ಯಶ್ (ಯಶ್) ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ. ಬಹಳ ಮುಂಚಿತವಾಗಿಯೇ ‘ಟಾಕ್ಸಿಕ್’ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಪ್ರಕಟಿಸಿತ್ತು. ಆದರೆ ಇದೀಗ ಕೆಲವು ಸಿನಿಮಾಗಳು ‘ಟಾಕ್ಸಿಕ್’ ಜೊತೆ ಸ್ಪರ್ಧೆಗೆ ಬೀಳುತ್ತಿವೆ. ರಣವೀರ್ ಸಿಂಗ್ ನಟನೆಯ ‘ಧುರಂಧರ’ ಸಿನಿಮಾದ ಎರಡನೇ ಭಾಗ ಮಾರ್ಚ್ 19 ರಂದು ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ. ಅಡಿವಿಶೇಷ ನಟನೆಯ ‘ಡಕೈತ್’ ಸಿನಿಮಾ ಕೂಡ ಅದೇ ದಿನ ಬಿಡುಗಡೆ ಆಗಲಿದೆ. ಇದೀಗ ಮತ್ತೊಬ್ಬ ಸ್ಟಾರ್ ನಟನ ಸಿನಿಮಾ ಸಹ ‘ಟಾಕ್ಸಿಕ್’ಗೆ ಸ್ಪರ್ಧೆ ಒಡ್ಡಲು ಬರುತ್ತಿದೆ.
ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ‘ಪೆದ್ದಿ’ ಸಿನಿಮಾ, ‘ಟಾಕ್ಸಿಕ್’ ಬಿಡುಗಡೆ ಆದ ಒಂದು ವಾರದ ಬಳಿಕ ಬಿಡುಗಡೆ ಆಗಲಿದೆ. ಅಂದರೆ ಮಾರ್ಚ್ 27ಕ್ಕೆ ಸಿನಿಮಾ ತೆರೆಗೆ ಬರಲಿದೆ. ಒಂದು ವಾರದ ಬಳಿಕ ಬಿಡುಗಡೆಯಾದರೂ ಸಹ ಈ ಸಿನಿಮಾ ‘ಟಾಕ್ಸಿಕ್’ ಜೊತೆ ಸ್ಪರ್ಧೆಗೆ ಬೀಳುವ ಸಾಧ್ಯತೆ ದಟ್ಟವಾಗಿದೆ. ‘ಪೆದ್ದಿ’ ಸಿನಿಮಾಕ್ಕೆ ಒಳ್ಳೆಯ ಕ್ರೇಜ್ ಇದ್ದು, ‘ಟಾಕ್ಸಿಕ್’ಗೆ ಈ ಸಿನಿಮಾ ಪ್ರಬಲ ಸ್ಪರ್ಧೆಯನ್ನೇ ಒಡ್ಡುವ ಸಾಧ್ಯತೆ ಇದೆ.
ಇದನ್ನೂ ಓದಿ:’ಚಿಕಿರಿ’ ಹಾಡಿನ ಶೂಟ್ಗೆ ರಾಮ್ ಚರಣ್ ಹಾಗೂ ತಂಡ ಪಟ್ಟ ಕಷ್ಟ ಅಷ್ಟಿಷ್ಟಲ್ಲ..
ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಚಿಕಿರಿ-ಚಿಕಿರಿ ಹಾಡು ಕೇಳಲು ಸಖತ್ ವೈರಲ್ ಆಗಿದೆ. ಈ ಮೊದಲು ಬಿಡುಗಡೆ ಆಗಿದ್ದ ಸಿನಿಮಾದ ಸಣ್ಣ ಟೀಸರ್ ಸಹ ಸಖತ್ ಹಿಟ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಆದರೆ ಇತ್ತೀಚೆಗಷ್ಟೇ ‘ಪೆದ್ದಿ’ ಸಿನಿಮಾದ ನಿಗದಿತ ವೇಗದಲ್ಲಿ ನಡೆಯುತ್ತಿಲ್ಲ, ಶೂಟಿಂಗ್ ಎಂಬ ಸಿನಿಮಾದ ಬಿಡುಗಡೆ ತಡವಾಗುತ್ತಿದೆ ಎಂಬ ಸುದ್ದಿ ಹರಿದಾಡಿತ್ತು. ಆದರ ಬೆನ್ನಲ್ಲೆ ಇದೀಗ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದೆ.
‘ಪೆದ್ದಿ’ ಸಿನಿಮಾದಲ್ಲಿ ರಾಮ್ ಚರಣ್ ಜೊತೆಗೆ ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ‘ಉಪ್ಪೆನ’ ಸಿನಿಮಾ ನಿರ್ದೇಶಿಸಿ ಗಮನ ಸೆಳೆದಿದ್ದ ಬುಚ್ಚಿಬಾಬು ಸನಾ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಕ್ರಿಕೆಟ್ ಪ್ರಧಾನ ಅಂಶವಾಗಿದೆ. ಹಳ್ಳಿಯ ಕ್ರಿಕೆಟ್ ಆಟಗಾರನೊಬ್ಬನ ಕಥೆ ‘ಪೆದ್ದಿ’ ಸಿನಿಮಾ ಒಳಗೊಂಡಿದೆ. ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದು, ಎಆರ್ ರೆಹಮಾನ್ ಸಂಗೀತ ನೀಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 12:32 pm, ಶುಕ್ರ, 19 ಡಿಸೆಂಬರ್ 25