ರಾಮ್ ಚರಣ್ (ರಾಮ್ ಚರಣ್) ಅವರ ಮನೆಯಲ್ಲಿ ಈಗ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ರಾಮ್ ಹಾಗೂ ಅವರ ಪತ್ನಿ ಉಪಾಸನಾ ಅವಳಿ ಮಕ್ಕಳಿಗೆ ಪಾಲಕರಾಗಿದ್ದಾರೆ. ಈ ಮಧ್ಯೆ ಅವರು ನಲುಗಿ ಹೋಗುವ ಘಟನೆ ನಡೆದಿದೆ. ರಾಮ್ ಚರಣ್ ಅವರು ತಮ್ಮ ಮೊದಲ ಮಗು ಕ್ಲಿನ್‌ಕಾರಾಳನ್ನು ಆಸ್ಪತ್ರೆಗೆ ಕರೆದು ತರುತ್ತಿದ್ದರು. ಈ ವೇಳೆ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಈ ಘಟನೆ ಶಾಕಿಂಗ್ ಎನಿಸಿದೆ. ಇದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ರಾಮ್ ಚರಣ್ ಮುಖದಲ್ಲಿ ಭಯ ಸ್ಪಷ್ಟವಾಗಿ ಕಾಣಿಸಿದೆ.
ರಾಮ್ ಚರಣ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಾಗಿದೆ. ಅವರು ಎಲ್ಲೇ ಹೋದರೂ ಫ್ಯಾನ್ಸ್ ಹಾಜರಿರುತ್ತಾರೆ. ಅವರನ್ನು ನೋಡಬೇಕು, ಭೇಟಿ ಮಾಡಬೇಕು ಎಂದು ಫ್ಯಾನ್ಸ್ ಪ್ರಯತ್ನಿಸುತ್ತಾರೆ. ಅದೇ ರೀತಿ ಉಪಾಸನಾ ಅಡ್ಮಿಟ್ ಆಗಿರೋ ಆಸ್ಪತ್ರೆಯ ಎದುರು ದೊಡ್ಡ ಸಂಖ್ಯೆಯ ಫ್ಯಾನ್ಸ್ ನೆರೆದಿದ್ದರು.
ರಾಮ್ ಚರಣ್ ಅವರು ಮನೆಯಿಂದ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಅವರ ಕೈಯಲ್ಲಿ ಎರಡು ವರ್ಷದ ಮಗಳು ಕೂಡ ಇದ್ದರು. ಆಸ್ಪತ್ರೆ ಬಳಿ ಸಾವಿರಾರು ಜನರು ಸೇರಿದ್ದರು. ಇದನ್ನು ನೋಡಿ ರಾಮ್ ಚರಣ್ ಶಾಕ್ ಆಗಿದ್ದಾರೆ. ರಾಮ್ ಚರಣ್ ಅವರ ಭದ್ರತಾ ಸಿಬ್ಬಂದಿ, ಪೊಲೀಸರು ಎಷ್ಟು ಪ್ರಯತ್ನಿಸಿದರೂ ಅಭಿಮಾನಿಗಳನ್ನು ದೂರಕ್ಕೆ ತಳ್ಳಲು ಸಾಧ್ಯವಾಗಿಲ್ಲ.
#ರಾಮ್ ಚರಣ್ ತನ್ನ ನವಜಾತ ಅವಳಿ ಮಕ್ಕಳನ್ನು ಭೇಟಿ ಮಾಡಲು ಆಸ್ಪತ್ರೆಗೆ ಹೋಗುತ್ತಿದ್ದಾಗ ತನ್ನ 2 ವರ್ಷದ ಮಗಳನ್ನು ಹೊತ್ತುಕೊಂಡು ಹೋಗುತ್ತಿದ್ದಾಗ, ಅಭಿಮಾನಿಗಳು ಅವನ ಸುತ್ತಲೂ ಗುಂಪುಗೂಡಿದರು, ಪರಿಸ್ಥಿತಿಯ ಬಗ್ಗೆ ಯಾವುದೇ ಕಾಳಜಿಯಿಲ್ಲದೆ ಸೆಲ್ಫಿ ಕ್ಲಿಕ್ ಮಾಡುವ ಮೂಲಕ ಅವನಿಗೆ ಮತ್ತು ಅವನ ಪುಟ್ಟ ಮಗಳಿಗೆ ಕಷ್ಟವಾಯಿತುpic.twitter.com/7E3LNey3po
ಯಾರಿಗೆ ಅವಮಾನ…
– ದೈನಂದಿನ ಸಂಸ್ಕೃತಿ (@DailyCultureYT) ಫೆಬ್ರವರಿ 1, 2026
ಅಭಿಮಾನಿಗಳ ಕಿರುಚಾಟ, ಕೂಗಾಟ, ತಳ್ಳಾಟದ ಮಧ್ಯೆಯೇ ಅವರು ಆಸ್ಪತ್ರೆಗೆ ಬಂದಿದ್ದಾರೆ. ರಾಮ್ ಚರಣ್ ಒಬ್ಬರೇ ಇದ್ದ ಇದನ್ನು ಹೇಗೋ ಮ್ಯಾನೇಜ್ ಮಾಡಿದ್ರು. ಆದರೆ, ಅವರ ಬಳಿ ಮಗು ಇತ್ತು. ಇದನ್ನು ಕರೆದುಕೊಂಡು ಸೇಫ್ ಆಗಿ ಆಸ್ಪತ್ರೆ ಸೇರೋದು ದೊಡ್ಡ ಸವಾಲಾಗಿತ್ತು. ಅವರು ಕರೆದುಕೊಂಡು ಹೋಗುವ ವೇಳೆಗೆ ಅವರು ಸುಸ್ತಾಗಿ ಹೋಗಿದ್ದಾರೆ.
ಇದನ್ನೂ ಓದಿ: ರಾಮ್ ಚರಣ್ ಅವರನ್ನು ಮುತ್ತಿಕೊಂಡ ಅಭಿಮಾನಿಗಳು: ವಿಡಿಯೋ
ಸದ್ಯ ಈ ವಿಡಿಯೋ ಚರ್ಚೆ ಆಗುತ್ತಿದೆ. ಮಗು ಎಷ್ಟು ಗಾಬರಿ ಆಗಿರಬಹುದು ಎಂದು ಅನೇಕರು ನೋಡಿದ್ದಾರೆ. ಇನ್ನೂ ಕೆಲವರು ರಾಮ್ ಚರಣ್ ಅಭಿಮಾನಿಗಳು ಅನಾಗರೀಕರ ರೀತಿ ನಡೆದುಕೊಂಡಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ಇದು ಚರ್ಚೆಯ ವಿಷಯವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.