ಭಾರತೀಯ ಚಿತ್ರರಂಗದ ಯಶಸ್ವಿ ನಿರ್ದೇಶಕ ಎಸ್.ಎಸ್. ರಾಜಮೌಳಿ (ಎಸ್‌ಎಸ್ ರಾಜಮೌಳಿ) ಅವರಿಗೆ ದೇವರ ಮೇಲೆ ನಂಬಿಕೆ ಇಲ್ಲ. ತಾನೊಬ್ಬ ನಾಸ್ತಿಕ ಎಂದು ಅವರು ಬಹಿರಂಗವಾಗಿ ಹೇಳಿದ್ದಾರೆ. ಇತ್ತೀಚೆಗೆ ‘ವಾರಾಣಸಿ’ (ವಾರಣಾಸಿ) ಸಿನಿಮಾದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜಮೌಳಿ ನೀಡಿದ ಒಂದು ಹೇಳಿಕೆಯಿಂದ ವಿವಾದ ಸೃಷ್ಟಿಯಾಗಿದೆ. ದೇವರ ಬಗ್ಗೆ ತಮಗೆ ನಂಬಿಕೆ ಇಲ್ಲ ಎಂದು ಅವರು ಹೇಳಿದರು. ಹನುಮಂತನ ಮೇಲೆ ತಮಗೆ ಕೋಪ ಬಂದಿದೆ ಎಂದು ಅವರು ಹೇಳಿದರು. ಅವರ ಮೇಲೆ ಕೇಸ್ ಹಾಕಲಾಗಿದೆ. ಈ ಎಲ್ಲ ಘಟನೆಗಳ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (ರಾಮ್ ಗೋಪಾಲ್ ವರ್ಮಾ) ಅವರು ಪ್ರತಿಕ್ರಿಯೆ. ಎಕ್ಸ್ (ಟ್ವಿಟರ್) ಮೂಲಕ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
‘ಭಾರತದಲ್ಲಿ ನಾಸ್ತಿಕನಾಗಿ ಇರುವುದು ಅಪರಾಧವಲ್ಲ ರಾಜಮೌಳಿ ಮೇಲೆ ವಿಷ ಉಗುಳುತ್ತಿರುವ ಆಸ್ತಿಕರು ತಿಳಿದುಕೊಳ್ಳಬೇಕು. ದೇವರನ್ನು ನಂಬಲ್ಲ ಎಂದು ಹೇಳಲು ರಾಜಮೌಳಿ ಅವರಿಗೆ ಸಂವಿಧಾನದ ಹಕ್ಕು ಇದೆ’ ಎಂದು ಹೇಳುವ ಮೂಲಕ ರಾಮ್ ಗೋಪಾಲ್ ವರ್ಮಾ ಅವರು ರಾಜಮೌಳಿ ಪರ ಬ್ಯಾಟ್ ಬೀಸಿದ್ದಾರೆ. ಅವರ ‘ಎಕ್ಸ್’ ಪೋಸ್ಟ್ ವೈರಲ್ ಆಗುತ್ತಿದೆ.
ದೇವರನ್ನು ನಂಬದೇ ಇರುವ ರಾಜಮೌಳಿ ದೇವರ ಬಗ್ಗೆ ಯಾಕೆ ಸಿನಿಮಾ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. ಅದ ರಾಮ್ ಗೋಪಾಲ್ ವರ್ಮಾಕ್ಕೂ ಉತ್ತರ ನೀಡಿದ್ದಾರೆ. ‘ಆ ಲಾಜಿಕ್ ಪ್ರಕಾರ ಹೇಳುವುದಾದರೆ ಗ್ಯಾಂಗ್ ಸ್ಟರ್ ಸಿನಿಮಾ ಮಾಡಲು ನಿರ್ದೇಶಕ ಕೂಡ ಗ್ಯಾಂಗ್ ಸ್ಟರ್ ಆಗಬೇಕಾ? ಹಾರರ್ ಸಿನಿಮಾ ಮಾಡಲು ನಿರ್ದೇಶಕ ದೆವ್ವ ಆಗಿರಬೇಕಾ’ ಎಂದು ರಾಮ್ ಗೋಪಾಲ್ ವರ್ಮಾ ಅವರು ಕೇಳಿದ್ದಾರೆ.
ಎಲ್ಲಾ ವಿಷವನ್ನು ನಂಬಿದವರು ಉಗುಳುವ ಸನ್ನಿವೇಶದಲ್ಲಿ @ssrajamouli ಭಾರತದಲ್ಲಿ ನಾಸ್ತಿಕರಾಗಿರುವುದು ಅಪರಾಧವಲ್ಲ ಎಂದು ಅವರು ತಿಳಿದಿರಬೇಕು. ಸಂವಿಧಾನದ 25 ನೇ ವಿಧಿಯು ನಂಬದಿರುವ ಹಕ್ಕನ್ನು ರಕ್ಷಿಸುತ್ತದೆ ಆದ್ದರಿಂದ ಅವರು ನಂಬುವುದಿಲ್ಲ ಎಂದು ಹೇಳುವ ಎಲ್ಲಾ ಹಕ್ಕುಗಳನ್ನು ಹೊಂದಿದ್ದಾರೆ…
– ರಾಮ್ ಗೋಪಾಲ್ ವರ್ಮಾ (@RGVzoomin) ನವೆಂಬರ್ 21, 2025
‘ರಾಜಮೌಳಿ ಅವರು ದೇವರನ್ನು ನಂಬದಿದ್ದರೂ ಅವರಿಗೆ ದೇವರು 100 ಪಟ್ಟು ಹೆಚ್ಚು ಸಂಪತ್ತು ಮತ್ತು ಅಭಿಮಾನಿಗಳನ್ನು ನೀಡಿದ್ದಾರೆ. ಸುಮಾರು ಭಕ್ತರು ನೂರು ಜನ್ಮದಲ್ಲಿ ಕೂಡ ಇದನ್ನು ಪಡೆಯಲು ಆಗಲ್ಲ. ಹಾಗಾದರೆ.. ದೇವರು ಭಕ್ತರಿಗಿಂತ ನಾಸ್ತಿಕರನ್ನು ಹೆಚ್ಚು ಪ್ರೀತಿಸುತ್ತಾನೆ. ಅಥವಾ ದೇವರು ತಲೆ ಕೆಡಿಸಿಕೊಳ್ಳುವುದಿಲ್ಲ. ಅಥವಾ ಯಾರು ನಂಬುತ್ತಾರೆ ಯಾರು ನಂಬಲ್ಲ ಎಂದು ದೇವರು ಪಟ್ಟಿ ಮಾಡಿಕೊಳ್ಳಲ್ಲ’ ರಾಮ್ ಗೋಪಾಲ್ ವರ್ಮಾ
ಇದನ್ನೂ ಓದಿ: ವರ್ಷ ಪೂರ್ತಿ ‘ವಾರಾಣಸಿ’ ಸಿನಿಮಾ ಪ್ರಚಾರ ಮಾಡಿದ ರಾಜಮೌಳಿ
‘ರಾಜಮೌಳಿ ಬಗ್ಗೆ ದೇವರ ಸಮಸ್ಯೆ ಇಲ್ಲ ಎಂದಮೇಲೆ, ಸ್ವಯಂ ನಿಯೋಜಿತ ದೇವರ ದಲ್ಲಾಳಿಗಳು ಯಾಕೆ ಬಿಪಿ, ಅಲ್ಸರ್ ಬರಿಸಿಕೊಳ್ಳುತ್ತಿದ್ದಾರೆ? ದೇವರನ್ನು ನಂಬದೇ ಇರುವುದು ಇವರಿಗೆ ನಿಜವಾದ ಸಮಸ್ಯೆ ಅಲ್ಲ. ದೇವರನ್ನು ನಂಬದೆಯೇ ರಾಜಮೌಳಿ ಯಶಸ್ಸು ಕಂಡರು ಎಂಬುದು ಇವರಿಗೆ ನಿಜವಾದ ಸಮಸ್ಯೆಯಾಗಿದೆ. ಹುಚ್ಚನಂತೆ ಪ್ರಾರ್ಥಿಸಿದರೂ ಕೂಡ ಹೀನವಾಗಿ ಸೋತಿರುವವರಿಗೆ ಇದು ಭಯ ಹುಟ್ಟಿಸಿದೆ’ ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.