‘ಐ ಲವ್ ಯುವರ್..’ ಎಂದು ಗಿಲ್ಲಿಗೆ ಹೇಳಿದ ರಕ್ಷಿತಾ; ಶಾಕ್ ಆದ ಕಾವ್ಯಾ

‘ಐ ಲವ್ ಯುವರ್..’ ಎಂದು ಗಿಲ್ಲಿಗೆ ಹೇಳಿದ ರಕ್ಷಿತಾ; ಶಾಕ್ ಆದ ಕಾವ್ಯಾ


ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನ (ಗಿಲ್ಲಿ ನಾಟಾ) ಮೇಲೆ ರಕ್ಷಿತಾ ಶೆಟ್ಟಿಗೆ ವಿಶೇಷ ಒಲವು ಇದೆ. ಗಿಲ್ಲಿ ನಟ ಅವರಂತಹ ಹುಡುಗ ಬೇಕು ಎಂದು ಈ ಮೊದಲು ರಕ್ಷಿತಾ ಹೇಳಿಕೊಂಡಿದ್ದರು. ಈಗ ಗಿಲ್ಲಿ ನಟ ಅವರು ‘ಐ ಲವ್ ಯುವರ್ ಲೈಫ್’ ಎಂದು ಹಾಡು ಹೇಳಿದ್ದಾರೆ. ಇದನ್ನು ಕೇಳಿ ಕಾವ್ಯ ಶಾಕ್ ಆಗಿದ್ದಾರೆ. ರಕ್ಷಿತಾ ಏನು ಹೇಳುತ್ತಿದ್ದಾರೆಂದು ತಿಳಿಯಲು ಅವರಿಗೆ ಸ್ವಲ್ಪ ಸಮುಯವೇ ಬೇಕಾಗಿತ್ತು.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರಕ್ಷಿತಾ ಹಾಗೂ ಗಿಲ್ಲಿ ಇಬ್ಬರೂ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ. ರಕ್ಷಿತಾ ಶೆಟ್ಟಿ ಆರಂಭದಲ್ಲಿ ಒಂದು ರೀತಿ ಇಬ್ಬರು. ಆದರೆ, ಈಗ ಅವರ ಆಟ ಸಂಪೂರ್ಣ ಬದಲಾಗಿದೆ. ಇತ್ತೀಚೆಗೆ ಮಾತನಾಡುವಾಗ ರಕ್ಷಿತಾ ಶೆಟ್ಟಿ ಅವರು, ‘ನನಗೆ ಗಿಲ್ಲಿ ರೀತಿಯ ಹುಡುಗ ಬೇಕು’ ಎಂದು ಹೇಳಿದ್ದರು. ಇದು ಚರ್ಚೆಗೆ ಕಾರಣವಾಗಿದೆ.

ಗಿಲ್ಲಿ ರೀತಿಯ ಹುಡುಗನೇ ಬೇಕು ಎಂದು ರಕ್ಷಿತಾ ಶೆಟ್ಟಿ ಹೇಳಲು ಒಂದು ಕಾರಣವೂ ಇತ್ತು. ರಕ್ಷಿತಾ ಶೆಟ್ಟಿ ಅವರಿಗೆ ಕೀಟಲೆ ಮಾಡೋ ಹುಡುಗ ಎಂದರೆ ತುಂಬಾನೇ ಇಷ್ಟವಂತೆ. ಗಿಲ್ಲಿ ಇಡೀ ದಿನ ಮನೆಯಲ್ಲಿ ಕೀಟಲೆ ಮಾಡುತ್ತಾ ಇರುತ್ತಾರೆ. ಇದು ಅವರಿಗೆ ಸಖತ್ ಇಷ್ಟವಾಗಿದೆ. ಈಗ ಗಿಲ್ಲಿ ಜೀವನವನ್ನು ಇಷ್ಟಪಡುತ್ತೇನೆ ಎಂದು ರಕ್ಷಿತಾ ಹೇಳಿದ್ದಾರೆ.

ಹೊಸ ವರ್ಷದ ಸಂದರ್ಭದಲ್ಲಿ ಎಲ್ಲರೂ ಡ್ಯಾನ್ಸ್ ಮಾಡಿದರು. ಈ ವೇಳೆ ರಕ್ಷಿತಾ ಶೆಟ್ಟಿ ಅವರು, ‘ಐ ಲವ್ ಯುವರ್ ಲೈಫ್’ ಎಂದು ಗಿಲ್ಲಿ ಬಳಿ ಹಾಡು ಹೇಳಿದ್ದಾರೆ. ಇದನ್ನು ಕೇಳಿ ಕಾವ್ಯ ಶಾಕ್ ಆದರು. ರಾಶಿಕಾ ಎಕ್ಸ್ ಪ್ರೆಷನ್ ಬದಲಾಗಿದೆ.

ಇದನ್ನೂ ಓದಿ: ಗೆಲ್ಲೋ ಮೊದಲೇ ಬೀಗಿದ ಗಿಲ್ಲಿ ನಟ; ಕೊನೆಗೆ ಸಿಕ್ಕಿದ್ದು ಸೋಲು

ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ಇಬ್ಬರೂ ಫಿನಾಲೆ ತಲುಪೋ ಕನಸು ಕಾಣುತ್ತಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 9 ಮಂದಿ ಇದ್ದಾರೆ. ಈ ವಾರ, ಮುಂದಿನ ವಾರ ಹಾಗೂ ಫಿನಾಲೆ ವಾರದ ಮಧ್ಯದಲ್ಲಿ ಒಬ್ಬರು ಎಲಿಮಿನೇಟ್ ಆಗುವ ಸಾಧ್ಯತೆಯಿದೆ. ಫಿನಾಲೆಯಲ್ಲಿ ಆರು ಮಂದಿ ಇದ್ದರೂ ಅಚ್ಚರಿ ಏನಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *