Bigg Boss ಬಳಿಕ ಮೊದಲ ವ್ಲಾಗ್​ನಲ್ಲೇ ಫ್ಯಾನ್ಸ್​ಗೆ ಭರ್ಜರಿ ಆಫರ್​ ಕೊಟ್ಟ ರಕ್ಷಿತಾ ಶೆಟ್ಟಿ! ಪ್ರಶ್ನೆಗಳ ಸುರಿಮಳೆ

Bigg Boss ಬಳಿಕ ಮೊದಲ ವ್ಲಾಗ್​ನಲ್ಲೇ ಫ್ಯಾನ್ಸ್​ಗೆ ಭರ್ಜರಿ ಆಫರ್​ ಕೊಟ್ಟ ರಕ್ಷಿತಾ ಶೆಟ್ಟಿ! ಪ್ರಶ್ನೆಗಳ ಸುರಿಮಳೆ

Bigg Boss ಬಳಿಕ ಮೊದಲ ವ್ಲಾಗ್​ನಲ್ಲೇ ಫ್ಯಾನ್ಸ್​ಗೆ ಭರ್ಜರಿ ಆಫರ್​ ಕೊಟ್ಟ ರಕ್ಷಿತಾ ಶೆಟ್ಟಿ! ಪ್ರಶ್ನೆಗಳ ಸುರಿಮಳೆ

ಬಿಗ್​ಬಾಸ್​ 12ರ ರನ್ನರ್​ ಅಪ್​ ರಕ್ಷಿತಾ ಶೆಟ್ಟಿ, ಶೋ ನಂತರ ಮತ್ತೆ ತಮ್ಮ ವ್ಲಾಗಿಂಗ್​ ಆರಂಭಿಸಿದ್ದಾರೆ. ತಮ್ಮ ಮೊದಲ ವ್ಲಾಗ್ ಅನ್ನು ಅಭಿಮಾನಿಗಳಿಗೆ ಅರ್ಪಿಸಿದ್ದು, ಬಿಗ್​ಬಾಸ್​ ಕುರಿತ ಯಾವುದೇ ಪ್ರಶ್ನೆಗಳನ್ನು ಕೇಳುವಂತೆ ಆಹ್ವಾನಿಸಿದ್ದಾರೆ. ಅಭಿಮಾನಿಗಳಿಂದ ಈಗಾಗಲೇ ಪ್ರಶ್ನೆ ಹರಿದುಬಂದಿದೆ.

ಬಿಗ್​ಬಾಸ್​ 12 (Bigg Boss 12) ರಲ್ಲಿ ರನ್ನರ್​ ಅಪ್​ ಆಗುವ ಮೂಲಕ, ಭಾರಿ ಖ್ಯಾತಿ ಗಳಿಸಿರುವ ಮಂಗಳೂರು ಪುಟ್ಟಿ ರಕ್ಷಿತಾ ಶೆಟ್ಟಿ ಅವರಿಗೆ ಈಗ ಎಲ್ಲಿಲ್ಲದ ಡಿಮಾಂಡ್​. ಇದಾಗಲೇ ಬಿಗ್​ಬಾಸ್​​ ಖ್ಯಾತಿಯಿಂದಾಗಿ ಹಲವಾರು ಕಡೆಗಳ ಕಾರ್ಯಕ್ರಮಗಳು, ಪ್ರಮೋಷನ್​ಗಳಲ್ಲಿ ಈಕೆಯದ್ದೇ ಹವಾ.

ಸಿನಿಮಾ, ಕಿರುತೆರೆಯಲ್ಲಿ ನಟಿಯಾಗುವ ಹಂಬಲವಂತೂ ಇಲ್ಲವೇ ಇಲ್ಲ, ನಾನು ನನ್ನ ಬುಡವಾಗಿರುವ ವ್ಲಾಗ್​ ಮೂಲಕವೇ ಮುಂದುವರೆಯುತ್ತೇನೆ, ಉಳಿದದ್ದು ಯಾವುದೂ ನನಗೆ ಇಂಟರೆಸ್ಟ್​ ಇಲ್ಲ ಎನ್ನುವ ಮೂಲಕ ರಕ್ಷಿತಾ ಶೆಟ್ಟಿ ತಮ್ಮ ಭವಿಷ್ಯದ ಯೋಜನೆಗಳ ಕುರಿತೂ ಹೇಳಿಯಾಗಿದೆ.

ಬಿಗ್​ಬಾಸ್​ನಲ್ಲಿ ರನ್ನರ್​ ಅಪ್​ ಆದ ಬಳಿಕ, ಹಲವಾರು ಫಂಕ್ಷನ್​, ಸಂದರ್ಶನಗಳು ಎಂದೆಲ್ಲಾ ಬಿಜಿಯಾಗಿದ್ದ ರಕ್ಷಿತಾ ಶೆಟ್ಟಿ (Bigg Boss Rakshita Shetty) ಇದೀಗ ಸ್ವಲ್ಪ ಫ್ರೀ ಆದಂತಿದೆ. ಅದಕ್ಕಾಗಿಯೇ ವ್ಲಾಗ್​ನಲ್ಲಿ ಕೆಲಸ ಮುಂದುವರೆಸುತ್ತಿದ್ದಾರೆ.

ಬಿಗ್​ಬಾಸ್​​ ಮುಗಿಸಿದ ಬಳಿಕ ಮೊದಲ ವ್ಲಾಗ್​ ಮಾಡುತ್ತಿದ್ದೇನೆ ಎಂದು ಹೇಳಿದ ರಕ್ಷಿತಾ, ಈ ವ್ಲಾಗ್​ ಫುಲ್ ಅಭಿಮಾನಿಗಳಿಗೆ ಇರುವುದಾಗಿ ಹೇಳಿದ್ದಾರೆ.

ನೀವು ಬಿಗ್​ಬಾಸ್​ ಬಗ್ಗೆ ಏನೇ ಪ್ರಶ್ನೆ ಕೇಳಿ, ನಾನು ಅವುಗಳಿಗೆ ಉತ್ತರಿಸಲು ಟ್ರೈ ಮಾಡುತ್ತೇನೆ. ನಿಮ್ಮೆಲ್ಲಾ ಪ್ರಶ್ನೆಗಳನ್ನು ಬರೆಯಿರಿ. ಬಿಗ್​ಬಾಸ್​ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರ ಕೊಡುತ್ತೇನೆ. ಥ್ಯಾಂಕ್ಯೂ ಸೋ ಮಚ್​ ಎಂದಿದ್ದಾರೆ.

ಇದಾಗಲೇ ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆಯೇ ಹರಿದು ಬಂದಿದೆ. ನಿಮಗೆ ಬಿಗ್​ಬಾಸ್​ ಮನೆಯ ಸ್ವಿಮ್ಮಿಂಗ್​ ಫೂಲ್ ಯಾಕೆ ಇಷ್ಟ ಎಂದು ಒಬ್ಬರು ಕೇಳಿದ್ದು, ನಮ್ಮೂರಿಗೂ ಬನ್ನಿ ಎಂದು ಹಲವರು ಕಮೆಂಟ್​ನಲ್ಲಿ ಹೇಳಿದ್ದಾರೆ. ಸೀರಿಯಲ್​ಗಳಲ್ಲಿ ಆ್ಯಕ್ಟ್​ ಮಾಡಿ, ನಿಮಗೆ ಸಿಕ್ಕಾಪಟ್ಟೆ ಟ್ಯಾಲೆಂಟ್​ ಇದೆ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಗಿಲ್ಲಿ ಮೇಲೆ ನಿಮಗೆ ಪ್ರೀತಿ ಇದ್ಯಾ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ರಕ್ಷಿತಾ ಹೇಗೆ ಉತ್ತರಿಸುತ್ತಾರೆ ಎಂದು ಕಾದು ನೋಡಬೇಕಿದೆ.

Source link

Leave a Reply

Your email address will not be published. Required fields are marked *