ಬಿಗ್ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ, ಮುಂಬೈ ಮತ್ತು ಮಂಗಳೂರಿನಲ್ಲಿ ಸಮುದ್ರ ನೋಡಿ ಬೆಳೆದಿದ್ದು, ಬೆಂಗಳೂರಿನಲ್ಲಿ ಸಮುದ್ರ ಇಲ್ಲದಿರುವುದನ್ನು ಕಂಡು ಆಶ್ಚರ್ಯಪಟ್ಟಿದ್ದಾರೆ. ಬೇಸರವಾದಾಗ ಬೆಂಗಳೂರಿನ ಜನರು ಎಲ್ಲಿಗೆ ಹೋಗುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಬಿಗ್ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ (Bigg Boss Rakshita Shetty) ಸದ್ಯ ಸಕತ್ ಬಿಜಿಯಾಗಿದ್ದಾರೆ. ಬಿಗ್ಬಾಸ್ ಮುಗಿದು ಕೆಲ ವಾರ ಆಗಿದ್ರೂ ಇವರಿಗೆ ಸಕತ್ ಡಿಮಾಂಡ್ ಇದೆ.

ಓದಿ, ಬೆಳೆದದ್ದು ಎಲ್ಲಾ ಮುಂಬೈನಲ್ಲೇ ಆಗಿ, ಇದೀಗ ಕರಾವಳಿಯ ಪುಟ್ಟಿ ಎನ್ನಿಸಿಕೊಂಡಿರೋ ರಕ್ಷಿತಾ ಶೆಟ್ಟಿ, ಮುಂಬೈನಲ್ಲೂ ಸಮುದ್ರ ನೋಡಿದಾಕೆ, ಮಂಗಳೂರಿನಲ್ಲೂ ನೋಡಿದಾಕೆ. ಅದಕ್ಕಾಗಿಯೇ ಎಲ್ಲಾ ಊರುಗಳಲ್ಲಿಯೂ ಸಮುದ್ರ ಇದೇ ಎಂದೇ ಅಂದುಕೊಂಡಿದ್ದರಂತೆ!

’ಬಿಗ್ಬಾಸ್ಗೆಂದು ಬೆಂಗಳೂರಿಗೆ ಬಂದಾಗಲೇ ಗೊತ್ತಾಯ್ತು, ಇಲ್ಲಿ ಸಮುದ್ರ ಇಲ್ಲ ಎಂದು. ಕೇಳಿ ತುಂಬಾ ಆಶ್ಚರ್ಯ ಆಯ್ತು’ ಎಂದಿದ್ದಾರೆ ರಕ್ಷಿತಾ.

ನಾನು ಊರಲ್ಲಿ ತುಂಬಾ ಬೇಜಾರು ಆದಾಗ, ಒಬ್ಬಳೇ ಇದ್ದಾಗ ಸಮುದ್ರದ ಹತ್ತಿರ ಹೋಗ್ತೇನೆ. ಬೆಂಗಳೂರು ಮಂದಿ ನೀವು ಬೇಜಾರು ಆದಾಗ ಎಲ್ಲಿಗೆ ಹೋಗ್ತೀರಿ, ಸಮುದ್ರನೇ ಇಲ್ವಲ್ಲಾ ಎಂದು ಪ್ರಶ್ನಿಸಿದ್ದಾರೆ ರಕ್ಷಿತಾ!

ಈ ಮೂಲಕ, ಬೆಂಗಳೂರಿಗರ ಬಗ್ಗೆ ರಕ್ಷಿತಾ ಶೆಟ್ಟಿಗೆ ತುಂಬಾ ನೋವಾಗ್ತಿದೆ ಎನ್ನಿಸುವಂತೆ ಕಾಣುತ್ತಿದೆ. ಸಮುದ್ರ ಇರೋದೇ ಒಂಟಿತನ ಕಳೆಯಲು ಎಂದು ಅವರು ಭಾವಿಸಿದ್ದು, ಬೆಂಗಳೂರಿಗರು ಪಾಪ ಏನ್ ಮಾಡ್ತಾರೆ ಎನ್ನುವುದು ಅವರ ಚಿಂತೆ!

ಅವರ ಈ ಪ್ರಶ್ನೆಗೆ ಕೆಲವರು ಗೋವಾಕ್ಕೆ ಹೋಗ್ತೇವೆ ಎಂದರೆ, ಮತ್ತೆ ಕೆಲವರು ಬೆಂಗಳೂರಿನಲ್ಲಿ ಇರುವ ಹಲಸೂರು ಕೆರೆ, ಸ್ಯಾಂಕಿ ಟ್ಯಾಂಕ್ ಹೆಸರು ಹೇಳಿದ್ದಾರೆ. ಮತ್ತೆ ಕೆಲವರು ಕಮೆಂಟ್ನಲ್ಲಿ ಬಾರ್ಗೆ ಎಂದು ತಮಾಷೆಯ ಉತ್ತರ ಕೊಟ್ಟಿದ್ದಾರೆ.

Source link
ನೀವೆಲ್ಲಾ ಒಂಟಿಯಾದ್ರೆ ಎಲ್ಲಿ ಹೋಗ್ತೀರಿ? ಬೆಂಗಳೂರಲ್ಲಿ ಸಮುದ್ರಕ್ಕಾಗಿ Rakshita Shetty ಹುಡುಕಾಟ!