
ರಾಮ್ ಚರಣ್ ಅವರಿಗೆ ಇಂದು (ಮಾರ್ಚ್ 27) ಜನ್ಮದಿನ. ಅವರು ಪೆದ್ದಿ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಕಡೆಯಿಂದ ಇಂದು ಏನಾದರೂ ಅಪ್ಡೇಟ್ ಮಾಡಬಹುದು ಎಂದು ಚಿತ್ರದಲ್ಲಿ ನಿರೀಕ್ಷಿಸಲಾಗಿದೆ. ಅವರ ಬರ್ತ್ಡೇ ಸಂದರ್ಭದಲ್ಲಿ ಅವರ ಸಂಭಾವನೆ ಹಾಗೂ ಅವರ ಐಷಾರಾಮಿ ಜೀವನದ ಬಗ್ಗೆ ಚರ್ಚೆಗಳು ನಡೆದಿವೆ. ಆ ಬಗ್ಗೆ ಇಲ್ಲಿದೆ ವಿವರ.
ರಾಮ್ ಚರಣ್ ಅವರ ಪ್ರತಿ ತಿಂಗಳಿಗೆ 3 ಕೋಟಿ ರೂಪಾಯಿ. ವಿವಿಧ ಉದ್ಯಮಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಅವರ ಆಸ್ತಿ 1400 ಕೋಟಿ ರೂಪಾಯಿ. ‘ಆರ್ಆರ್ಆರ್’ ಚಿತ್ರಕ್ಕಾಗಿ ಬರೋಬ್ಬರಿ 45 ಕೋಟಿ ರೂಪಾಯಿ ಚಾರ್ಜ್ ಮಾಡಲಾಗಿತ್ತು. ರಾಮ್ ಚರಣ್ ಅವರು ಹಲವು ಬ್ರ್ಯಾಂಡ್ಗಳ ಪ್ರಚಾರ ಮಾಡುತ್ತಾರೆ. ಅವರು ಒಂದಲ್ಲ ಎರಡಲ್ಲ 34 ಬ್ರ್ಯಾಂಡ್ಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ ಎಂದರೆ ನಂಬಲೇಬೇಕು. ಪೆಪ್ಸಿ, ಅಪೊಲೊ ಜಿಯಾ, ಫ್ರೂಟಿ ಮೊದಲಾದ ಬ್ರ್ಯಾಂಡ್ಗಳನ್ನು ಅವರು ಪ್ರಮೋಟ್ ಮಾಡುತ್ತಾರೆ.
ಅವರ ನಿರ್ಮಾಣ ಸಂಸ್ಥೆ. ಜುಬ್ಲಿ ಹಿಲ್ಸ್ನಲ್ಲಿ 25 ಸಾವಿರ ಚದರ ಅಡಿಯ ಜಾಗ ಹೊಂದಿದ್ದು, ಐಷಾರಾಮಿ ಮನೆ ಇದೆ. ಇದರ ಬೆಲೆ 38 ಕೋಟಿ ರೂಪಾಯಿ. ಮುಂಬೈನಲ್ಲಿ ಮನೆ ಹೊಂದಿರುವ ಕೆಲವು ದಕ್ಷಿಣದ ಸ್ಟಾರ್ಗಳಲ್ಲಿ ರಾಮ್ ಚರಣ್ ಹೆಸರೂ ಇದೆ. ಅವರು ಮುಂಬೈನಲ್ಲಿ ದುಬಾರಿ ಪೆಂಟ್ ಹೌಸ್. ಮುಂಬೈ ಹೋದಾಗ ಇಲ್ಲಿ ವಾಸಿಸುತ್ತಾರೆ.
ರಾಮ್ ಚರಣ್ ಬಳಿ ದುಬಾರಿ ಕಾರು ಮತ್ತು ಜೆಟ್ಗಳಿವೆ. TRUJet ಹೆಸರಿನ ಏರ್ಲೈನ್ಸ್ನ ರಾಮ್ ಚರಣ್ ಹೊಂದಿದ್ದರು. ಇವರ ಬಳಿ ಖಾಸಗಿ ಜೆಟ್ ಕೂಡ ಇದೆ. ಇದರ ಜೊತೆಗೆ ಮರ್ಸಿಡೀಸ್ ಬೆಂಜ್ ಮೇಬ್ಯಾಷ್ ಜಿಎಲ್ಎಸ್ 600 ಇದೆ. ಇದರ ಬೆಲೆ 4 ಕೋಟಿ ರೂಪಾಯಿಗೂ ಅಧಿಕವಾಗಿದೆ. ಆಡಿ, ರೋಲ್ಸ್ ರಾಯ್ಸ್ ಪ್ಯಾಂಟಂ, ರೇಂಜ್ ರೋವರ್ ಆಟೋಬಯೋಗ್ರಫಿ, ಆಸ್ಟನ್ ಮಾರ್ಟಿನ್, ಫೆರಾರಿ ಕಾರುಗಳ ಒಡೆಯ ಅವರಾಗಿದ್ದಾರೆ.
ಇದನ್ನೂ ಓದಿ: ರಾಮ್ ಚರಣ್ ಒಟ್ಟೂ ಆಸ್ತಿ ಎಷ್ಟು? ಗಳಿಗೆಲ್ಲ ಆಗುತ್ತೆ?
ರಾಮ್ ಚರಣ್ ಅವರ ಪತ್ನಿ ಉಪಾಸನಾ ಜೊತೆ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಕ್ಲಿನ್ಕಾರ ಹೆಸರಿನ ಮಗಳು ಕೂಡ ಇದ್ದಾಳೆ. ಈಗ ಅವಳಿ ಮಕ್ಕಳು ಜನಿಸಿದ್ದಾರೆ. ಸಿನಿಮಾ ವಿಚಾರಕ್ಕೆ ಬರೋದಾದರೆ ರಾಮ್ ಚರಣ್ ಸದ್ಯ ‘ಗೇಮ್ ಚೇಂಜರ್’ ಸಿನಿಮಾ ಸೋಲಿನ ಬೇಸರದಲ್ಲಿದ್ದಾರೆ. ಪೆದ್ದಿ ಚಿತ್ರದಲ್ಲಿ ಅವರು ಬ್ಯೂಸಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.