅಷ್ಟು ಜಗಳವಾಡುತ್ತಿದ್ದೆವು ಎಂದಿದ್ದಾರೆ.

ಬಿಗ್​ಬಾಸ್​ ಮನೆಯಲ್ಲಿ ಭಾರಿ ಕಚ್ಚಾಟ, ಕಾದಾಟದ ನಡುವೆಯೂ ಜನರಿಗೆ ಎಂಟರ್​ಟೈನ್​ಮೆಂಟ್​ ಸಿಕ್ಕಿದ್ದು ಎಂದರೆ ಅದು ರಕ್ಷಿತಾ ಶೆಟ್ಟಿ ಮಾಡುವ ಜಗಳದಿಂದ. ಕನ್ನಡ ಮಿಶ್ರಿತ ಎಲ್ಲಾ ಭಾಷೆಗಳನ್ನು ರಕ್ಷಿತಾ ಹೇಳುವುದೇ ಕ್ಯೂಟ್​ ಆಗಿ ವೀಕ್ಷಕರಿಗೆ ಕಾಣಿಸುತ್ತಿತ್ತು. ಆದ್ದರಿಂದ ಅದು ಜಗಳಕ್ಕಿಂತಲೂ ಹೆಚ್ಚಾಗಿ ನಗು ತರಿಸುವಂತಿತ್ತು.

ಅದರಲ್ಲಿಯೂ ಅವರು ಮತ್ತು ಧ್ರುವಂತ್​ ಸ್ವಲ್ಪ ಹೆಚ್ಚಾಗಿಯೇ ಗಲಾಟೆ ಮಾಡಿಕೊಳ್ಳುತ್ತಿದ್ದರು. ಇಂಥ ಜೋಡಿಯನ್ನು ಬಿಗ್​ಬಾಸ್​​ ಉದ್ದೇಶಪೂರ್ವಕವಾಗಿ ಕೆಲವು ದಿನ ಸೀಕ್ರೆಟ್​ ಕೋಣೆಯಲ್ಲಿ ಕೂಡಿ ಹಾಕಿತ್ತು.

ಆಗ ಇವರಿಬ್ಬರ ಕಚ್ಚಾಟ ನೋಡುವುದು ವೀಕ್ಷಕರಿಗೆ ಬಲು ಸೊಗಸಾಗಿತ್ತು. ಇಂಥ ವ್ಯಕ್ತಿ ಜೊತೆ ಇನ್ನೆಷ್ಟು ದಿನ ನಾನು ಇಲ್ಲಿ ಇರಬೇಕೋ ಎಂದು ರಕ್ಷಿತಾ ಶೆಟ್ಟಿ (Bigg Boss Rakshita Shetty) ಗೊಣಗಿದ್ದರು. ಇದನ್ನು ಕೇಳಿ ಧ್ರುವಂತ್​ ಕೂಡ ಕೆಂಡಾಮಂಡಲ ಆಗಿದ್ದರು.

ಅದೇನೇ ಆದರೂ ಅದೊಂದು ಸ್ಪರ್ಧೆ ಅಷ್ಟೇ. ಎಲ್ಲರಿಗೂ ತಾವು ಗೆಲ್ಲಬೇಕು ಎನ್ನುವ ಹಂಬಲ ಇರುವ ಕಾರಣ, ಈ ರೀತಿಯ ಕಚ್ಚಾಟ, ಗಲಾಟೆ ಎಲ್ಲವೂ ಸಹಜ ಎನ್ನಿ.

ಆದರೆ, ಇದೀಗ ಧ್ರುವಂತ್​ ಜೊತೆಗಿನ ಕಿತ್ತಾಟದ ಬಗ್ಗೆ ರಕ್ಷಿತಾ ಶೆಟ್ಟಿ ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ಅದೇನೆಂದರೆ, ನಮ್ಮಿಬ್ಬರನ್ನೂ ಒಂದೇ ರಾಶಿ, ಒಂದೇ ನಕ್ಷತ್ರ. ಅದು ಮಿಥುನ ರಾಶಿ, ಆರಿದ್ರಾ ನಕ್ಷತ್ರ ಅದಕ್ಕಾಗಿ ಹಾಗೆ ಜಗಳ ಆಡ್ತಿದ್ವಿ. ಏನೂ ಮಾಡಲು ಆಗ್ತಿರಲಿಲ್ಲ ಎಂದಿದ್ದಾರೆ.

Source link

Leave a Reply

Your email address will not be published. Required fields are marked *