ಇರೋ ಒಂದು ಹೃದಯನ್ನ ಎಷ್ಟೂ ಅಂತ ಗೆಲ್ತಿಯಾ: Rakshita Shetty ಹುಟ್ಟುಹಬ್ಬದ ವಿಡಿಯೋಗೆ ಫ್ಯಾನ್ಸ್​ ಭಾವುಕ

ಇರೋ ಒಂದು ಹೃದಯನ್ನ ಎಷ್ಟೂ ಅಂತ ಗೆಲ್ತಿಯಾ: Rakshita Shetty ಹುಟ್ಟುಹಬ್ಬದ ವಿಡಿಯೋಗೆ ಫ್ಯಾನ್ಸ್​ ಭಾವುಕ

ಇರೋ ಒಂದು ಹೃದಯನ್ನ ಎಷ್ಟೂ ಅಂತ ಗೆಲ್ತಿಯಾ: Rakshita Shetty ಹುಟ್ಟುಹಬ್ಬದ ವಿಡಿಯೋಗೆ ಫ್ಯಾನ್ಸ್​ ಭಾವುಕ

ಬಿಗ್​ಬಾಸ್​ ಖ್ಯಾತಿಯ ರಕ್ಷಿತಾ ಶೆಟ್ಟಿ ತಮ್ಮ ಹುಟ್ಟುಹಬ್ಬವನ್ನು ಐಷಾರಾಮಿ ಪಾರ್ಟಿಗಳ ಬದಲು ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಉಡುಪಿಯ ಸಾಲಿಗ್ರಾಮದಲ್ಲಿರುವ ‘ಹೊಸಬದುಕು’ ವೃದ್ಧಾಶ್ರಮಕ್ಕೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳೊಂದಿಗೆ ದಿನ ಕಳೆದು, ಊಟ ಬಡಿಸಿ, ಅವರ ನೋವು-ನಲಿವಿನಲ್ಲಿ ಭಾಗಿಯಾಗಿದ್ದಾರೆ.

ಹುಟ್ಟುಹಬ್ಬ ಬಂದರೆ ಸಾಕು, ಸಿನಿಮಾ ನಟ-ನಟಿಯರು, ರಾಜಕಾರಣಿಗಳು ಸೇರಿದಂತೆ ಸಾಮಾನ್ಯ ಜನರು ಕೂಡ ಸ್ಟಾರ್​ ಹೋಟೆಲ್​ಗಳನ್ನೋ, ಇಲ್ಲಾ ಯಾವುದೋ ಐಷಾರಾಮಿ ಹೋಟೆಲ್​, ಮಂಟಪಗಳನ್ನೋ ಬುಕ್​ ಮಾಡಿ, ವಿದೇಶಿಗರ ಸಂಪ್ರದಾಯದಂತೆ ಮೇಣದಬತ್ತಿಯನ್ನು ಆರಿಸಿ, ಕೇಕ್​ ಕಟ್​ ಮಾಡಿ ಭರ್ಜರಿ ಸೆಲಬ್ರೇಷನ್​ ಮಾಡುತ್ತಾರೆ. ಅಲ್ಲಿ ಐಷಾರಾಮಿ ಊಟಕ್ಕೆ ವ್ಯವಸ್ಥೆ, ಇನ್ನು ಕೆಲವರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಡ್ರಿಂಕ್ಸ್ ಪಾರ್ಟಿ ಅದೂ ಇದೂ ಎಂದೆಲ್ಲಾ ಅರೇಂಜ್​ ಮಾಡುವುದು ಇದೆ. ಅವರು ಬಿಟ್ಟರೂ ಅವರ ಅಭಿಮಾನಿಗಳು ಬಿಡಲ್ಲ. ಭರ್ಜರಿಯಾಗಿ ಪಾರ್ಟಿ ಅರೆಂಜ್​ ಮಾಡುವುದು ಕಾಮನ್​.

ಆದರೆ ಇವರೆಲ್ಲರನ್ನೂ ಮೀರಿ ಬಿಗ್​ಬಾಸ್​​ ರಕ್ಷಿತಾ ಶೆಟ್ಟಿ (Bigg Boss Rakshita Shetty) ಕನ್ನಡಿಗರ ಮನ ಗೆದ್ದಿದ್ದಾರೆ. ಸೆಲೆಬ್ರಿಟಿಗಳಿಗೆ ಮಾದರಿಯಾಗಿದ್ದಾರೆ. ಹುಟ್ಟುಹಬ್ಬ ಎಂದರೆ, ಐಷಾರಾಮಿ ಹೋಟೆಲ್​ಗಳಲ್ಲಿ ಭರ್ಜರಿ ಪಾರ್ಟಿ ಮಾಡಿ ಕೇಕ್​ ಕಟ್​ ಮಾಡುವುದಲ್ಲ, ಬದಲಿಗೆ ಹೇಗೆ ಅದನ್ನು ಆಚರಿಸಿಕೊಳ್ಳಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ರಕ್ಷಿತಾ ಶೆಟ್ಟಿ.

ಅಷ್ಟಕ್ಕೂ ಮೊನ್ನೆ ರಕ್ಷಿತಾ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅವರ ಅಭಿಮಾನಿಗಳು ಪ್ರತ್ಯೇಕವಾಗಿ ಅವರಿಗೆ ವಿವಿಧ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿದರೂ, ಕೊನೆಗೆ, ರಕ್ಷಿತಾ ಶೆಟ್ಟಿ ಈ ವಿಶೇಷ ದಿನವನ್ನು ಅನಾಥಾಶ್ರಮಕ್ಕೆ ಭೇಟಿ ನೀಡಿ ಆಚರಿಸಿಕೊಂಡಿದ್ದಾರೆ.

ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿರುವ ʻಹೊಸಬದುಕುʼವೃದ್ಧಾಶ್ರಮದಲ್ಲಿ ಇರುವ ನಿವಾಸಿಗಳೊಂದಿಗೆ ಇಡೀ ದಿನವನ್ನು ಕಳೆದಿದ್ದಾರೆ ಮಂಗಳೂರು ಪುಟ್ಟಿ. ಆಶ್ರಮದ ಪ್ರತಿಯೊಬ್ಬ ನಿವಾಸಿಗೂ ಅಂದಿನ ವಿಶೇಷ ಊಟದ ವ್ಯವಸ್ಥೆಯನ್ನು ಖುದ್ದಾಗಿ ಮಾಡಿಸಿದ್ದಾರೆ.

ಅಷ್ಟೇ ಅಲ್ಲದೇ ಆಶ್ರಮದ ನಿವಾಸಿಗಳ ಜೊತೆಗೂಡಿ ಡ್ಯಾನ್ಸ್ ಮಾಡಿ ಎಲ್ಲರನ್ನೂ ಖುಷಿಪಡಿಸಿದ್ದಾರೆ. ವೃದ್ಧರು ರಕ್ಷಿತಾ ಜೊತೆ ಡಾನ್ಸ್​ ಮಾಡುತ್ತಾ ತಮ್ಮ ದುಃಖವನ್ನು ಮರೆದಿದ್ದಾರೆ. ಜೊತೆಗೆ ರಕ್ಷಿತಾ ಪ್ರತಿಯೊಬ್ಬರ ಜೊತೆ ಮಾತನಾಡಿ ಅವರ ನೋವುಗಳಲ್ಲಿ ಭಾಗಿಯಾಗಿದ್ದಾರೆ.

ಇದರ ವಿಡಿಯೋಗಳು ವೈರಲ್ ಆಗುತ್ತಿವೆ. ಅದೆಷ್ಟು ಅಂತ ಮನಸ್ಸನ್ನು ಗೆಲ್ಲುತ್ತಿಯಾ ಎಂದು ಪ್ರಶ್ನಿಸುತ್ತಿದ್ದಾರೆ ರಕ್ಷಿತಾ. ಈಕೆ ಪ್ರತಿಯೊಬ್ಬರಿಗೂ ಮಾದರಿ. ನಿಮ್ಮ ಹುಟ್ಟುಹಬ್ಬವನ್ನು ಹೀಗೆ ಆಚರಿಸಿಕೊಂಡರೆ, ಅದಕ್ಕಿಂತ ಬೇರೆ ಸಂತೋಷ ಮತ್ತೊಂದಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು

Source link

Leave a Reply

Your email address will not be published. Required fields are marked *