ರಕ್ಷಿತಾ ಶೆಟ್ಟಿ (ರಕ್ಷಿತಾ ಶೆಟ್ಟಿ) ಅವರ ಆಟದಲ್ಲಿ ಸಂಪೂರ್ಣ ಬದಲಾವಣೆ ಕಾಣುತ್ತಿದೆ. ಮೊದಲಿನ ರಕ್ಷಿತಾ ಶೆಟ್ಟಿಗೂ ಈಗಿನ ರಕ್ಷಿತಾ ಶೆಟ್ಟಿಗೂ ತುಂಬಾನೇ ವ್ಯತ್ಯಾಸ ಇದೆ. ಇದನ್ನು ಅನೇಕರು ಗಮನಿಸಿದ್ದಾರೆ. ಈಗ ಅವರು ನಡೆದುಕೊಂಡ ರೀತಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಅನೇಕರು ರಕ್ಷಿತಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅವರು ತುಂಬಾ ಕೆಳಮಟ್ಟದಲ್ಲಿ ಯೋಚಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಕ್ಷಿತಾ ಶೆಟ್ಟಿ ಅವರು ಸದ್ಯ ಸೀಕ್ರೆಟ್ ರೂಂನಲ್ಲಿ ಇದ್ದಾರೆ. ಈ ವಾರ ಅವರು ಮತ್ತೆ ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಸಾಧ್ಯತೆಯಿದೆ. ಡಿಸೆಂಬರ್ 19 ರ ಎಪಿಸೋಡ್ ನಲ್ಲಿ ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಬಿಗ್ ಬಾಸ್ ಗೆ ಟಾಸ್ಕ್ ನೀಡಿದ್ದಾರೆ. ಇದರ ಅನುಸಾರ ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಸೀಕ್ರೆಟ್ ರೂಂನಿಂದ ಬಿಗ್ ಬಾಸ್ ಮನೆ ಒಳಗೆ ಹೋಗಿ ಹರಡಿ ಬರಬೇಕು.
ಇದು ಯಾರ ವೈಯಕ್ತಿಕ ಮೇಕಪ್ ಕಿಟ್? ಈ ಹೈಪರ್ ಅಹಂಕಾರದ ಪ್ರಮಾದಕ್ಕೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಈ ವಾರಾಂತ್ಯದ ಪಠ್ಯಕ್ರಮ ಮಾತ್ರವಲ್ಲದೆ ಉಳಿದವುಗಳಿಗೆ ಟೋನ್ ಅನ್ನು ಹೊಂದಿಸುತ್ತದೆ #BBK12
PS: ಅಷ್ಟೂ ಹಾಳು ಮಾಡೋ ಆಸೆ ಇದ್ರೆ ಅವ್ರ್ದೇ ಪರ್ಸನಲ್ ಸಾಮಾನುಗಳನ್ನು ಹಾಲ್ಮಾಡಿಕೊಂಡು ಕಾಸ ಮಾಡ್ಬೇಕಾಯ್ತು ಅಲ್ವಾ? pic.twitter.com/1siA6LHKFZ
— ವಿಷು (@ಬೆಂಗಳೂರುಬಾಯ್8) ಡಿಸೆಂಬರ್ 19, 2025
ಇದನ್ನು ಕೇಳಿದ ರಕ್ಷಿತಾ ಶೆಟ್ಟಿ ಅವರು ಸಾಕಷ್ಟು ಎಗ್ಸೈಟ್ ಆದರು. ಸಿಕ್ಕಿದ್ದೇ ಚಾನ್ಸ್ ಎಂದು ಇಡೀ ಮನೆಯ ಥರ್ಮಕೋಲ್ ಚೂರು, ಪೇಪರ್ ಕಸವನ್ನು ಹರಡಿದರು. ಬಿಗ್ ಬಾಸ್ ಕೊಟ್ಟ ಟಾಸ್ಕ್ ಆದ್ದರಿಂದ ಮಾಡಲೇಬೇಕಿತ್ತು. ಆದರೆ, ಅವರು ಕೆಲವು ಮಹಿಳಾ ಸ್ಪರ್ಧಿಗಳ ವೈಯಕ್ತಿಕ ಮೇಕಪ್ ಬ್ರಷ್‌ಗಳನ್ನು ನೆಲಕ್ಕೆ ಹರಡಿದ್ದಾರೆ. ಇದನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ‘ನಿನಗೆ ಮಾನ-ಮಾರ್ಯಾದೆ ಏನೂ ಇಲ್ಲ’; ಗಿಲ್ಲಿಗೆ ಗಂಭೀರವಾಗಿಯೇ ಹೇಳಿದ ಕಾವ್ಯ
ಬ್ರಶ್ ನೆಲದ ಮೇಲೆ ಬಿದ್ದಿದ್ದನ್ನು ನೋಡಿದಾಗ ರಾಶಿಗೆ ಸಾಕಷ್ಟು ಬೇಸರವಾಯಿತು. ‘ಅವೆಲ್ಲ ನನ್ನ ಬ್ರಶ್‌ಗಳು. ಇದನ್ನು ಹೇಗೆ ಮರು ಜೋಡಿಸೋದು’ ಎಂದು ಅವರು ತಾವು ಕೇಳಿಕೊಂಡರು. ಎಲ್ಲಕ್ಕಿಂತ ಮುಖ್ಯವಾಗಿ ಆ ಎಲ್ಲಾ ಬ್ರಶ್‌ಗಳ ಮುಖಕ್ಕೆ ಬಳಕೆ ಮಾಡೋದು. ನೆಲಕ್ಕೆ ಬಿದ್ದಾಗ ಧೂಳು-ಮಣ್ಣುಗಳು ಅದಕ್ಕೆ ಸೇರಿಕೊಳ್ಳಬಹುದು. ನಂತರ ಅದನ್ನು ಮುಖಕ್ಕೆ ಬಳಸಿದರೆ ಅಲರ್ಜಿ ಆಗಬಹುದು. ಇನ್ನು ಕಷ್ಟ ಪಟ್ಟು ದುಡಿದ ಹಣದಿಂದ ಮೇಕಪ್ ಕಿಟ್ ಗಳನ್ನು ಖರೀದಿಸಬೇಕು. ಇದನ್ನು ಹಾಳು ಮಾಡೋದು ಎಷ್ಟು ಸರಿ ಎಂದು ಅನೇಕರು ಕೇಳಿದ್ದಾರೆ. ರಕ್ಷಿತಾ ಈ ಕೀಳು ಬುದ್ಧಿಯನ್ನು ಬಿಡಬೇಕು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.