ಹಳಿ ತಪ್ಪಿತು ರಕ್ಷಿತಾ ಶೆಟ್ಟಿ ಆಟ; ಶುರುವಾಯ್ತು ಚೀಪ್ ಗಿಮಿಕ್?

ಹಳಿ ತಪ್ಪಿತು ರಕ್ಷಿತಾ ಶೆಟ್ಟಿ ಆಟ; ಶುರುವಾಯ್ತು ಚೀಪ್ ಗಿಮಿಕ್?


ಬಿಗ್ ಬಾಸ್ (ಬಿಗ್ ಬಾಸ್) ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರು ಆರಂಭದಲ್ಲಿ ಎಲ್ಲರಿಗೂ ಇಷ್ಟ ಆಗಿದ್ದರು. ಅವರ ಮೇಲೆ ಎಲ್ಲರೂ ಮುಗಿಬಿದ್ದಿದ್ದರು ಅವರಿಗೆ ಸಿಂಪತಿ ಸಿಕ್ಕಿತ್ತು. ಹೀಗಾಗಿ ಅವರು ಸಾಕಷ್ಟು ಮತಗಳನ್ನು ಪಡೆದರು. ಗಿಲ್ಲಿ ಕೂಡ ರಕ್ಷಿತಾ ಬೆಂಬಲಕ್ಕೆ ನಿಂತರು. ಆದರೆ, ಕಳೆದ ವಾರದಿಂದ ರಕ್ಷಿತಾ ಆಟ ಹಳಿ ತಪ್ಪಿದೆ. ಈ ವಾರ ಅದು ತುಂಬಾ ಸ್ಪಷ್ಟವಾಗಿ ಕಾಣಿಸುತ್ತಿದೆ. ಕಿಚ್ಚನ ಚಪ್ಪಾಳೆಯೇ ರಕ್ಷಿತಾಗೆ ಭಾರವಾಯಿತೇ ಎಂಬ ಪ್ರಶ್ನೆ ಮೂಡಿದೆ.

ರಕ್ಷಿತಾ ಶೆಟ್ಟಿ ಅವರು ಕೆಲವು ವಾರಗಳ ಹಿಂದೆ ಸುದೀಪ್ ಅವರಿಂದ ಕ್ಲಾಸ್ ತೆಗೆದುಕೊಂಡಿದ್ದರು. ಇದಕ್ಕೆ ಕಾರಣ ಅವರು ರಘುವನ್ನು ನಾಮಿನೇಟ್ ಮಾಡುವಾಗ ತೆಗೆದುಕೊಂಡ ಕಾರಣ. ಆ ವಾರ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಬಳಿಕ ರಕ್ಷಿತಾ ಬದಲಾದರು. ನಂತರದ ವಾರ ಸಂಪೂರ್ಣವಾಗಿ ಸೈಲೆಂಟ್ ಆದರು. ಆ ವಾರ ಯೋಚಿಸಿ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಕಾರಣದಿಂದಲೇ ಅವರಿಗೆ ಕಿಚ್ಚನ ಚಪ್ಪಾಳೆ ಕೂಡ ಸಿಕ್ಕಿತ್ತು.

ಆದರೆ, ಈ ವಾರ ಅವರ ಆಟ ಆಡುವ ಶೈಲಿ, ಮಾತನಾಡುವ ರೀತಿ ಸಂಪೂರ್ಣವಾಗಿ ಬದಲಾಗಿದೆ. 1 ರಿಂದ 11 ರವರೆಗೆ ಪ್ರತಿ ಸ್ಪರ್ಧಿಯನ್ನು ಅವರ ಆಟಕ್ಕೆ ಅನುಸಾರವಾಗಿ ಒಂದು ಸಂಖ್ಯೆಯನ್ನು ಕ್ಯಾಪ್ಟನ್ ಧನುಷ್ ನೀಡಬೇಕಿತ್ತು. ರಕ್ಷಿತಾಗೆ ನಾಲ್ಕನೇ ಸ್ಥಾನ ಸಿಕ್ಕರೆ ಮಾಳುಗೆ 11ನೇ ಸ್ಥಾನ ಸಿಕ್ಕಿತ್ತು. ರಕ್ಷಿತಾ ಅವರು ತಾವು ಒಂದು ಅಥವಾ ಎರಡನೇ ಸ್ಥಾನ ಪಡೆಯಬೇಕು ಎಂದು ಆಲೋಚಿಸುವ ಬದಲು ಮಾಳುಗೆ 11ನೇ ಸ್ಥಾನ ನೀಡಿದ್ದು ಏಕೆ ಎಂಬ ಪ್ರಶ್ನೆಯನ್ನು ಪ್ರಾರಂಭಿಸಿದರು.

‘ಮಾಳು ಅಣ್ಣ 3,4 ಅಥವಾ 5ನೇ ಸ್ಥಾನಕ್ಕೆ ಅರ್ಹತೆ ಹೊಂದಿದ್ದಾರೆ. ಅವರನ್ನು 11ನೇ ಸ್ಥಾನದಲ್ಲಿ ನಿಲ್ಲಿಸಿದ್ದು ಸರಿಯಲ್ಲ’ ಎಂದು ವಾದಿಸಿದರು. ಇದು ಎಲ್ಲರಿಗೂ ವಿಚಿತ್ರ ಎನಿಸಿದೆ. ಬಿಗ್ ಬಾಸ್ ನಲ್ಲಿ ತಮಗಾಗಿ ಹೋರಾಡಬೇಕು. ಆದರೆ, ಮಾಳುಗೋಸ್ಕರ ಅವರು ಯಾಕೆ ಸ್ಟ್ಯಾಂಡ್ ತೆಗೆದುಕೊಂಡರು ಎಂಬುದು ಎಲ್ಲರ ಪ್ರಶ್ನೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಬೆನ್ನಿಗೆ ಚೂರಿ ಹಾಕಿದ ರಕ್ಷಿತಾ ಶೆಟ್ಟಿ

ಇಷ್ಟಕ್ಕೆ ನಿಲ್ಲಲಿಲ್ಲ. ನಾಮನಿರ್ದೇಶನ ಸಂದರ್ಭದಲ್ಲಿ ಎಲ್ಲರಿಗೂ ಬೆನ್ನಿಗೆ ಬೆಂಡಿನ ಬಾಕ್ಸ್ ನೀಡಿದ್ದರು. ಇದಕ್ಕೆ ಚಾಕು ಚುಚ್ಚಿಕೊಂಡಿದೆ. ನಾಮಿನೇಷನ್ ಮಾಡುವಾಗ ಚಾಕು ತೆಗೆದು ಬೇರೆಯವರ ಬೆನ್ನಿನ ಪೆಟ್ಟಿಗೆಗೆ ಚುಚ್ಚಬೇಕು. ಯಾರ ಬಳಿ ಕಡಿಮೆ ಚಾಕು ಇರುತ್ತದೆಯೋ ಅವರು ನಾಮನಿರ್ದೇಶನದಿಂದ ಬಚಾವ್ ಆಗುತ್ತಾರೆ. ಈ ವೇಳೆ ರಕ್ಷಿತಾ ಅವರು ತಮ್ಮ ಬೆನ್ನಿನ ಚಾಕುವನ್ನು ಬೇರೆಯವರಿಗೆ ಚುಚ್ಚುವ ಬದಲು ಮಾಳು ಅವರ ಬೆನ್ನಿನ ಚಾಕುವನ್ನು ತೆಗೆದು ಚುಚ್ಚೋಕೆ ಆರಂಭಿಸಿದರು. ಆಪ್ತರು ಎನಿಸಿಕೊಂಡ ಗಿಲ್ಲಿ ಹಾಗೂ ಕಾವ್ಯಾ ಅವರನ್ನು ರಕ್ಷಿತಾ ನಾಮಿನೇಟ್ ಮಾಡಿದ್ದಾರೆ. ‘ನಿನ್ನದು ಚೀಪ್ ಗಿಮಿಕ್’ ಎಂದು ರಕ್ಷಿತಾ ಮೇಲೆ ಕಾವ್ಯ ಕಿಡಿಕಾರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *